ಮಂಗಳೂರು, ನ.16: ನಗರದ ಕಂಕನಾಡಿ ಮುಖ್ಯರಸ್ತೆಯಲ್ಲಿರುವ ‘ಸಿಟಿ ಗೋಲ್ಡ್ ಆ್ಯಂಡ್ ಡೈಮಂಡ್ಸ್’ನ 25ನೇ ವಾರ್ಷಿಕೋತ್ಸವದ (ಬೆಳ್ಳಿಹಬ್ಬ) ಲೋಗೊ ಅನಾವರಣ ಮತ್ತು ನ.26ರವರೆಗೆ ನಡೆಯುವ ಆ್ಯಂಟಿಕ್ ಫೆಸ್ಟ್‌ಗೆ ಚಾಲನೆ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಕಾರ್ಯಕ್ರಮವು ‘ಸಿಟಿ ಗೋಲ್ಡ್ ಆ್ಯಂಡ್ ಡೈಮಂಡ್ಸ್’ನ ಮಳಿಗೆಯಲ್ಲಿ ಗುರುವಾರ ನಡೆಯಿತು.
ಚಿತ್ರನಟ ಹಾಗು ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಬೆಳ್ಳಿ ಹಬ್ಬದ ಲೋಗೋ ಅನಾವರಣಗೊಳಿಸಿದರು. ಅಲ್ಲದೆ ಆ್ಯಂಟಿಕ್ ಫೆಸ್ಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ‘ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಸಾಧನೆಯ ಮಂದೆ ನಮ್ಮ ಸಾಧನೆ ಏನೇನೂ ಅಲ್ಲ. ನಮಗಿಂತ ನಿಜವಾದ ಹೀರೋಗಳು ಈ ಸಾಧಕರೇ ಆಗಿದ್ದಾರೆ. ವ್ಯಾಪಾರ-ವಹಿವಾಟಿನ ಮೂಲಕ ಲಾಭದತ್ತ ಹೆಚ್ಚಾಗಿ ಗಮನಹರಿಸುವ ಚಿನ್ನಾಭರಣ ಮಳಿಗೆಗಳು ಅದರಲ್ಲೂ ‘ಸಿಟಿ ಗೋಲ್ಡ್ ಆ್ಯಂಡ್ ಡೈಮಂಡ್’ ಸಂಸ್ಥೆಯು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ರವಾನಿಸಿದೆ. ಇವರಿಗೆ ಮಾಡಿದ ಸನ್ಮಾನವು ಸಮಾಜ ಸೇವೆ ಮಾಡಲು ನಮಗೂ ಸ್ಫೂರ್ತಿ ಸಿಕ್ಕಿದಂತಾಗಿವೆ ಎಂದರು.
ಮತ್ತೋರ್ವ ಮುಖ್ಯ ಅತಿಥಿ ಉಳ್ಳಾಲ ಸೈಯದ್ ಮದನಿ ದರ್ಗಾ ಮತ್ತು ಕೇಂದ್ರ ಜುಮ್ಮಾ ಮಸೀದಿಯ ಅಧ್ಯಕ್ಷ ಬಿ.ಜಿ. ಹನೀಫ್ ಹಾಜಿ ಶುಭ ಹಾರೈಸಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಚಾರ್ಮಾಡಿ ಹಸನಬ್ಬ, ಪುರಸ್ಕೃತ ಸಂಸ್ಥೆಯಾದ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಮೂಸಬ್ಬ ಬ್ಯಾರಿ, ಹಿರಿಯ ಛಾಯಾಗ್ರಾಹಕ ರವಿ ಪೊಸವಣಿಕೆ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭ ಲಕ್ಕಿಡ್ರಾ ವಿಜೇತೆ ನಿರ್ಮಲಾ ಎಚ್.ಭಂಡಾರಿ ಅವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ‘ಸಿಟಿ ಗೋಲ್ಡ್ ಆ್ಯಂಡ್ ಡೈಮಂಡ್’ನ ಆಡಳಿತ ನಿರ್ದೇಶಕರಾದ ಮುಹಮ್ಮದ್ ದಿಲ್‌ಶಾದ್ ಮತ್ತು ನೌಶಾದ್ ಚೂರಿ, ಬ್ರಾಂಚ್ ಮ್ಯಾನೇಜರ್ ಅಹ್ಮದ್ ಹಫೀಝ್, ಮಾರ್ಕೆಟಿಂಗ್ ಮ್ಯಾನೇಜರ್ ಇಮ್ರಾನ್ ಉಪಸ್ಥಿತರಿದ್ದರು. ಮುಸ್ತಫಾ ಕಣ್ಣೂರು ಕಾರ್ಯಕ್ರಮ ನಿರೂಪಿಸಿದರು.
ಸಿಟಿ ಗೋಲ್ಡ್ ಸಂಸ್ಥೆಯ 25ನೇ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರಿಗೆ ಚಿನ್ನಾಭರಣ ಖರೀದಿಯ ಮೇಕಿಂಗ್ ಚಾರ್ಜ್ ಮೇಲೆ ಶೇ.55ರಷ್ಟು ಹಾಗೂ ವಜ್ರಾಭರಣ ಖರೀದಿಯ ವಜ್ರದ ಮೌಲ್ಯದ ಮೇಲೆ ಶೇ.20ರಷ್ಟು ವಿನಾಯಿತಿ ನೀಡಲಾಗುವುದು. ಪ್ರತಿ ಖರೀದಿಯ ಗ್ರಾಹಕರಿಗೆ ಸಕ್ಯೆಾಚ್ ಆ್ಯಂಡ್ ವಿನ್ ಕೂಪನ್ ವಿತರಿಸಲಾಗುವುದು. ವಿಜೇತರಿಗೆ ಚಿನ್ನದ ನಾಣ್ಯ ಹಾಗು ಇತರೆ ಉಡುಗೊರೆಗಳು ನೀಡಲಾಗುವುದು. ಮದುವೆ ಖರೀದಿಯಲ್ಲಿನ ಪ್ರತಿ ಗ್ರಾಹಕರಿಗೂ ಕೂಪನ್ ವಿತರಿಸಲಾಗುವುದು. ವಿಜೇತ 5 ಜೋಡಿ ನವ ದಂಪತಿಗೆ ಮಲೇಷ್ಯಾ ಪ್ರವಾಸ ಕೈಗೊಳ್ಳುವ ಅವಕಾಶ ದೊರೆಯಲಿದೆ. ದೇಶ ವಿದೇಶಗಳಲ್ಲಿ ವೈವಿಧ್ಯಮಯ ರೀತಿಯಲ್ಲಿ ತಯಾರಿಸಲ್ಪಟ್ಟ ಆ್ಯಂಟಿಕ್ ಚಿನ್ನಾಭರಣಗಳ ಪ್ರದರ್ಶನ ಹಾಗು ಮಾರಾಟವು ನ.26ರವರೆಗೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Discussion about this post