ಮಂಗಳೂರು: ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದ ಸೇವಾ ವಿಭಾಗ ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಮಂಗಳೂರು ಇದರ 2026-28ನೆಯ ಸಾಲಿಗೆ ನೂತನ ಸಮಿತಿ ರಚನೆ ಮಾಡಲಾಗಿದ್ದು, ಸುರೇಶ್ ಆರ್. ಅಮೀನ್ ರವರು ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ವಕೀಲೆ ಪುಷ್ಪಲತಾ ಗಟ್ಟಿ, ಉಪಾಧ್ಯಕ್ಷರುಗಳಾಗಿ ಡಾ. ಸುಚಿತ್ರಾ ರಾವ್,ಡಾ. ಅಶೋಕ್ ಶೆಣೈ, ಕೃಷ್ಣ ಶೆಟ್ಟಿ ಮತ್ತು ದಿನೇಶ್ ರಾವ್ ಆಯ್ಕೆಯಾಗಿದ್ದಾರೆ. ಸಿ ಎ. ರಾಮನಾಥ್ ನಾಯಕ್ ಕೋಶಾಧಿಕಾರಿ, ವಾಮನ್ ಮೈಂದನ್ ಮತ್ತು ಶರೂನ್ ರಾಜ್ ಜೊತೆ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಲಿದ್ದಾರೆ. ಸದಸ್ಯರುಗಳಾಗಿ ಆರ್.ಕೆ. ಶಿರೂರ್,ಭರತ್ ಕುಮಾರ್ ಎರ್ಮಾಳ್,ಸಿ ಎ.ಸುದೇಶ್ ರೈ, ಸೋಮಶೇಖರ್ ಮತ್ತು ಭರತ್ ಬಂಗೇರ ಆಯ್ಕೆಯಾಗಿದ್ದಾರೆ ಎಂದು ಮಠದ ಪ್ರಕಟಣೆ ತಿಳಿಸಿದೆ.
Discover more from Coastal Times Kannada
Subscribe to get the latest posts sent to your email.







Discussion about this post