ನವದೆಹಲಿ, ಮಾ.11: ಬೈಕಿನಲ್ಲಿ ವಿಶ್ವ ಪರ್ಯಟನೆ ಹೊರಟಿದ್ದ ಸ್ಪೈನ್ ಮೂಲದ ಬ್ಲಾಗರ್ ಯುವತಿಯನ್ನು ಜಾರ್ಖಂಡಿನಲ್ಲಿ ಏಳು ಜನರು ಸೇರಿ ಸಾಮೂಹಿಕ ಅತ್ಯಾಚಾರಗೈದ ಘಟನೆ ನಡೆದಿದ್ದು, ಘಟನೆ ಸಂಬಂಧಿಸಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಯುವತಿ ತನ್ನ ಮೇಲಾದ ಹಲ್ಲೆ, ಅತ್ಯಾಚಾರ ಕೃತ್ಯದ ಬಗ್ಗೆ ವಿಡಿಯೋ ಮಾಡಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಗೆ ಕುಂದು ಬಂದಿದೆ.
28 ವರ್ಷದ ಯುವತಿ ಮತ್ತು ಆಕೆಯ ಬಾಯ್ ಫ್ರೆಂಡ್ ಜೊತೆಯಾಗಿ ಕಳೆದ ಆರು ತಿಂಗಳಿನಿಂದ ಭಾರತದಲ್ಲಿ ಪ್ರತ್ಯೇಕ ದ್ವಿಚಕ್ರ ವಾಹನಗಳಲ್ಲಿ ಸುತ್ತಾಡಿದ್ದರು. ಮಾ.2ರಂದು ಜಾರ್ಖಂಡ್ ರಾಜಧಾನಿ ರಾಂಚಿಯಿಂದ 300 ಕಿಮೀ ದೂರದ ದುಮ್ಕಾ ಜಿಲ್ಲೆಯ ಕುರುಮಹತ್ ಎಂಬಲ್ಲಿ ರಾತ್ರಿ ತಂಗಿದ್ದರು. ಸಂಜೆಯ ವೇಳೆಗೆ ಕಾಡು ಆವರಿಸಿದ ಜಾಗದಲ್ಲಿ ರಾತ್ರಿ ತಂಗಲು ಟೆಂಟ್ ಹಾಕಿದ್ದರು. 7.30ರ ವೇಳೆಗೆ ಹೊರಗೆ ಇಬ್ಬರು ಕಾಣಿಸಿಕೊಂಡಿದ್ದು ಆನಂತರ ಮೊಬೈಲಿನಲ್ಲಿ ಮಾತನಾಡುತ್ತಲೇ ಮತ್ತೆ ಐವರನ್ನು ಸ್ಥಳಕ್ಕೆ ಕರೆಸಿದ್ದಾರೆ. ಆನಂತರ, ಸ್ಥಳೀಯ ಭಾಷೆ ಮತ್ತು ನಡುವೆ ಇಂಗ್ಲಿಷ್ ಶಬ್ದಗಳನ್ನು ಮಾತನಾಡುತ್ತ ಹತ್ತಿರ ಬಂದಿದ್ದು ಜಗಳ ಶುರು ಮಾಡಿದ್ದಾರೆ.
ಯುವತಿಯ ಬಾಯ್ ಫ್ರೆಂಡ್ ಮೇಲೆ ಹಲ್ಲೆಗೈದು ಕಟ್ಟಿ ಹಾಕಿದ್ದಾರೆ. ನಂತರ, ಯುವತಿ ಮೇಲೂ ಹಲ್ಲೆಗೈದು ಸರಣಿಯಾಗಿ ಒಬ್ಬರ ಮೇಲೆ ಮತ್ತೊಬ್ಬರಂತೆ ಅತ್ಯಾಚಾರ ನಡೆಸಿದ್ದಾರೆ. 7.30ರಿಂದ ಹತ್ತು ಗಂಟೆಯ ವರೆಗೂ ಕೃತ್ಯ ಮುಂದುವರಿಸಿದ್ದಾರೆ. ಬಳಿಕ ಯುವಕರು ಅಲ್ಲಿಂದ ಬಿಟ್ಟು ಹೋಗಿದ್ದಾರೆ. ವಿದೇಶಿಗರು ಬಳಿಕ ನೇರವಾಗಿ ಸ್ಥಳೀಯ ಹನ್ಸಿದಿಯಾ ಠಾಣೆಗೆ ತೆರಳಿ ದೂರು ನೀಡಿದ್ದು, ತಡರಾತ್ರಿ ಪೊಲೀಸರು ಯುವತಿಯ ಹೇಳಿಕೆ ದಾಖಲು ಮಾಡಿದ್ದಾರೆ. ಕೃತ್ಯದ ಬಗ್ಗೆ ಯುವತಿ ಬಳಿಕ ವಿಡಿಯೋ ಮಾಡಿದ್ದು, ತನಗಾದ ಹಲ್ಲೆ, ಅತ್ಯಾಚಾರವನ್ನು ಹೇಳಿಕೊಂಡಿದ್ದಾಳೆ. ಯುವಕರು ಕುಡಿತದ ನಶೆಯಲ್ಲಿದ್ದರು. ಅಲ್ಲದೆ, ಕೃತ್ಯದ ಬಳಿಕ ತಮ್ಮಲ್ಲಿದ್ದ ಸ್ವಿಸ್ ಚೂರಿ, ವಾಚ್, ಪ್ಲಾಟಿನಂ ರಿಂಗ್, ಕಿವಿಯೋಲೆ, ಬ್ಲಾಕ್ ಪರ್ಸ್, ಕ್ರೆಡಿಟ್ ಕಾರ್ಡ್, 11 ಸಾವಿರ ರೂ. ನಗದು, 300 ಯುಎಸ್ ಡಾಲರ್ ಕರೆನ್ಸಿಯನ್ನೂ ಕದ್ದೊಯ್ದಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಳು.
ದುಮ್ಕಾ ಸಾಮೂಹಿಕ ಅತ್ಯಾಚಾರ ಪ್ರಕರಣ : ವರದಿಯಲ್ಲಿ, ನಡೆಯುತ್ತಿರುವ ತನಿಖೆಯ ಸಮಯದಲ್ಲಿ ಸಂತ್ರಸ್ತೆಯ ಭದ್ರತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮಿಶ್ರಾ ತಂಡವು ಪ್ರಯತ್ನಗಳನ್ನು ಮಾಡಿದೆ ಎಂದು ಹೈಲೈಟ್ ಮಾಡಲಾಗಿದೆ. ಹೆಚ್ಚುವರಿಯಾಗಿ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 164 ರ ಅಡಿಯಲ್ಲಿ ಆಕೆಯ ಹೇಳಿಕೆಯನ್ನು ದಾಖಲಿಸಲು ಸಹಾಯವನ್ನು ಒದಗಿಸಲಾಗಿದೆ. ಸಂತ್ರಸ್ತರಿಗೆ ₹10 ಲಕ್ಷ ಪರಿಹಾರ ನೀಡುವಂತೆ ಮಿಶ್ರಾ ಆದೇಶಿಸಿದರು.
ದುಷ್ಕರ್ಮಿಗಳನ್ನು ಶೀಘ್ರವಾಗಿ ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಲಾಗುವುದು ಎಂದು ಸಂತ್ರಸ್ತೆಗೆ ಭರವಸೆ ನೀಡಲಾಯಿತು ಎಂದು ವರದಿಯಲ್ಲಿ ಒತ್ತಿಹೇಳಲಾಗಿದೆ. ಆಕೆಯ ಭಾವನಾತ್ಮಕ ಯಾತನೆಯ ಹೊರತಾಗಿಯೂ, ಬಲಿಪಶುವಿನ ದೈಹಿಕ ಸ್ಥಿತಿಯು ಸ್ಥಿರವಾಗಿದೆ ಎಂದು ವರದಿಯಾಗಿದೆ, ನಡೆಯುತ್ತಿರುವ ವೈದ್ಯಕೀಯ ಪರೀಕ್ಷೆಗಳು.
Discover more from Coastal Times Kannada
Subscribe to get the latest posts sent to your email.
Discussion about this post