ಚೆನ್ನೈ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಸೆಲಬ್ರಿಟಿ ದಂಪತಿಯಾದ ಧನುಷ್- ಐಶ್ವರ್ಯಾ ರಜನಿಕಾಂತ್ ಅವರು ವಿಚ್ಛೇದನ ಘೋಷಿಸಿದ್ದಾರೆ. ಇದರೊಂದಿಗೆ ಅವರಿಬ್ಬರ 18 ವರ್ಷಗಳ ದಾಂಪತ್ಯ ಕೊನೆಗೊಂಡಂತಾಗಿದೆ.
ಖ್ಯಾತ ತಮಿಳು ಸಿನಿಮಾ ನಟರಾಗಿರುವ ಧನುಷ್ ಮತ್ತು ರಜನಿಕಾಂತ್ ಪುತ್ರಿ ಐಶ್ವರ್ಯಾ ತಮ್ಮ ವಿಚ್ಚೇದನ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

ಧನುಷ್ ಮತ್ತು ಐಶ್ವರ್ಯಾ ಅವರು 2004ರಲ್ಲಿ ವಿವಾಹವಾಗಿದ್ದರು. ಐಶ್ವರ್ಯಾ ಅವರು ರಜನಿಕಾಂತ್ ಅವರ ಹಿರಿಯ ಪುತ್ರಿಯಾಗಿದ್ದಾರೆ. ವಿವಾಹವಾದಾಗ ಧನುಷ್ ಅವರಿಗೆ 21 ವರ್ಷವಾಗಿದ್ದರೆ ಐಶ್ವರ್ಯಾ ಅವರಿಗೆ 23 ವರ್ಷ ವಯಸ್ಸು.
ಧನುಷ್ ತಮ್ಮ ಡಿವೋರ್ಸ್ ಕುರಿತಾಗಿ ಉದ್ದದ ಪೋಸ್ಟ್ ಹಾಕಿಕೊಂಡಿದ್ದರೆ, ಐಶ್ವರ್ಯಾ ಅವರು ಅದನ್ನೇ ರೀಪೋಸ್ಟ್ ಮಾಡಿ ‘ಹೆಚ್ಚೇನೂ ಹೇಳುವುದಿಲ್ಲ ಅಂಡರ್ ಸ್ಟ್ಯಾಂಡಿಂಗ್ ಮತ್ತು ಪ್ರೀತಿ ಇರಲಿ’ ಎಂದು ಬರೆದುಕೊಂಡಿದ್ದಾರೆ.
