ಮಂಗಳೂರು: ಟೆಕ್ನೋಲಾಜಿ ವ್ಯವಹಾರ ಕ್ಷೇತ್ರದಲ್ಲಿ ಯಶಸ್ವಿ ಹೆಸರಾದ, ಗುರು ಇನ್ಫೋಟೆಕ್ ಸ್ಥಾಪಕ ಗ್ಲೋಟೆಕ್ ಟೆಕ್ನಾಲಜೀಸ್ ಮತ್ತು ದಿಯಾ ಸಿಸ್ಟಮ್ಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವಿ.ರವಿಚಂದ್ರನ್(74ವ) ಅಮೇರಿಕದ ಕೆಂಟುಕಿಯಲ್ಲಿ ನ. 12 ರಂದು ಇಹಲೋಕ ತ್ಯಜಿಸಿದರು. ಮೃತರು ಪತ್ನಿ ಇಂದಿರಾ, ಮಗಳು ವಿದ್ಯಾ, ಪುತ್ರ ಹರಿಯನ್ನು ಆಗಲಿದ್ದಾರೆ
ಮೂಲತ ಮಂಗಳೂರು ನಿವಾಸಿಯಾಗಿದ್ದ ಇವರು ಕಳೆದ ಎರಡು ವರ್ಷದಿಂದ ಆಮೇರಿಕಾದ ಕೆಂಟುಕಿಯಲ್ಲಿ ಮಗಳ ಮನೆಯಲ್ಲಿ ವಾಸಿಸುತಿದ್ದರು. ಮೂಲತಃ ಮಂಗಳೂರು ನಿವಾಸಿಯಾದ ಅವರು ಕಳೆದ ಮೂರು ವರ್ಷಗಳಿಂದ ಮಿದುಳಿನ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ಇದರ ಚಿಕಿತ್ಸೆ ನಿಮಿತ್ತ ಅವರ ಆಮೇರಿಕಾದ ಮಗಳ ಮನೆಗೆ ತೆರಳಿದ್ದರು
ಪುತ್ತೂರಿನ ಸಂತ ಫಿಲೋಮಿನಾ ಕಾಲೇಜ್‌ನಲ್ಲಿ 1970ರಲ್ಲಿ ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಪ್ರಾರಂಭಿಸಿದ್ದ ಅವರು. 1999ರಲ್ಲಿ ನಿವೃತ್ತರಾದರು. ಬಳಿಕ ʼಗುರು ಕಂಪ್ಯೂಟರ್ಸ್ʼ ಸ್ವಂತ ಉದ್ದಿಮೆ ಆರಂಭಿಸಿದ ಅವರು 2003ರಲ್ಲಿ ದೇಶದಲ್ಲಿ ಐಟಿ ಕ್ಷೇತ್ರ ಉತ್ತುಂಗದಲ್ಲಿದ್ದಾಗ ಮಂಗಳೂರಿನಲ್ಲಿ `ದಿಯಾ ಸಿಸ್ಟಮ್ಸ್’ ಐಟಿ ಕಂಪೆನಿ ಸ್ಥಾಪಿಸಿದ್ದರು. ಇದರಲ್ಲಿ 2500ಕ್ಕೂ ಅಧಿಕ ಮಂದಿಗೆ ಉದ್ಯೋಗ ನೀಡಿದ್ದ ಶ್ರೇಯ ಅವರದು.2004ರಲ್ಲಿ `ಗ್ಲೋಟೆಕ್ ಟೆಕ್ನಾಲಜೀಸ್’ ಆರಂಭಿಸಿದರು.
ಇವರ ಕಂಪೆನೆಯೂ ವಿಶ್ವದಾದ್ಯಂತ ಗ್ರಾಹಕರನ್ನು ಹೊಂದಿದ್ದು , ಅಮೇರಿಕ, ಬ್ರಿಟನ್‌ನ ಗ್ರಾಹಕ ಕಂಪೆನಿಗಳಿಗೆ ತಂತ್ರಾಂಶ ಅಭಿವೃದ್ಧಿ ಹಾಗೂ ಬಿಪಿಒ ಮಾದರಿ ಸೇವೆ ಒದಗಿಸುತಿದ್ದರು. ಅಮೇರಿಕ, ಡೊಮಿನಿಕ್, ರಿಪಬ್ಲಿಕ್, ಫಿಲಿಫೈನ್ಸ್, ಬೆಂಗಳೂರು, ಮೈಸೂರು ಹಾಗೂ ಮಂಗಳೂರಿನಲ್ಲಿ ಇವರ ಶಾಖೆ ಕಾರ್ಯ ನಿರ್ವಹಿಸುತ್ತಿದೆ.
ಇವರ ಸಾಧನೆಗೆ ಭಾರತೀಯ ಉದ್ಯೋಗ ರತ್ನ ಅವಾರ್ಡ್, ಅಲೋಷಿಯನ್ ಅಲ್ಯುಮಿನಿ ಅವಾರ್ಡ್, ಎಂಎಂಎ-ಕೆವಿಕೆ ಅತ್ಯುತ್ತಮ ಮ್ಯಾನೇಜರ್ ಅವಾರ್ಡ್, 2016ರ ಸ್ಪಂದನ ಎಂಟರ್‌ಪ್ರಿನರ್ ಆಫ್ ದಿ ಇಯರ್ ಪ್ರಶಸ್ತಿಗಳು ಬಂದಿದ್ದವು.
Discover more from Coastal Times Kannada
Subscribe to get the latest posts sent to your email.
Discussion about this post