ಕವಿತಾ ಟ್ರಸ್ಟ್ ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ `ಸಾದ್ ಸೈಮಾಚೊ’ (ಪ್ರಕೃತಿಯ ನಾದಗಳು) ಎಂಬ ಕಾವ್ಯ ಮತ್ತು ಕಥಾ ಪ್ರಸ್ತುತಿಯ ವಿಭಿನ್ನ ಪ್ರಯೋಗವನ್ನು ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನದ ಸಹಕಾರದಲ್ಲಿ ಆಗಸ್ಟ್ 06 ರಂದು ನಡೆಸಿತು. ಗೋವಾದ ಢಾಯಿ ಆಖಾರ್ (ಎರಡುವರೆ ಅಕ್ಷರ) ತಂಡವು ಪ್ರಕೃತಿಯ ದನಿಗಳಿಗೆ ಸಂಬಂಧಪಟ್ಟ ಹಿಂದಿ ಮತ್ತು ಕೊಂಕಣಿಯ ಸಾಹಿತ್ಯವನ್ನು ಸಾದರಪಡಿಸಿದರು.
ಕೇದಾರ್‌ನಾಥ್ ಸಿಂಗ್ ಇವರ ‘ಬಾಫ್, ಸಲೀಲ್ ಚತುರ್ವೇದಿಯ ‘ಕಹಾಂ ಗಯೀ ಓ ನದೀ ಕೀ ಧಾರ್’ ಮತ್ತು
ಜಾರ್ಕಂಡಿನ ಜಾಸಿಂತಾ ಕೆರ್ಕಟ್ಟಾ ಇವರ ನದೀ, ಪಹಾಡ್ ಔರ್ ಬಜಾರ್’ – ಹಿಂದಿ ಕವಿತೆಗಳನ್ನು ಹಾಗೂ ಮಮತಾ ವೆರ್ಲೇಕರ್ ಇವರ ‘ಗುಪೀತ್’, ‘ಫೊಂಡ್ಕುಲಾಂ’ ಮತ್ತು ಪ್ರಕಾಶ್ ಪರಿಯೆಂಕಾರ್ ಇವರ ‘ಪಾಣಿ ಆತಾಂ ದೆಂವಾ’ ಹಾಗೂ ‘ಹಿ ರಾನ್‌ಕಾಣಿ’ ಕವಿತೆಗಳನ್ನು ಪ್ರಸ್ತುತಪಡಿಸಿದರು.
ಜ್ಞಾನಪೀಠ ಪುರಸ್ಕಾರ ವಿಜೇತ ಸಾಹಿತಿ ದಾಮೋದರ ಮಾವೊ ಇವರ ಕತೆ ‘ಭುರ್ಗಿಂ ಮುಗಲಿಂ ತಿಂ’ ವಿಷಯ ಮತ್ತು ಪ್ರಸ್ತುತಿಯ ಕಾರಣಕ್ಕಾಗಿ ನರದ ಕೇಳುಗರ ಕಣ್ಣಲ್ಲಿ ನೀರೂರಿಸಿತು. ಡಾ. ರಮಿತಾ ಗುರವ್, ಡಾ. ಮನೀಷಾ ಬೊರಾಟೆ ಮತ್ತು ಮಮತಾ ವರ್ಲೆಕಾ ಸುಂದರವಾಗಿ ಇವನ್ನು ವಾಚಿಸಿದರು. ಆರ್ತಿ ದಾಸ್ ಮತ್ತು ನಿಯತಿ ಪತ್ರ ಸಾಹಿತ್ಯ ಮತ್ತು ಸಾಹಿತಿಗಳ ಹಿನ್ನಲೆ ವಿವರಿಸಿದರು.
ಪ್ರತಿಷ್ಟಾನದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗುರು ಬಾಳಿಗಾ ಢಾಯಿ ಅಖಾರ್ ಸದಸ್ಯರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಕವಿತಾ ಟ್ರಸ್ಟ್ ಟ್ರಸ್ಟಿಗಳಾದ ವಿಲಿಯಮ್ ಪಾಯ್ಸ್ ಸ್ವಾಗತಿಸಿ, ವಿಕ್ಟರ್ ಮತಾಯಸ್ ವಂದಿಸಿದರು.
ನಂತರ ಸಾಹಿತ್ಯ ಅಕಾಡೆಮಿ ನವದೆಹಲಿ, ಕವಿತಾ ಟ್ರಸ್ಟ್ ಸಹಕಾರದಲ್ಲಿ ಆಯೋಜಿಸಿದ `ಲೋಕ: ವಿವಿಧ ಸ್ವರಗಳು’ ಎಂಬ ಜಾನಪದ ಕಾರ್ಯಕ್ರಮ ನಡೆಯಿತು. ನವ ಸಿದ್ಧಿ ಕಲಾ ತಂಡ ಮೈನಳ್ಳಿ ಇವರಿಂದ ಡಮಾಮ್, ಫುಗ್ಗಿ, ಜಾಕಯ್ ಮತ್ತು ಶಿಗೊ ಆಟಗಳ ಪ್ರಸ್ತುತಿ ನಡೆಯಿತು. ಕಲಾವಿದ ಸುನೀಲ್ ಸಿದ್ದಿ ಈ ಪ್ರಕಾರಗಳ ವಿವರಣೆ ನೀಡಿದರು. ಅಕಾಡೆಮಿಯ ಕೊಂಕಣಿ ಸಲಹಾ ಸಮಿತಿಯ ಅಧ್ಯಕ್ಷ ಮೆಲ್ವಿನ್ ರೊಡ್ರಿಗಸ್ ಕಲಾವಿದರನ್ನು ಗೌರವಿಸಿದರು. ಸದಸ್ಯಾ ಎಚ್ಚೆಮ್ ಪೆರ್ನಾಳ್ ಸ್ವಾಗತಿಸಿದರು. ಇನ್ನೋರ್ವ ಸದಸ್ಯ ಸ್ಟ್ಯಾನಿ ಬೇಳ ಧನ್ಯವಾದವನ್ನಿತ್ತರು
Discover more from Coastal Times Kannada
Subscribe to get the latest posts sent to your email.
Discussion about this post