ಮಂಗಳೂರು, ಡಿ.12: ಅಬಕಾರಿ ಅಧಿಕಾರಿಗಳ ಮಹತ್ವದ ಕಾರ್ಯಾಚರಣೆಯಲ್ಲಿ ಕೇರಳ ಗಡಿಭಾಗ ತಲಪಾಡಿಯಲ್ಲಿ ನಡೆಯುತ್ತಿದ್ದ ಅಂತರಾಜ್ಯ ಮಟ್ಟದ ಬೃಹತ್ ಸ್ಪಿರಿಟ್ ತಯಾರಿ ಮತ್ತು ಮಾರಾಟ ದಂಧೆ ಪತ್ತೆಯಾಗಿದ್ದು ಎರಡು ಸಾವಿರಕ್ಕೂ ಹೆಚ್ಚು ಲೀಟರ್ ಸಾರಾಯಿ ಸ್ಪಿರಿಟ್ ವಶಕ್ಕೆ ಪಡೆಯಲಾಗಿದೆ.
ಕೇರಳ ಗಡಿಭಾಗ ಕಿನ್ಯಾ ಗ್ರಾಮದ ಸಾಂತ್ಯ ಎಂಬಲ್ಲಿ ಅಕ್ರಮ ಸಾರಾಯಿ ತಯಾರಿಸುತ್ತಿದ್ದ ಮನೆಗೆ ಅಬಕಾರಿ ಪೊಲೀಸರು ಮಂಗಳವಾರ ಸಂಜೆ ದಾಳಿ ನಡೆಸಿದ್ದಾರೆ. ಬೃಹತ್ ಮಟ್ಟದಲ್ಲಿ ಸಾರಾಯಿ ತಯಾರಿಸುತ್ತಿದ್ದ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದು ಈ ವೇಳೆ, ಪ್ರಮುಖ ಆರೋಪಿ ನಿತ್ಯಾನಂದ ಭಂಡಾರಿ ಸ್ಥಳದಿಂದ ಪರಾರಿಯಾಗಿದ್ದಾನೆ. ದಾಳಿ ವೇಳೆ 2240 ಲೀಟರ್ ಸ್ಪಿರಿಟ್ ಹಾಗೂ 222 ಲೀಟರ್ ನಕಲಿ ಲಿಕ್ಕರ್ ಹಾಗೂ ಅದಕ್ಕೆ ಬಳಸಿದ್ದ ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ರಮವಾಗಿ ತಯಾರಿಸಿದ ದೇಶಿ ನಿರ್ಮಿತ ಮದ್ಯವನ್ನು ನೆರೆಯ ಕೇರಳಕ್ಕೆ ಸರಬರಾಜು ಮಾಡಲಾಗುತ್ತಿತ್ತು. ದಾಳಿ ವೇಳೆ ಆರೋಪಿ ಭಂಡಾರಿ ಪರಾರಿಯಾಗಿದ್ದಾನೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಅಬಕಾರಿ ಇಲಾಖೆ ಮಂಗಳೂರು ವಿಭಾಗದ ಜಂಟಿ ನಿರ್ದೇಶಕ ನಾಗರಾಜಪ್ಪ ಟಿ ಮತ್ತು ಅಬಕಾರಿ ಉಪ ಆಯುಕ್ತ ಟಿ ಎಂ ಶ್ರೀನಿವಾಸ್ ಅವರ ನಿರ್ದೇಶನದಂತೆ ದಾಳಿ ನಡೆಸಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post