ಬೆಳ್ತಂಗಡಿ : ಯುವಕನೋರ್ವ ಸೇನೆಗೆ ಸೇರುವ ಉದ್ದೇಶದಿಂದ ಅಮೆರಿಕಾದಲ್ಲಿದ್ದ ಉದ್ಯೋಗವನ್ನು ತ್ಯಜಿಸಿ ಭಾರತೀಯ ಸೇನೆಗೆ ಸೇರ್ಪಡೆಗೊಂಡಿದ್ದಾನೆ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸಾತ್ವಿಕ ಕುಳವರ್ಮ ಸೇನೆಗೆ ಆಯ್ಕೆಯಾದ ಯುವಕ. ಇವರು ಎಲೆಕ್ಟ್ರಿಕ್ ಎಂಜಿನಿಯರಿಂಗ್‌ನಲ್ಲಿ ಎಂಎಸ್ ಪದವಿ ಪಡೆದು ಅಮೆರಿಕದಲ್ಲಿ ಉದ್ಯೋಗದಲ್ಲಿದ್ದರು. ಬಳಿಕ ಭಾರತೀಯ ಸೇನೆಗೆ ಸೇರಬೇಕೆಂಬ ಇಚ್ಛೆಯಿಂದ ಭಾರತಕ್ಕೆ ಮರಳಿ ತರಬೇತಿ ಪಡೆದು, ಇದೀಗ ಭಾರತೀಯ ಸೇನೆಗೆ ನಿಯೋಜನೆಗೊಂಡಿದ್ದಾರೆ.
ಕಾಸರಗೋಡು ಜಿಲ್ಲೆಯ ಕುಂಬಳೆಯ ಪ್ರೊ.ಗಣಪತಿ ಭಟ್ ಕುಳಮರ್ವ ಹಾಗೂ ಪಿ. ವಸಂತಿ ದಂಪತಿಯ ಪುತ್ರನಾಗಿರುವ ಇವರು, ಅಮೆರಿಕದಲ್ಲಿ ಸ್ನಾತಕೋತ್ತರ ಅಧ್ಯಯನ ಮುಗಿಸಿ ಕೆಲವು ತಿಂಗಳುಗಳ ಕಾಲ ಅಲ್ಲೇ ಉದ್ಯೋಗದಲ್ಲಿದ್ದರು. ಆ ಬಳಿಕ ಸೇನೆಗೆ ಸೇರುವ ಆಸೆಯಿಂದ ಭಾರತಕ್ಕೆ ಆಗಮಿಸಿ ಎರಡು ವರ್ಷಗಳ ಕಾಲ ಅದಕ್ಕಾಗಿ ತಯಾರಿ ನಡೆಸಿದ್ದರು. ನಂತರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸೇನೆಗೆ ಆಯ್ಕೆಯಾಗಿದ್ದರು. ಆ ಬಳಿಕ ಡೆಹ್ರಾಡೂನ್‌ನಲ್ಲಿರುವ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಒಂದು ವರ್ಷದ ಕಠಿಣ ತರಬೇತಿ ಪಡೆದು ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ಇವರು ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ಒಂದು ವರ್ಷದಿಂದ ಕಠಿಣ ತರಬೇತಿ ಪಡೆದಿದ್ದು, ಜೂನ್ 10ರಂದು ಭಾರತೀಯ ಸೇನಾಪಡೆಯ ತಾಂತ್ರಿಕ ವಿಭಾಗದ ಲೆಫ್ಟಿನೆಂಟ್ ಹುದ್ದೆಗೆ ನೇಮಕಗೊಂಡಿದ್ದಾರೆ. ಇಂಡಿಯನ್ ಮಿಲಿಟರಿ ಅಕಾಡೆಮಿಯ ಪಾಸಿಂಗ್ ಔಟ್ ಡೇ ಪರೇಡ್‌ನಲ್ಲಿ ಪಾಲ್ಗೊಂಡ 288 ಯುವ ಯೋಧರ ಜತೆಗೆ ಇವರೂ ಭಾಗಿಯಾಗಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post