ಮಂಗಳೂರು: ಮಂಗಳೂರಿನ ಜೆಬಿಎಫ್ ಕಂಪೆನಿ ಬಂದ್ ಆಗಿದ್ದು, ಈ ಸಂಸ್ಥೆಗಾಗಿ ಭೂಮಿಯನ್ನು ಕಳೆದುಕೊಂಡ ಸಂತ್ರಸ್ತರಿಗೆ ತಾತ್ಕಾಲಿಕವಾಗಿ ಎಂಆರ್ಪಿಎಲ್ ನಲ್ಲಿ ಉದ್ಯೋಗ ನೀಡುವ ಭರವಸೆಯನ್ನು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ನೀಡಿದ್ದಾರೆ. ಇಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮಂಗಳೂರಿಗೆ ಬಂದಿದ್ದ ಸಚಿವ ನಿರಾಣಿಯವರನ್ನು ಸಂತ್ರಸ್ತರು ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಿದರು. ಈ ಸಂದರ್ಭದಲ್ಲಿ ಸಚಿವರು ಉದ್ಯೋಗದ ಭರವಸೆ ನೀಡಿದರು. ವಿಶೇಷ ಆರ್ಥಿಕ ವಲಯಕ್ಕಾಗಿ ಭೂಮಿ ನೀಡಿದ ಸಂತ್ರಸ್ತರಿಗೆ ಒಪ್ಪಂದದಂತೆ ಜೆಬಿಎಫ್ ಕಂಪೆನಿಯಲ್ಲಿ ಉದ್ಯೋಗ ನೀಡಲಾಗಿತ್ತು. ಆದರೆ ಕಾಮಗಾರಿ ಪೂರ್ತಿಗೊಳಿಸದೇ ಈ ಕಂಪೆನಿ ಆರ್ಥಿಕ ಮುಗ್ಗಟ್ಟಿನಿಂದ ಬಂದ್ ಆಯಿತು.
ಈ ಕಂಪೆನಿಯಲ್ಲಿ ಭೂಮಿಯನ್ನು ಕೊಟ್ಟಿದ್ದ 26 ಮಂದಿ ಕೆಲಸದಲ್ಲಿದ್ದರು. ಇದೀಗ ಕೆಲಸ ಕಳೆದುಕೊಂಡಿರುವ 26 ಮಂದಿಯ ಕುಟುಂಬಸ್ಥರು ಸಚಿವ ಮುರುಗೇಶ್ ನಿರಾಣಿಯವರನ್ನು ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸಂತ್ರಸ್ತರಿಗೆ ಜೆಬಿಎಫ್ ಕಂಪೆನಿ ಪುನಾರಾರಂಭವಾಗುವವರೆಗೆ ಎಂಆರ್ಪಿಎಲ್ ನಲ್ಲಿ ತಾತ್ಕಾಲಿಕ ಉದ್ಯೋಗ ಕೊಡಿಸುವ ಬಗ್ಗೆ ಅಭಯ ನೀಡಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post