ಮಂಗಳೂರು, ಸೆ.17,2025 : ವಿಶ್ವ ಹೃದಯ ದಿನದ ಅಂಗವಾಗಿ ಕೆಎಂಸಿ ಆಸ್ಪತ್ರೆ ಮಂಗಳೂರು ಹೃದಯದ ಆರೋಗ್ಯ ಮತ್ತು ಕಾರ್ಡಿಯೋವಾಸ್ಕೂಲರ್ ರೋಗಗಳ ಕುರಿತು ಜಾಗೃತಿ ಮೂಡಿಸುವ ಅಂಗವಾಗಿ ಸಮುದಾಯ ಕೇಂದ್ರಿತ ಕಾರ್ಯಕ್ರಮಗಳನ್ನು ಘೋಷಿಸಿದೆ. ಸಾರ್ವಜನಿಕರಲ್ಲಿ ಸಕ್ರೀಯ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಆಸ್ಪತ್ರೆಯು “ ವಿಶ್ವ ಹೃದಯ ದಿನ ವಾಕಥಾನ್ 2025′ ಕಾರ್ಯಕ್ರವನ್ನು ಘೋಷಿಸಿದೆ.
ಈ ಕುರಿತು ಪತ್ರಿಕಾಘೋಷ್ಟಿಯಲ್ಲಿ ಮಾತನಾಡಿದ ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಡೀನ್ ಡಾ. ಉನ್ನಿಕೃಷ್ಣನ್ ಬಿ “ ಕೆಎಂಸಿಯಲ್ಲಿ ನಮ್ಮ ಧೈಯವು ರೋಗಿಯ ಆರೈಕೆಯನ್ನೂ ಮೀರಿದ ಉದ್ದೇಶವನ್ನು ಹೊಂದಿದೆ. ಕ್ಲಿಷ್ಟಕರವಾದ ಜೀವನಶೈಲಿಗೆ ಸಂಬಂಧಿತ ರೋಗಗಳ ಕುರಿತು ಜಾಗೃತಿಯನ್ನು ಮೂಡಿಸುವಲ್ಲಿ ಬದ್ಧರಾಗಿದ್ದೇವೆ. ವಾಕಥಾನ್ ನಂತಹ ಕಾರ್ಯಕ್ರಮದ ಮೂಲಕ ನೇರವಾಗಿ ಸಮುದಾಯಗಳನ್ನು ಒಳಗೂಡಿಸಿಕೊಂಡು ಆರೋಗ್ಯಕರ ಜೀವನವನ್ನು ನಡೆಸುವ ಬಗ್ಗೆ ಉತ್ತೇಜಿಸುವ ಹಾಗೂ ಈ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡಲಾಗುತ್ತದೆ. ಇದು ಸುಧಾರಿತ ಆರೋಗ್ಯ ಸೇವೆಯನ್ನು ಪ್ರತಿಯೊಬ್ಬರಿಗೂ ಲಭ್ಯವಾಗುವಂತೆ ಮಾಡಿ ಮಂಗಳೂರಿನಲ್ಲಿ ಆರೋಗ್ಯಕರ ಸಮುದಾಯವನ್ನು ಬೆಳೆಸುವ ನಮ್ಮ ನಿರಂತರ ಬದ್ಧತೆಯ ಭಾಗವಾಗಿದೆ. ನಮ್ಮ ಸಮಗ್ರ ಕಾರ್ಡಿಯಾಕ್ ಕೇರ್ ತಂಡವು 5 ಕಾರ್ಡಿಯಾಲಾಜಿಸ್ಟ್, 3 ಕಾರ್ಡಿಯಾಕ್ ಸರ್ಜನ್, ಎಲೆಕ್ಕೊಫಿಸಿಯಾಲಾಜಿಸ್ಟ್, 2 ಕ್ಯಾಥ್ ಲ್ಯಾಬ್, ಪರಿಣತ ತಂತ್ರಜ್ಞರು ಮತ್ತು ಉತ್ತಮ ಕೌಶಲ್ಯದ ಸಿಬ್ಬಂದಿಗಳನ್ನು ಒಳಗೊಂಡಿದೆ” ಎಂದು ಮಾಹಿತಿ ನೀಡಿದರು.
ಕೆಎಂಸಿ ಆಸ್ಪತ್ರೆಯ ಕಾರ್ಡಿಯಾಲಾಜಿ ಮುಖ್ಯಸ್ಥ ಡಾ. ನರಸಿಂಹ ಪೈ ಈ ಬಾರಿಯ ವಿಶ್ವ ಹೃದಯ ದಿನದ ಥೀಮ್ ಬಗ್ಗೆ ಮಾತನಾಡಿ “ ಈ ಬಾರಿ ವಿಶ್ವ ಹೃದಯ ದಿನವನ್ನು ‘ಡೋಂಟ್ ಮಿಸ್ ಎ ಬೀಟ್’ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಈ ಉದ್ದೇಶವು ಹೃದಯದ ಆರೋಗ್ಯದ ಕುರಿತು ಹೆಚ್ಚಿನ ನಿಗಾ, ನಿಯಮಿತ ತಪಾಸಣೆ, ಹೃದಯಕ್ಕೆ ಆರೋಗ್ಯಕರವಾದ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಕುರಿತು ಅರಿವು ಮೂಡಿಸುತ್ತದೆ. ಅದರಲ್ಲೂ ಯುವಜನತೆಯಲ್ಲಿ ಇದು ಬಹಳ ಕಳವಳಕಾರಿಯಾಗಿದ್ದು, ಜೀವನಶೈಲಿ ಅಂಶಗಳಾದ ಒತ್ತಡ, ವ್ಯಾಯಾಮದ ಕೊರತೆ ಹಾಗೂ ಅನಾರೋಗ್ಯಕರ ಆಹಾರ ಪದ್ಧತಿ ಪ್ರಮುಖ ಕಾರಣಗಳಾಗಿವೆ” ಎಂದರು.
ಇದೇ ಸಂದರ್ಭದಲ್ಲಿ ಸೆ. 21 ಭಾನುವಾರ ಬೆಳಿಗ್ಗೆ 6.30 ಕ್ಕೆ ಕೆಎಂಸಿ ವಿಶ್ವ ಹೃದಯ ದಿನ ವಾಕಥಾನ್’ ನಡೆಯಲಿದೆ ಎಂದು ಅವರು ಘೋಷಿಸಿದರು. ಈ ಕಾರ್ಯಕ್ರಮಕ್ಕೆ ಮಂಗಳೂರಿನ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ( ಡೆಪ್ಯೂಟಿ ಕಮಿಷನರ್ ಆಫ್ ಪೊಲೀಸ್) ಮಿಥುನ್ ಹೆಚ್ ಎನ್(ಐಪಿಎಸ್) ಚಾಲನೆ ನೀಡಲಿದ್ದಾರೆ. ವಾಕಥಾನ್ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿರುವ ಕೆಎಂಸಿ ಆಸ್ಪತ್ರೆಯಿಂದ ಆರಂಭವಾಗಲಿದ್ದು ಬಾಲ್ಮಟ್ಟ ರಸ್ತೆ-ತಾಜ್‌ಮಹಲ್- ಮಿಲಾಗ್ರೇಸ್ ಚರ್ಚ್- ಐಎಮ್ ಹಾಲ್- ಅತ್ತಾವರ್- ಎಸ್ ಎಲ್ ಮಾಥಿಯಾಸ್ ರಸ್ತೆ ಮೂಲಕ ಸಾಗಿ ಕಪ್ಪಿಗುಡ್ಡದ ಮರೇನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಬಳಿ ಕೊನೆಗೊಳ್ಳಲಿದೆ” ಎಂದರು.
ಆಸ್ಪತ್ರೆಯ ಕನ್ಸಲ್ವೆಂಟ್ ಕಾರ್ಡಿಯಾಲಾಜಿಸ್ಟ್ ಡಾ. ಎಮ್ ಎನ್ ಭಟ್ ಮಾತನಾಡಿ “ ನಾವು ಮಂಗಳೂರಿನ ಜನರಲ್ಲಿ ಹೃದಯ ಆರೋಗ್ಯ ಕುರಿತು ಹೆಚ್ಚುತ್ತಿರುವ ಅರಿವನ್ನು ಗಮನಿಸಿದ್ದೇವೆ. ಹಲವರು ನಿಯಮಿತ ತಪಾಸಣೆ, ವ್ಯಾಯಾಮ ಹಾಗೂ ಜಾಗೃತ ಆಹಾರ ಸೇವನೆ ಮೂಲಕ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಆದರೆ ಆರೋಗ್ಯವಾಗಿರಲು ಇಂತಹ ಪ್ರಯತ್ನಗಳು ನಿರಂತರವಾಗಿರಬೇಕು . ಕೆಎಂಸಿ ಆಸ್ಪತ್ರೆ ಕಳೆದ 20 ವರ್ಷಗಳಿಂದ * ಹೃದಯಕ್ಕಾಗಿ ನಡಿಗೆ (ವಾಕ್ ಫಾರ್ ಯುವರ್ ಹಾರ್ಟ್) ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದೆ. ಈ ಬಾರಿಯೂ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂಡಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ “ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಡಿಯಾಕ್ ಸರ್ಜನ್ ಡಾ ಹರೀಶ್ ರಾಘವನ್ “ ಈ ಕಾರ್ಯಕ್ರಮವು ವಿನೋದ ಮತ್ತು ಮಾಹಿತಿಯುಕ್ತವಾಗಿದೆ. ಹಾಗೇ ಸರಳವಾದ ಮತ್ತು ಸಕಾರಾತ್ಮಕ ಬದಲಾವಣೆಗೆ ಪ್ರೇರೇಪಿಸುವಂತದ್ದಾಗಿದೆ. 1000 ಮೀಟರ್ ಮೆಡ್ಲೆ ರಿಲೇ ರಾಷ್ಟ್ರೀಯ ಚಿನ್ನದ ಪದಕ ವಿಜೇತ ಮಾಸ್ಟರ್ ಯಶಸ್ ವಾಕಥಾನ್‌ನ ಟಾರ್ಚ್ ಬೇರ ಆಗಲಿದ್ದಾರೆ. ವಿವಿಧ ಸ್ಪರ್ಧೆಯ ವಿಜೇತರಿಗೆ ಮರೇನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಸೆ.21ರಂದು ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು” ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕಾರ್ಡಿಯೊ ಥೊರಾಕಿಕ್ ಸರ್ಜನ್ ಡಾ. ಐರೇಶ್ ಶೆಟ್ಟಿ, ಸ್ಪರ್ಧಿಗಳಿಗೆ ಕೆಂಪು ಬಣ್ಣದ ಧಿರಿಸು ಧರಿಸುವಂತೆ ಸಲಹೆ ನೀಡಿದರು. ಜೊತೆಗೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಬೆಸ್ಟ್ ಕಾರ್ಪೋರೇಟ್ ಗ್ರೂಪ್/ಸಂಸ್ಥೆ, ಮೋಸ್ಟ್ ಎಂಥುಸಿಯಾಸ್ಟಿಕ್ ಪಾರ್ಟಿಸಿಪೆಂಟ್ಸ್, ಉತ್ತಮ ಘೋಷವಾಕ್ಯ ಮತ್ತು ಭಿತ್ತಿಪತ್ರ, ಸೇರಿ ವಿವಿಧ ವಿಭಾಗದಲ್ಲಿ ಉತ್ತಮ ಬಹುಮಾನ ಗೆಲ್ಲಬಹುದು ಎಂದರು. ವಾಕಥಾನ್ ಬಳಿಕ ಬೆಳಗಿನ ಉಪಹಾರ ಕೂಡ ಲಭ್ಯವಿದ್ದು ವಾಕಥಾನ್‌ನ ಕೊನೆಯ ಸ್ಥಳದಿಂದ ವಾಪಸ್ ಆರಂಭದ ಸ್ಥಳಕ್ಕೆ ಬರಲು ವಾಹನ ಸೌಲಭ್ಯ ಕೂಡ ನೀಡಲಾಗಿದೆ.ಕಳೆದ ಬಾರಿ 1 ಸಾವಿರ ಜನರು ವಾಕಥಾನ್‌ನಲ್ಲಿ ಭಾಗವಹಿಸಿದ್ದು ಈ ಬಾರಿ ಭಾಗವಹಿಸುವಿಕೆ ಮತ್ತಷ್ಟು ಹೆಚ್ಚುವ ಭರವಸೆ ಇದೆ ಎಂದರು. ಕಾರ್ಯಕ್ರಮದಲ್ಲಿ ಭಾಗವಹಿಸಲು ನೋಂದಣಿ ಕಡ್ಡಾಯವಾಗಿದ್ದು ಉಚಿತವಾಗಿದೆ. ಆಸಕ್ತರು +91 9008167071 ಸಂಖ್ಯೆಗೆ ವಾಟ್ಯಾಪ್ ಮೂಲಕ ಹೆಸರು ನೋಂದಾಯಿಸುವಂತೆ ತಿಳಿಸಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post