ಮಂಗಳೂರು: ಕರೊನಾ ಸೋಂಕಿನಿಂದ ಕಂಗೆಟ್ಟಿರುವ ರಾಜ್ಯದ ಜನತೆಗೆ ನಿಫಾ ವೈರಸ್ ಮತ್ತಷ್ಟು ಆತಂಕ ತಂದೊಡ್ಡಿದ್ದು, ಮಂಗಳೂರಿನಲ್ಲಿ ಯುವಕನೊಬ್ಬನಿಗೆ ಸೋಂಕಿನ ಕೆಲ ಲಕ್ಷಣ ಕಂಡು ಬಂದಿದೆ.
ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ಕಾರವಾರ ಮೂಲದ ಯುವಕನಲ್ಲಿ ನಿಫಾ ವೈರಸ್ನ ಕೆಲ ಲಕ್ಷಣ ಪತ್ತೆಯಾಗಿದ್ದು, ರೋಗಿಯ ಸ್ಯಾಂಪಲ್ ಪಡೆದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆಯು ಬೆಂಗಳೂರಿಗೆ ಕಳುಹಿಸಿದೆ.
ಈತ ಗೋವಾದ ಲ್ಯಾಬ್ವೊಂದರಲ್ಲಿ ಮೈಕ್ರೋಬಯೋಲಾಜಿಸ್ಟ್. ಜ್ವರ ಸೇರದಂತೆ ಇತರ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ನಿಫಾ ಟೆಸ್ಟ್ ಮಾಡುವಂತೆ ಯುವಕ ಮನವಿ ಮಾಡಿದ್ದ. ಸದ್ಯ ಟೆಸ್ಟ್ ರಿಪೋರ್ಟ್ಗಾಗಿ ದ.ಕ. ಜಿಲ್ಲಾ ಆರೋಗ್ಯ ಇಲಾಖೆ ಕಾಯುತ್ತಿದೆ.