ನ್ಯೂಯಾರ್ಕ್: ಪ್ರತಿಷ್ಠಿತ ಅಮೆರಿಕ ಓಪನ್ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಸೋಲಿನ ಆಘಾತ ಎದುರಿಸಿರುವ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರಿಗೆ ಕ್ಯಾಲೆಂಡರ್ ವರ್ಷದಲ್ಲಿ ಎಲ್ಲ ನಾಲ್ಕು ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆಲ್ಲುವ ಅವಕಾಶ ಕೈತಪ್ಪಿದೆ.
ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಜೊಕೊವಿಕ್ ವಿರುದ್ಧ 4-6, 4-6, 4-6ರ ಅಂತರದ ಗೆಲುವು ದಾಖಲಿಸಿದ ರಷ್ಯಾದ ಡೇನಿಯಲ್ ಮಡ್ವೆಡೆವ್ ಚೊಚ್ಚಲ ಗ್ರ್ಯಾನ್ ಸ್ಲಾಮ್ ಕಿರೀಟಕ್ಕೆ ಮುತ್ತಿಟ್ಟರು.
ಇದರೊಂದಿಗೆ ಜೊಕೊವಿಚ್, ದಾಖಲೆಯ 21ನೇ ಗ್ರ್ಯಾನ್ ಸ್ಲಾಮ್ ಗೆಲ್ಲುವ ಅವಕಾಶದಿಂದಲೂ ವಂಚಿತರಾಗಿದ್ದಾರೆ. ಈ ಮೂಲಕ ಪ್ರಸಕ್ತ ಸಾಲಿನಲ್ಲೇ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಎದುರಾದ ಸೋಲಿಗೆ ಮಡ್ವೆಡೆವ್ ಸೇಡು ತೀರಿಸಿಕೊಂಡರು.
ವಿಶ್ವ ನಂ.2 ರ‍್ಯಾಂಕ್‌ನ ಮಡ್ವೆಡೆವ್ ಇದು ಮೂರನೇ ಬಾರಿಗೆ ಫೈನಲ್‌ಗೆ ಪ್ರವೇಶಿಸಿದ್ದರು. ಈ ಹಿಂದೆ 2019ರಲ್ಲಿ ಅಮೆರಿಕ ಓಪನ್ ಫೈನಲ್‌ನಲ್ಲಿ ಸ್ಪೇನ್‌ನ ರಫೆಲ್ ನಡಾಲ್ ವಿರುದ್ಧ ಮುಗ್ಗರಿಸಿದ್ದರು.
Champ 🏆@DaniilMedwed | #USOpen pic.twitter.com/yFowNowygv
— US Open Tennis (@usopen) September 12, 2021
Discover more from Coastal Times Kannada
Subscribe to get the latest posts sent to your email.
Discussion about this post