• About us
  • Contact us
  • Disclaimer
Friday, July 24, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಸ್ಕೇಟಿಂಗ್‌ನಲ್ಲಿ 4 ಗಂಟೆಗಳ ನೃತ್ಯ ಪ್ರದರ್ಶನ: ಗೋಲ್ಡನ್​​ ಬುಕ್​​ ಆಫ್​​ ವರ್ಲ್ಡ್​ ರೆಕಾರ್ಡ್​ನಲ್ಲಿ ಮಂಗಳೂರಿನ ಸಂತ ಆಗ್ನೇಸ್​ ಕಾಲೇಜಿನ ವಿದ್ಯಾರ್ಥಿನಿ ವಿಶ್ವ ದಾಖಲೆ

Coastal Times by Coastal Times
December 16, 2025
in ಕರಾವಳಿ
ಸ್ಕೇಟಿಂಗ್‌ನಲ್ಲಿ 4 ಗಂಟೆಗಳ ನೃತ್ಯ ಪ್ರದರ್ಶನ: ಗೋಲ್ಡನ್​​ ಬುಕ್​​ ಆಫ್​​ ವರ್ಲ್ಡ್​ ರೆಕಾರ್ಡ್​ನಲ್ಲಿ ಮಂಗಳೂರಿನ ಸಂತ ಆಗ್ನೇಸ್​ ಕಾಲೇಜಿನ ವಿದ್ಯಾರ್ಥಿನಿ ವಿಶ್ವ ದಾಖಲೆ
22
VIEWS
WhatsappTelegramShare on FacebookShare on Twitter

ಮಂಗಳೂರು: ಮಂಗಳೂರಿನ ಸಂತ ಆಗ್ನೇಸ್​ ಕಾಲೇಜಿನ ದ್ವಿತೀಯ ಬಿಎಸ್​ಸಿ ವಿದ್ಯಾರ್ಥಿನಿ ಸುಶ್ರವ್ಯಾ ಈ ಸಾಧನೆ ಮಾಡಿದವರು. ಸ್ಕೇಟಿಂಗ್​ ನೃತ್ಯದ ಮೂಲಕ ಅವರು ವಿಶ್ವ ದಾಖಲೆ ಮಾಡಿದ್ದಾರೆ. ಡಿ.12ರ ಬೆಳಗ್ಗೆ 8 ರಿಂದ ಮಧ್ಯಾಹ್ನ 12 ರವರೆಗೆ ನಿರಂತರ 4 ಗಂಟೆಗಳ ಕಾಲ ಸ್ಕೇಟಿಂಗ್‌ನಲ್ಲಿ ನೃತ್ಯ ಪ್ರದರ್ಶನ ನೀಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ತಮ್ಮ ಹೆಸರು ಸೇರ್ಪಡೆಗೊಳಿಸಿದ್ದಾರೆ.

ಮಂಗಳೂರು ಚಿಲಿಂಬಿಯ ಉದಯ್ ಕುಮಾರ್ ಮತ್ತು ಶಶಿರೇಖಾ ಎಸ್ ದಂಪತಿ ಪುತ್ರಿ ಸುಶ್ರವ್ಯಾ ಸಂತ ಆಗ್ನೆಸ್​ ಕಾಲೇಜು ಮಂಗಳೂರಿನ ದ್ವಿತೀಯ ಬಿಎಸ್​​​​​ಸಿ ವಿದ್ಯಾರ್ಥಿನಿ. ಅವರ ಪರಿಶ್ರಮ ಮತ್ತು ಕಲಾಸಾಧನೆಗೆ ಜಾಗತಿಕ ಮಾನ್ಯತೆ ಲಭಿಸಿದೆ. ಸುಶ್ರಾವ್ಯ ಕಳೆದ 14 ವರ್ಷಗಳಿಂದ ಸ್ಕೇಟಿಂಗ್​​ ಕ್ಷೇತ್ರದಲ್ಲಿ ತಮ್ಮ ಗುರುಗಳಾದ ಸುಮನ್​ ಶ್ರೀಕಾಂತ್​ ಇವರ ಮಾರ್ಗದರ್ಶನದಲ್ಲಿ ನಿರಂತರ ಅಭ್ಯಾಸ ಮಾಡುತ್ತಿದ್ದು, ಅದೇ ರೀತಿಯಲ್ಲಿ, ಭಾರತೀಯ ಶಾಸ್ತ್ರೀಯ ನೃತ್ಯದ ಜೂನಿಯರ್​​ ಪರೀಕ್ಷೆಯನ್ನು ಪ್ರತಿಮಾ ಶ್ರೀಧರ್​ ಅವರ ಮಾರ್ಗದರ್ಶನದಲ್ಲಿ ಹಾಗೂ ಸೀನಿಯರ್​ ಪರೀಕ್ಷೆಯನ್ನು ಸುರೇಶ್​​ ಅತ್ತಾವರ ಅವರ ಮಾರ್ಗದರ್ಶನದಲ್ಲಿ ಪೂರೈಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಕಲಾತ್ಮಕ ಸ್ಕೇಟಿಂಗ್​ ಸ್ವತಃ ಕಲಿತು ಅಭ್ಯಾಸ ಮಾಡುತ್ತಿದ್ದಾರೆ. ಸ್ಕೇಟಿಂಗ್‌ನಲ್ಲಿ ನೃತ್ಯ ಪ್ರದರ್ಶನ ನೀಡಿ ದಾಖಲೆ ಬರೆದಿರುವ ಇವರಿಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ಏಷ್ಯನ್ ಹೆಡ್ ಡಾ‌. ಮನೀಷ್ ವೈಷ್ಣೋಯಿ ಅವರು ಸಾಂಕೇತಿಕವಾಗಿ ಪದಕ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದರು.

ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲೆ ಮಾಡಿರುವ ಸುಶ್ರಾವ್ಯ‌ ಅವರಿಗೆ ಈ ದಾಖಲೆಯನ್ನು 12 ಗಂಟೆಗೂ ಹೆಚ್ಚು ಕಾಲ ಮಾಡಬೇಕು ಎಂಬ ಗುರಿ ಇತ್ತು. ಆದರೆ, ಅವರಿಗೆ ಮಧ್ಯೆ ವಾಂತಿ ಕಾಣಿಸಿಕೊಂಡ ಪರಿಣಾಮ 4 ಗಂಟೆಗೆ ಕೊನೆಗೊಳಿಸಿದ್ದಾರೆ. ಈ ಹಿಂದಿನ ದಾಖಲೆ 3 ಗಂಟೆಗಳ ಕಾಲ ಇದ್ದ ಕಾರಣ, ಅದನ್ನು ಸುಶ್ರಾವ್ಯ ಮುರಿದು ಹೊಸ ದಾಖಲೆ ಸೃಷ್ಟಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಸುಶ್ರಾವ್ಯ, “ನನಗೆ‌ 12 ಗಂಟೆಗೂ ಹೆಚ್ಚು ಸಮಯ ಸ್ಕೇಟಿಂಗ್ ನೃತ್ಯ ಮಾಡುವ ಗುರಿ ಇತ್ತು. ಆದರೆ, ಮಧ್ಯೆ ವಾಂತಿ ಕಾಣಿಸಿಕೊಂಡ ಪರಿಣಾಮ ಅದನ್ನು ನಿಲ್ಲಿಸಿದೆ. ಆದರೆ ಈ ಹಿಂದಿನ ದಾಖಲೆ ಮುರಿದು ಹೊಸ ದಾಖಲೆ ಸೃಷ್ಟಿಸಿದ್ದೇನೆ. ಈ ಸಾಧನೆಗಾಗಿ ನಿರಂತರ ಶ್ರಮ ಪಡುತ್ತಿದ್ದೆ” ಎಂದು ತಿಳಿಸಿದ್ದಾರೆ.

ಸುಶ್ರಾವ್ಯ ಅವರ ತಾಯಿ ಶಶಿರೇಖಾ ಮಾತನಾಡಿ, “ಹಿಂದೆ 90 ನಿಮಿಷದ ದಾಖಲೆ ಇತ್ತು.‌ ಆದರೆ, ಸುಶ್ರಾವ್ಯ 4 ಗಂಟೆ ಮಾಡಿ ದಾಖಲೆ ಮಾಡಿದ್ದಾಳೆ. 1ನೇ ತರಗತಿಯಿಂದ ಸ್ಕೇಟಿಂಗ್ ಕಲಿತಿದ್ದಾಳೆ. ಭರತನಾಟ್ಯದಲ್ಲಿ ಜ್ಯೂನಿಯರ್ ಮತ್ತು ಸೀನಿಯರ್ ಆಗಿದೆ. ಆದ ಕಾರಣ ಭರತನಾಟ್ಯವನ್ನು ಸ್ಕೇಟಿಂಗ್ ಮುಖಾಂತರ ಮಾಡಿದ್ದಾಳೆ. ಈಕೆ ಸಾಧನೆ ಮಾಡಿರುವುದು ತುಂಬಾ ಹೆಮ್ಮೆಯ ವಿಷಯ” ಎನ್ನುತ್ತಾರೆ.

ಸಂತ ಆಗ್ನೆಸ್​ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಡಾ. ಎಂ. ವೆನಿಸ್ಸಾ ಎ.ಸಿ. ಅವರು, “ಸುಶ್ರಾವ್ಯ ದಾಖಲೆ ಮಾಡುವ ಇಚ್ಛೆ ತೋರಿಸಿದ್ದಳು. ನಾವು ಅದನ್ನು ಪ್ರೋತ್ಸಾಹಿಸಿದ್ದೇವೆ. ಕಳೆದ ಒಂದು ವಾರ ಇದರ ಪ್ರಾಕ್ಟಿಸ್ ಮಾಡಿದ್ದಳು. ಇವತ್ತು ಕೂಡ ಅವಳು ಉತ್ಸಾಹದಿಂದ ಮಾಡಿದ್ದಾಳೆ. ಆಕೆಯ ಸಾಧನೆಗೆ ಹೆಮ್ಮೆಯಾಗುತ್ತಿದೆ‌” ಎಂದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಸುರತ್ಕಲ್ 85 ವರ್ಷದ ವೃದ್ಧೆ ಮನೆಗೆ ನುಗ್ಗಿ ಚಿನ್ನ-ನಗದು ದರೋಡೆ, ಮೂವರು ಆರೋಪಿಗಳ ಬಂಧನ

Next Post

ಉಳ್ಳಾಲ: ತಡೆ ಗೋಡೆ ನಿರ್ಮಾಣ ಕಾಮಗಾರಿ ವೇಳೆ ಗುಡ್ಡ ಕುಸಿತ; ಓರ್ವ ಕಾರ್ಮಿಕ ಸಾವು

Related Posts

ಸ್ವಯಂಚಾಲಿತವಾಗಿ ಚಲಿಸುವ ‘ಶ್ರೀ-ವಾಹನ್’ ಎಂಬ ಅತ್ಯಾಧುನಿಕ ಆಟೋನಾಮಸ್ ವಾಹನ ತಯಾರಿಸಿದ ಮಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು
ಕರಾವಳಿ

ಸ್ವಯಂಚಾಲಿತವಾಗಿ ಚಲಿಸುವ ‘ಶ್ರೀ-ವಾಹನ್’ ಎಂಬ ಅತ್ಯಾಧುನಿಕ ಆಟೋನಾಮಸ್ ವಾಹನ ತಯಾರಿಸಿದ ಮಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು

July 23, 2026
2
ಆಗಸ್ಟ್ 8, 9; ಮಂಗಳೂರಿನಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ, ಅರ್ಹ ಫಲಾನುಭವಿಗಳಿಗೆ ಹೆಸರು ನೋಂದಾಯಿಸಲು ಮನವಿ
ಕರಾವಳಿ

ಆಗಸ್ಟ್ 8, 9; ಮಂಗಳೂರಿನಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ, ಅರ್ಹ ಫಲಾನುಭವಿಗಳಿಗೆ ಹೆಸರು ನೋಂದಾಯಿಸಲು ಮನವಿ

July 22, 2026
234
Next Post
ಉಳ್ಳಾಲ: ತಡೆ ಗೋಡೆ ನಿರ್ಮಾಣ ಕಾಮಗಾರಿ ವೇಳೆ ಗುಡ್ಡ ಕುಸಿತ; ಓರ್ವ ಕಾರ್ಮಿಕ ಸಾವು

ಉಳ್ಳಾಲ: ತಡೆ ಗೋಡೆ ನಿರ್ಮಾಣ ಕಾಮಗಾರಿ ವೇಳೆ ಗುಡ್ಡ ಕುಸಿತ; ಓರ್ವ ಕಾರ್ಮಿಕ ಸಾವು

Discussion about this post

Recent News

ಕೆಲಸಕ್ಕೆಂದು ತೆರಳಿದ್ದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ ಕಡಬದ ಯುವಕ ಸೆರೆ

ಕೆಲಸಕ್ಕೆಂದು ತೆರಳಿದ್ದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ ಕಡಬದ ಯುವಕ ಸೆರೆ

July 24, 2026
1
ಪ್ರಧಾನಿ ಮೋದಿ ಭರವಸೆ ಬೆನ್ನಲ್ಲೇ ಸೋನಂ ವಾಂಗ್ಚುಕ್ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯ

ಪ್ರಧಾನಿ ಮೋದಿ ಭರವಸೆ ಬೆನ್ನಲ್ಲೇ ಸೋನಂ ವಾಂಗ್ಚುಕ್ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯ

July 24, 2026
25
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಕೆಲಸಕ್ಕೆಂದು ತೆರಳಿದ್ದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ ಕಡಬದ ಯುವಕ ಸೆರೆ

ಕೆಲಸಕ್ಕೆಂದು ತೆರಳಿದ್ದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ ಕಡಬದ ಯುವಕ ಸೆರೆ

July 24, 2026
ಪ್ರಧಾನಿ ಮೋದಿ ಭರವಸೆ ಬೆನ್ನಲ್ಲೇ ಸೋನಂ ವಾಂಗ್ಚುಕ್ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯ

ಪ್ರಧಾನಿ ಮೋದಿ ಭರವಸೆ ಬೆನ್ನಲ್ಲೇ ಸೋನಂ ವಾಂಗ್ಚುಕ್ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯ

July 24, 2026
ಸ್ವಯಂಚಾಲಿತವಾಗಿ ಚಲಿಸುವ ‘ಶ್ರೀ-ವಾಹನ್’ ಎಂಬ ಅತ್ಯಾಧುನಿಕ ಆಟೋನಾಮಸ್ ವಾಹನ ತಯಾರಿಸಿದ ಮಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು

ಸ್ವಯಂಚಾಲಿತವಾಗಿ ಚಲಿಸುವ ‘ಶ್ರೀ-ವಾಹನ್’ ಎಂಬ ಅತ್ಯಾಧುನಿಕ ಆಟೋನಾಮಸ್ ವಾಹನ ತಯಾರಿಸಿದ ಮಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು

July 23, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d