ಮಂಗಳೂರು: ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಅನ್ಯ ಧರ್ಮದ ಯುವಕ – ಯುವತಿಯನ್ನು ತಡೆದು ಅವರ ಮೇಲೆ ಹಲ್ಲೆ ಮಾಡಿ ನಿಂದಿಸಿರುವ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ ಬಳಿ ನಡೆದಿದೆ.
ಘಟನೆಯ ವಿವರ: ಯುವತಿ ಅಪಾರ್ಟ್ ಮೆಂಟ್ ಖಾಲಿ ಮಾಡುತ್ತಿದ್ದುದರಿಂದ ಲಗೇಜ್ ಶಿಫ್ಟ್ ಮಾಡಿ ಯುವಕ ಯುವತಿಯನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆ ಅವರನ್ನು 5-6 ಜನರ ಗುಂಪು ಫಾಲೋ ಮಾಡಿದ್ದಾರೆ. ಹಿಂಬಾಲಿಸಿದ ಗುಂಪು, ಯುವಕ -ಯುವತಿಯನ್ನು ವಿಚಾರಿಸಿ, ಯುವಕನನ್ನು ನಿಂದಿಸಿ, ಥಳಿಸಿದ್ದಾರೆ. ಇದಾದ ಬಳಿಕ ಯುವಕ ಹಲ್ಲೆ ಮಾಡಿದ್ದಾರೆ , ಹಲ್ಲೆಗೀಡಾದ ಯುವಕನನ್ನು ಶ್ರೀನಿವಾಸ ಕಾಲೇಜಿನ ವಿದ್ಯಾರ್ಥಿ ಮಹಮ್ಮದ್ ಯಾಸೀನ್ ಎಂದು ಗುರುತಿಸಲಾಗಿದೆ.