ನವದೆಹಲಿ ನ.15: ಮಹತ್ವದ ಬೆಳವಣಿಗೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಬಜಾಜ್ ಫೈನಾನ್ಸ್‌ಗೆ ಭರ್ಜರಿ ಗುದ್ದು ನೀಡಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಇಕಾಮ್ ಹಾಗೂ ಇನ್ಸ್ಟಾ ಇಎಂಐ ಕಾರ್ಡ್ ಲೋನ್ ನೀಡೋದನ್ನು ರದ್ದು ಮಾಡಬೇಕು ಎಂದು ಆದೇಶ ನೀಡಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬುಧವಾರ (ನವೆಂಬರ್ 15) ತನ್ನ ‘ಇಕಾಮ್’ ಮತ್ತು ‘ಇನ್‌ಸ್ಟಾ ಇಎಂಐ ಕಾರ್ಡ್’ ಸಾಲ ಉತ್ಪನ್ನಗಳ ಅಡಿಯಲ್ಲಿ ಸಾಲಗಳ ಮಂಜೂರಾತಿ ಮತ್ತು ವಿತರಣೆಯನ್ನು ತಕ್ಷಣವೇ ನಿಲ್ಲಿಸುವಂತೆ ಬಜಾಜ್ ಫೈನಾನ್ಸ್ ಲಿಮಿಟೆಡ್‌ಗೆ ಆದೇಶ ನೀಡಿದೆ. ಆರ್‌ಬಿಐನ ಡಿಜಿಟಲ್ ಸಾಲದ ಮಾರ್ಗಸೂಚಿಗಳ ಈಗ ಇರುವ ನಿಯಮಗಳಿಗೆ ಬಜಾಜ್ ಫೈನಾನ್ಸ್ ಒಪ್ಪದ ಕಾರಣ, ಇದಕ್ಕೆ ಪ್ರತಿಕ್ರಿಯೆಯಾಗಿ ಕೇಂದ್ರೀಯ ಬ್ಯಾಂಕ್‌ನ ಈ ನಿರ್ಧಾರ ಬಂದಿದೆ. “ಭಾರತೀಯ ರಿಸರ್ವ್ ಬ್ಯಾಂಕ್ ಇಂದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆಕ್ಟ್, 1934 ರ ಸೆಕ್ಷನ್ 45L(1)(b) ಅಡಿಯಲ್ಲಿ ತನ್ನ ಅಧಿಕಾರವನ್ನು ಚಲಾವಣೆ ಮಾಡಿದ್ದು, ಬಜಾಜ್ ಫೈನಾನ್ಸ್ ಲಿಮಿಟೆಡ್‌ಗೆ ತನ್ನ ಎರಡು ಸಾಲ ನೀಡುವ ಉತ್ಪನ್ನಗಳ ಅಡಿಯಲ್ಲಿ ಸಾಲಗಳ ಮಂಜೂರಾತಿ ಮತ್ತು ವಿತರಣೆಯನ್ನು ನಿಲ್ಲಿಸುವಂತೆ ನಿರ್ದೇಶಿಸಿದೆ. ‘eCOM’ ಮತ್ತು ‘Insta EMI ಕಾರ್ಡ್’, ತಕ್ಷಣವೇ ಜಾರಿಗೆ ಬರುವಂತೆ ಈ ನಿರ್ದೇಶನ ಅನ್ವಯವಾಗಲಿದೆ’ ಎಂದು ಸೆಂಟ್ರಲ್ ಬ್ಯಾಂಕ್ ಹೇಳಿದೆ.
ನಿರ್ದಿಷ್ಟಪಡಿಸಿದ ಸಾಲ ಉತ್ಪನ್ನಗಳ ಅಡಿಯಲ್ಲಿ ಸಾಲಗಾರರಿಗೆ ‘ಪ್ರಮುಖ ವಾಸ್ತವ ಹೇಳಿಕೆಗಳನ್ನು’ ನೀಡಲು ಕಂಪನಿಯು ವಿಫಲವಾಗಿದೆ ಎಂಬುದು ಆರ್‌ಬಿಐನ ಪ್ರಾಥಮಿಕ ಕಾಳಜಿ ಎನಿಸಿಕೊಂಡಿತ್ತು. ಬಜಾಜ್ ಫೈನಾನ್ಸ್‌ನಿಂದ ಮಂಜೂರಾದ ಇತರ ಡಿಜಿಟಲ್ ಲೋನ್‌ಗಳಿಗೆ ಸಂಬಂಧಿಸಿದ ಪ್ರಮುಖ ವಾಸ್ತವ ಹೇಳಿಕೆಗಳಲ್ಲಿ ಗುರುತಿಸಲಾದ ನ್ಯೂನತೆಗಳೊಂದಿಗೆ ಈ ಲೋಪವು ಮೇಲ್ವಿಚಾರಣಾ ನಿರ್ಬಂಧಗಳನ್ನು ಪ್ರೇರೇಪಿಸಿದೆ.
ನಿಯಂತ್ರಣ ಪ್ರಾಧಿಕಾರದ ತೃಪ್ತಿಗಾಗಿ ಗುರುತಿಸಲಾದ ನ್ಯೂನತೆಗಳನ್ನು ಸರಿಪಡಿಸಿದ ನಂತರ ಮಾತ್ರ ಈ ನಿರ್ಬಂಧಗಳು ಪರಿಶೀಲನೆಗೆ ಒಳಪಟ್ಟಿರುತ್ತವೆ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಅರ್‌ಬಿಐ ಈ ನಿರ್ಧಾರ ಬೆನ್ನಲ್ಲಿಯೇ ಬಜಾಜ್ ಫೈನಾನ್ಸ್ ಲಿಮಿಟೆಡ್‌ನ ಷೇರುಗಳು ಬಿಎಸ್‌ಇಯಲ್ಲಿ ರೂ135.60 ಅಥವಾ 1.84% ರಷ್ಟು ಕುಸಿದು ರೂ.7,223.95 ಕ್ಕೆ ಕೊನೆಗೊಂಡಿದೆ.
Discover more from Coastal Times Kannada
Subscribe to get the latest posts sent to your email.
Discussion about this post