ಮಂಗಳೂರು, ಜ. 11: ಬಂಟ್ವಾಳ ಬಿಜೆಪಿ ಶಾಸಕ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಕಾರು ಡಿಕ್ಕಿ ಹೊಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕಿನ ತೆಂಕ ಎಡಪದವು ಬಳಿ ಈ ಘಟನೆ ನಡೆದಿದೆ. ಇಂದು (ಜನವರಿ 14) ಎಡಪದವು ಗೋಪಾಲಕೃಷ್ಣ ದೇವಸ್ಥಾನಕ್ಕೆ ತೆರಳಿ ಹಿಂದಿರುಗುತ್ತಿದ್ದಾಗ ರಾಜೇಶ್ ನಾಯ್ಕ್ಗೆ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದಿದೆ. ಈ ಹಿನ್ನೆಲೆಯಲ್ಲಿ ರಾಜೇಶ್ ನಾಯ್ಕ್ಗೆ ಗಾಯವಾಗಿದೆ.
ಸಂಕ್ರಮಣದ ಅಂಗವಾಗಿ ಪೂಜೆ ಮುಗಿಸಿ ಕಾರಿನತ್ತ ನಡೆದುಕೊಂಡು ಬರುವಾಗ ಮೂಡಬಿದ್ರೆ ಕಡೆಯಿಂದ ಬರುತ್ತಿದ್ದ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದಿದೆ. ಕಾರು ಗುದ್ದಿದ ರಭಸಕ್ಕೆ ಶಾಸಕ ರಾಜೇಶ್ ನಾಯ್ಕ್ ಕೆಳಗಿಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ರಾಜೇಶ್ ನಾಯ್ಕ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಮನೆಗೆ ವಾಪಸ್ ಆಗಿದ್ದಾರೆ.
ಮೂಡುಬಿದ್ರೆಯಿಂದ ಮಂಗಳೂರು ಸಾಗುತ್ತಿದ್ದ ಸ್ವಿಫ್ಟ್ ಕಾರು ಚಾಲಕ ಶಾಸಕರಿಗೆ ಡಿಕ್ಕಿಯಾದರೂ ನಿಲ್ಲಿಸದೆ ಎಸ್ಕೇಪ್ ಆಗಿದ್ದಾನೆ. ಸ್ಥಳೀಯರು ಕೂಡಲೇ ಗಾಡಿ ನಂಬರ್ ನೋಟ್ ಮಾಡಿ ಬಜ್ಪೆ ಪೊಲೀಸರಿಗೆ ತಿಳಿಸಿದ್ದರು. ನಿಲ್ಲಿಸದೆ ಪರಾರಿಯಾದ ಕಾರನ್ನು ಬಳಿಕ ಗುರುಪುರದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಿಟ್ ಅಂಡ್ ರನ್ ಮಾಡಿದ ಆರೋಪಿ ಮೊಹಮ್ಮದ್ ಸುಫೈಲನ್ನು ಪೊಲೀಸರು ಬಂಧಿಸಿದ್ದಾರೆ.
Discussion about this post