ಬೈಂದೂರು ಜ.18 : ಸಹಕಾರ ಭಾರತಿ ಸ್ಥಾಪನ ದಿನಾಚರಣೆಯನ್ನು ನಾಗೂರಿನ ಲಲಿತಾಕೃಷ್ಣ ಸಭಾ ಭವನ ನದಲ್ಲಿ ಆಚರಿಸಲಾಯಿತು. ಉದ್ಘಾಟನೆಯನ್ನು ಬೋಳ ಸದಾಶಿವ ಶೆಟ್ಟಿ ಜಿಲ್ಲಾ ಅಧ್ಯಕ್ಷರು ಸಹಕಾರ ಭಾರತಿ ಉಡುಪಿ ಇವರು ನೆರವೇರಿಸಿಕೊಟ್ಟು.
ಸಹಕಾರ ಭಾರತಿ ಉದ್ದೇಶಗಳು, ಮಾತು ವಿಧ ವಿಧ ವಾದ ಉದ್ದೇಶಗೋಸ್ಕರ ಸಹಕಾರಿ ಸಂಘಗಳು ಕೆಲಸ ಮಾಡುತ್ತಾ ಸಮಾಜದ ಉನ್ನತಿಗೆ ಶ್ರಮಿಸುತಿವೆ . ಈ ದಿಸೆಯಲ್ಲಿ ಸಹಕಾರ ಭಾರತಿ ಸಂಘಟನಾತ್ಮಕವಾಗಿ ಕೆಲಸ ಮಾಡುದರ ಮೂಲಕ ಎಲ್ಲಾ ಸಹಕಾರಿ ಸಂಘಗಳಲ್ಲಿ ಸಹಕಾರ ಭಾರತಿ ಭಾಗವಹಿಸುವಂತಾಗಬೇಕು ಎಂದು ಹೇಳಿದರು .

ಮುಖ್ಯ ಅತಿಥಿಗಳಾದ ಮಂಜುನಾಥ್ ಪೂರ್ಣವಾದಿ ಕಾರ್ಯದರ್ಶಿ ಕರ್ನಾಟಕ ಇವರು ಮಾತನಾಡಿ, ಸಹಕಾರ ಭಾರತಿ.ಜಿಲ್ಲಾ ಸಮಾವೇಶವನ್ನು ಮಾಡುವ ಬಗ್ಗೆ ಎಲ್ಲಾ ಪ್ರಕೋಷ್ಟಗಳ ಪ್ರತಿನಿದಿಗಳು ಹಾಗೂ ತಾಲೂಕಿನಲ್ಲಿ ಸದಸ್ಯತ್ವ ಮಾಡುದರ ಮೂಲಕ ಸಂಘಟಿತರಾಗಬೇಕು ಎಂದರು.

ಮೋಹನ್ ಕುಂಬ್ಳೆಕರ್ ವಿಭಾಗ ಪ್ರಮುಖ್. ಮಂಗಳೂರು. ಇವರು ಮಾತನಾಡುತ್ತಾ. ಸಹಕಾರ ಭಾರತಿ. ಹೇಗೆ ಹುಟ್ಟಿತು..ಮತ್ತು ಲಕ್ಷ್ಮಣ್ ರಾವ್ ಇನಮ್ದರ್ ಅವರಿಗೆ ಸಹಕಾರ ಭಾರತಿ ಯ ಬಗ್ಗೆ ದೂರದ್ರಷ್ಟಿ ಹೇಗಿತ್ತು ಮತ್ತು.. ಪ್ರಧಾನಿ ಮೋದಿಯವರನ್ನು ಶಿಷ್ಯರಾಗಿಸಿಕೊಂಡು.. ಸಹಕಾರ ಭಾರತಿ ಇವತ್ತಿನ ರಾಷ್ಟೀಯ ಸಹಕಾರಿ ಸಚಿವ ಅಮಿತ್ ಷಾ, ಅವರ ಮೂಲಕ ಸಹಕಾರ ಭಾರತಿ ರಾಷ್ಟ್ರದಲ್ಲಿ ಅಮೂಲಾಘ್ರ ಬದಲಾವಣೆಯನ್ನು ಕಾಣುತ್ತಿದೆ ಎಂದರು.

ವೇದಿಕೆಯಲ್ಲಿ ಸಾಹಿತಿ. ಹಾಗೂ ಸಹಕಾರಿ ಧುರೀಣರಾದ. ಕೆ. ಪುಂಡಲೀಕ್ ನಾಯಕ್ ಅವರನ್ನು ಸನ್ಮಾನಿಸಲಾಯಿತು..

ಅಶೋಕ ವಿ ಆಚಾರ್ಯ ಅಧ್ಯಕ್ಷರು ಸಹಕಾರ ಭಾರತಿ ಬೈಂದೂರು. ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ ಬೈಂದೂರಿನಲ್ಲಿ ಸಂಘಟನೆಯನ್ನು ಗಟ್ಟಿಗೊಳಿಸುವಲ್ಲಿ. ಎಲ್ಲರ ಸಹಕಾರವನ್ನು ಕೋರುತ್ತಾ, ಎಲ್ಲಾ ಕಾರ್ಯಕರ್ತರು ಸದಸ್ಯತ್ವ ವನ್ನು ಪಡೆದುಕೊಂಡು ಮುಂದಿನ ದಿನಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿ ಸದಸ್ಯರು ಸೇರುವಂತೆ ನೋಡಿಕೊಳ್ಳೋಣ ಎಂದರು.

ಸಭೆಯಲ್ಲಿ ವಿದ್ಯಾ ಪೈ ಜಿಲ್ಲಾ ಮಹಿಳಾ ಪ್ರಕೋಷ್ಟದ ಪ್ರಮುಖರು, ಪ್ರಸಾದ್ ಶೆಟ್ಟಿ. ಜಿಲ್ಲಾ ಫಾಕ್ಸ್ ಪ್ರಕೋಷ್ಟದ ಪ್ರಮುಖರು , ಮಂಜು ದೇವಾಡಿಗ ಬಿಜೂರ್, ವೆಂಕಟೇಶ್ ಹೆಬ್ಬಾರ್, ನಾಯ್ಕನ ಕಟ್ಟೆ, ಪ್ರಕೋಸ್ಟ್ ಪ್ರಮುಖರು ಹಾಗೂ ದೀಪಕ್ ಕುಮಾರ್ ಶೆಟ್ಟಿ ಬಿ. ಜೆ. ಪಿ ಮಂಡಲ ಅಧ್ಯಕ್ಷರು. ಪ್ರಮುಖರು ಉಪಸ್ಥಿತರಿದ್ದರು.
ಆನಂದ್ ಖಾರ್ವಿ ತಾಲ್ಲೂಕು ಉಪಾಧ್ಯಕ್ಸರು ಸ್ವಾಗತಿಸಿದರು, ರಮೇಶ್ ಪೈ. ತಾಲ್ಲೂಕು ಉಪಾಧ್ಯಕ್ಸರು ಧನ್ಯವಾದ ಸಮರ್ಪಿಸಿದರು, ಉಮೇಶ್ ಬಿಜೂರ್ ಕಾರ್ಯದರ್ಶಿ ನಿರೂಪಣೆ ಮಾಡಿದರು.
Discover more from Coastal Times Kannada
Subscribe to get the latest posts sent to your email.
Discussion about this post