ನವದೆಹಲಿ, ಆ. 15: ದೇಶವು ಇಂದು ಸ್ವಾತಂತ್ಯ್ರ ದಿನದ 75 ನೇ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಈ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಸ್ವಾಂತ್ರತ್ಯ್ರದ ಈ ಅಮೃತ ಮಹೋತ್ಸವದಲ್ಲಿ ಎಲ್ಲರಿಗೂ ಶುಭಾಶಯ ತಿಳಿಸಿದರು. ಈ ಸಂದರ್ಭದಲ್ಲಿ ಸ್ವಾತ್ರಂತ್ಯ್ರ ಹೋರಾಟಗಾರರಿಗೆ ಈ ಸಂದರ್ಭದಲ್ಲಿ ನಮಿಸುತ್ತೇವೆ. ಹಾಗೆಯೇ ಮಹಾತ್ಮ ಗಾಂಧಿ, ಭಗತ್ ಸಿಂಗ್, ಬಾಬಾ ಸಾಹೇಬ್ ಅಂಬೇಡ್ಕರ್ ಸೇರಿದಂತೆ ಈ ದೇಶವನ್ನು ರೂಪಿಸಿದ ಎಲ್ಲರನ್ನೂ ನೆನೆಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ
”ಸೋಲು ಗೆಲುವು ಬಂದರೂ ಕೂಡಾ ಭಾರತವು ಸ್ವಾತಂತ್ಯ್ರದ ನಿಟ್ಟಿನಲ್ಲಿ ಹೋರಾಡಿದೆ” ಎಂದು ಹೇಳಿದ ಪ್ರಧಾನಿ ಮೋದಿ, ಕೊರೊನಾ ಮಾಹಾಮಾರಿ ಸಂದರ್ಭದಲ್ಲಿ ಡಾಕ್ಟರ್, ನರ್ಸಿಂಗ್, ಪೌರಕಾರ್ಮಿಕರನ್ನು ನೆನಪಿಸಿಕೊಂಡರು. ”ಕೋವಿಡ್ ಲಸಿಕೆ ಮಾಡಿದ ವಿಜ್ಞಾನಿಗಳು, ಸೇವೆ ಮಾಡುತ್ತಿರುವ ಕೋಟ್ಯಾಂತರ ವ್ಯಕ್ತಿಗಳನ್ನು ಈ ಸಂದರ್ಭದಲ್ಲಿ ಧನ್ಯವಾದ ಸಲ್ಲಿಸಬೇಕು,” ಎಂದು ಪ್ರಧಾನಿ ಹೇಳಿದರು. ”ಕೊರೊನಾ ಈ ಸಂದರ್ಭದಲ್ಲಿ ಕೇಂದ್ರ ರಾಜ್ಯ ಸರ್ಕಾರ ಈ ಜನರೊಂದಿಗೆ ಇದೆ,” ಎಂದು ಕೂಡಾ ಹೇಳಿದರು.
ಪ್ರಧಾನಿ ಭಾಷಣದ ಮುಖ್ಯಾಂಶಗಳು;
ಒಲಿಂಪಿಕ್ಸ್‌ನಲ್ಲಿ ಭಾರತದ ಹೆಸರನ್ನು ಎತ್ತರಕ್ಕೆ ಏರಿಸಿದ ಅಥ್ಲೆಟ್‌ಗಳಿಗೆ ಚಪ್ಪಾಳೆಯ ಮೂಲಕ ಎಲ್ಲರೂ ಅಭಿನಂದಿಸಿದರು.
ಸೈನಿಕ ಶಾಲೆಗಳಲ್ಲಿ ಇನ್ನು ಮುಂದೆ ಯುವತಿಯರಿಗೂ ಪ್ರವೇಶವನ್ನು ಘೋಷಿಸಿದ್ದಾರೆ. ಪ್ರಸ್ತುತ 33 ಸೈನಿಕ ಶಾಲೆಗಳು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಮಿಜೊರಾಮ್ ನಲ್ಲಿ ಎರಡುವರೆ ವರ್ಷಗಳ ಹಿಂದೆ ಸೈನಿಕ ಶಾಲೆಗಳಲ್ಲಿ ಬಾಲಕಿ/ಯರಿಗೆ ಪ್ರವೇಶ ನೀಡುವ ಪ್ರಥಮ ಪ್ರಯೋಗವನ್ನು ನಡೆಸಲಾಗಿತ್ತು ಎಂಬುದನ್ನು ಉಲ್ಲೇಖಿಸಿರುವ ಪ್ರಧಾನಿ ಮೋದಿ, ಈಗ ಭಾರತ ಸರ್ಕಾರ ಎಲ್ಲಾ ಸೈನಿಕ ಶಾಲೆಗಳಲ್ಲಿಯೂ ಬಾಲಕಿ/ಯುವತಿಯರಿಗೆ ಪ್ರವೇಶ ಲಭ್ಯವಿರಲಿದೆ ಎಂದು ಹೇಳಿದ್ದಾರೆ.
ಸೈನಿಕ ಶಾಲೆಗಳ ಸೊಸೈಟಿ ಸೈನಿಕ ಶಾಲೆಗಳನ್ನು ನಡೆಸುತ್ತಿದ್ದು ಆಡಳಿತಾತ್ಮಕ ನಿಯಂತ್ರಣ ರಕ್ಷಣಾ ಸಚಿವಾಲಯದ್ದಾಗಿದೆ. ಭಾರತೀಯ ಸಶಸ್ತ್ರ ಪಡೆಗಳಿಗೆ ಸೇರ್ಪಡೆಯಾಗುವುದಕ್ಕೆ ಬಾಲ್ಯದಿಂದಲೇ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಉದ್ದೇಶದಿಂದ ಸೈನಿಕ ಶಾಲೆಗಳನ್ನು ಸ್ಥಾಪಿಸಲಾಗಿದೆ.
ಇಂದಿನಿಂದ ನಾವು ಶತಕ ವರ್ಷದ ಸಂದರ್ಭದೊಳಗೆ ಭಾರತವನ್ನು ವಿಕಾಸದ ಸಂಕಲ್ಪ ಮಾಡಬೇಕು. ಭಾರತದ ಈ ಅಮೃತ ಮಹೋತ್ಸವದ ಸಂದರ್ಭದ ನಮ್ಮ ಮುಂದಿನ ಗುರಿ: ಭಾರತವನ್ನು ಭಾರತ ಹಾಗೂ ಭಾರತದ ನಾಗರಿಕರಿಗಾಗಿ ಸಮೃದ್ದಿ ಜೀವನದ ಆರೋಹಣ, ಗ್ರಾಮ ಹಾಗೂ ನಗರಗಳಲ್ಲಿ ಸಮಾನವಾದ ಸೌಕರ್ಯವಿರುವ ಸಮೃದ್ದ ಭಾರತ ನಿರ್ಮಾಣ, ನಾಗರಿಕರ ಜೀವನದಲ್ಲಿ ಸರ್ಕಾರ ಸುಖಾಸುಮ್ಮನೆ ಮೂಗು ತೂರಿಸದಂತಹ ಭಾರತ, ಪ್ರಪಂಚದ ಎಲ್ಲಾ ಮೂಲ ಸೌಕರ್ಯಗಳು ಇರುವ ಭಾರತ,
ಇದು ಕೋಟಿ ಕೋಟಿ ದೇಶವಾಸಿಗಳ ಸಂಕಲ್ಪ, ಆದರೆ ಈ ಸಂಕಲ್ಪ ಪೂರ್ಣವಾಗ ಬೇಕಾದರೆ ಪರಿಶ್ರಮ ಹಾಗೂ ಪರಾಕ್ರಮ ಮುಖ್ಯ ,ಈ ಸಮಯವೇ ಸರಿಯಾದ ಸಮಯ. ನಾವು ದೇಶವನ್ನು ಬದಲಾಯಿಸಬೇಕು. ನಾವು ನಾಗರಿಕರಾಗಿ ನಮ್ಮನ್ನು ನಾವು ಬದಲಾಯಿಸಿಕೊಳ್ಳಬೇಕು. ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್ ನಮ್ಮ ಎಲ್ಲಾ ಗುರಿ ತಲುಪಲು ಬಹುಮುಖ್ಯ.
ಹಲವಾರು ಸರ್ಕಾರದ ಯೋಜನೆಗಳನ್ನು ನೆನಪಿಸಿಕೊಂಡ ಪ್ರಧಾನಿ ನಾವು ಈ ಯೋಜನೆಯನ್ನು ವೇಗಗೊಳಿಸಿದ್ದೇವೆ. ಆದರೆ ಇಲ್ಲಿಗೆ ನಿಲ್ಲದು. ನಾವು ಈ ಯೋಜನೆಯನ್ನು ಪೂರ್ಣಗೊಳಿಸಬೇಕು. ಎಲ್ಲರಿಗೂ ಈ ಯೋಜನೆಯ ಫಲ ದೊರೆಯಬೇಕು.
ಮುಂದಿನ ದಿನಗಳಲ್ಲಿ, ನಾವು ಪಿಎಂ ಗತಿ ಶಕ್ತಿ ಯೋಜನೆಯನ್ನು ಪ್ರಾರಂಭಿಸುತ್ತೇವೆ, 100 ಲಕ್ಷ ಕೋಟಿ ರಾಷ್ಟ್ರೀಯ ಮೂಲಸೌಕರ್ಯ ಮಾಸ್ಟರ್ ಪ್ಲಾನ್ ಇದು ಸಮಗ್ರ ಮೂಲಸೌಕರ್ಯಕ್ಕೆ ಅಡಿಪಾಯವನ್ನು ನೀಡುತ್ತದೆ ಮತ್ತು ನಮ್ಮ ಆರ್ಥಿಕತೆಗೆ ಸಮಗ್ರ ಮಾರ್ಗವನ್ನು ನೀಡುತ್ತದೆ.
Discover more from Coastal Times Kannada
Subscribe to get the latest posts sent to your email.
Discussion about this post