ಪಥನಾಂತಿಟ್ಟ: ಕೇರಳ ಪೊಲೀಸರು ಅಪ್ರಾಪ್ತ ಕ್ರೀಡಾಪಟುವಿನ ಮೇಲೆ 5 ವರ್ಷಗಳ ಕಾಲ ಅತ್ಯಾಚಾರ ಎಸಗಿದ ಆರೋಪದ ಮೇಲೆ ಸಹಪಾಠಿಗಳು ಮತ್ತು ಆಕೆಯ ತರಬೇತುದಾರರು ಸೇರಿದಂತೆ 64 ವ್ಯಕ್ತಿಗಳ ವಿರುದ್ಧ 4 ಎಫ್ಐಆರ್ ದಾಖಲಿಸಿದ್ದಾರೆ. ಎರಡು ತಿಂಗಳ ಹಿಂದೆ 18 ವರ್ಷ ತುಂಬಿದ ಯುವತಿ ಪಥನಾಂತಿಟ್ಟದಲ್ಲಿ 2 ವರ್ಷಗಳ ಅವಧಿಯಲ್ಲಿ ಹಲವು ಬಾರಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ ಎನ್ನಲಾಗಿದೆ. 5 ವರ್ಷಕ್ಕಿಂತ ಹೆಚ್ಚು ವರ್ಷಗಳಿಂದ ಕೋಚ್ಗಳಿಂದ ಹಾಗೂ ತನ್ನೊಂದಿಗೆ ಸ್ವಿಮ್ಮಿಂಗ್ ಕ್ಲಾಸ್ಗೆ ಬರುತ್ತಿದ್ದವರಿಂದ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಅಪ್ರಾಪ್ತ ಯುವತಿ ಹೇಳಿಕೊಂಡಿದ್ದಾಳೆ.
ಪೊಲೀಸರ ಪ್ರಕಾರ, ಅಪ್ರಾಪ್ತ ಯುವತಿ ಹೇಳಿದಂತೆ 60ಕ್ಕೂ ಹೆಚ್ಚು ಆರೋಪಿಗಳಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ಸೂಚಿಸಲಾಗಿದೆ. ಈ ಪ್ರಕರಣದ ಐವರು ಆರೋಪಿಗಳು ಪಥನಾಂತಿಟ್ಟ ನಿವಾಸಿಗಳಾಗಿದ್ದಾರೆ. ಬಂಧಿತರ ಮೊಬೈಲ್ ಫೋನ್‌ಗಳಲ್ಲಿನ ಫೋಟೋಗಳಿಂದ ತನ್ನ ಮೇಲೆ ಅತ್ಯಾಚಾರವೆಸಗಿದ ಇತರ 40 ಜನರನ್ನು ಯುವತಿ ಗುರುತಿಸಿದ್ದಾಳೆ.
‘8ನೇ ತರಗತಿಯಲ್ಲಿದ್ದಾಗ ಅಂದರೆ 13 ವರ್ಷದವಳಿದ್ದಾಗ ಕಿರುಕುಳ ಆರಂಭವಾಯಿತು. ಪಕ್ಕದ ಮನೆಯ ವ್ಯಕ್ತಿಯೊಬ್ಬ ನನಗೆ ಅಶ್ಲೀಲ ವಿಡಿಯೋ ತೋರಿಸಿ ಲೈಂಗಿಕವಾಗಿ ಬಳಸಿಕೊಂಡ. ನಂತರ ಕೆಲವರು ನನ್ನ ಬಡತನ ದುರ್ಬಳಕೆ ಮಾಡಿಕೊಂಡು ಶೋಷಣೆ ಮಾಡಿದರು. ನಾನು ಅಥ್ಲೀಟ್ ಆಗಿದ್ದ ಕಾರಣ ಕೋಚ್‌ಗಳು, ಆಟಗಾರರೂ ರೇಪ್ ಮಾಡಿದರು. ಈ ವೇಳೆ ನನ್ನ ಅಶ್ಲೀಲ ವಿಡಿಯೋ ಶೂಟ್ ಮಾಡಿಕೊಂಡು ಅವರು ಇತರ ಪರಿಚಯಸ್ಥರ ಜತೆ ಹಂಚಿಕೊಂಡರು ಹಾಗೂ ಬ್ಲಾಕ್ ಮೇಲ್ ಆರಂಭಿಸಿದರು. ಆಗ ಇತರರು ಕೂಡ ವಿಡಿಯೋ ತೋರಿಸಿ ಶೋಷಣೆ ನಡೆಸಿದರು’ ಎಂದು ಆಕೆ ಹೇಳಿಕೊಂಡಿದ್ದಾಳೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?: ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲುಸಿ) ಸದಸ್ಯರು ವಾಡಿಕೆಯಂತೆ ಫೀಲ್ಡ್ ವಿಸಿಟ್ ಮಾಡುವಾಗ ಯುವತಿಯ ಮನೆಗೂ ಹೋಗಿದ್ದು, ಆಗ ಯುವತಿ ಕರಾಳ ಕೃತ್ಯದ ಬಾಯಿ ಬಿಟ್ಟಿದ್ದಾಳೆ. ಬಳಿಕ ಈ ಸಮಿತಿ ದೂರು ನೀಡಿದ್ದು, ಅತ್ಯಾಚಾರ ಪ್ರಕರಣ ಸಾರ್ವಜನಿಕವಾಗಿ ಬೆಳಕಿಗೆ ಬಂದಿದೆ. ಯುವತಿಯು ಅತ್ಯಾಚಾರಿಗಳ ಜತೆ ಮಾತನಾಡಲು ತಂದೆಯ ಫೋನ್ ಬಳಸಿದ್ದು, ಅದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಸಲು ಪತ್ತಣಂತಿಟ್ಟ ಎಸ್ಪಿ ವಿಶೇಷ ತಂಡ ರಚಿಸಿದ್ದಾರೆ. 15 ಜನರನ್ನು ಬಂಧಿಸಿ ಉಳಿದವರಿಗೆ ಬಲೆ ಬೀಸಿದ್ದಾರೆ. ಇದು ಅಸಾಮಾನ್ಯ ಪ್ರಕರಣವಾದ್ದರಿಂದ, ಹೆಚ್ಚಿನ ಸಮಾಲೋಚನೆಗಾಗಿ ಅವಳನ್ನು ಮನಶ್ಶಾಸ್ತ್ರಜ್ಞರ ಬಳಿಗೆ ಕರೆದೊಯ್ಯಲಾಯಿತು.
Discover more from Coastal Times Kannada
Subscribe to get the latest posts sent to your email.
Discussion about this post