ಬೆಂಗಳೂರು: ನಗರದ ಪ್ರತಿಷ್ಠಿತ ಶಾಲೆಯೊಂದರ ವಿದ್ಯಾರ್ಥಿಗಳು ಶಾಲೆ ಹೊರಗೆ ಕಾದಾಟ ನಡೆಸಿದ್ದು, ಈ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಶಾಲಾ ಸಮವಸ್ತ್ರದಲ್ಲಿಯೇ ವಿದ್ಯಾರ್ಥಿಗಳ ಎರಡು ಗುಂಪು ಶಾಲೆಯ ಆವರಣದಲ್ಲಿ ಪರಸ್ಪರ ಹಿಂಸಾತ್ಮಕವಾಗಿ ಹಲ್ಲೆ ಹಾಗೂ ನಿಂದನೆ ಮಾಡಿಕೊಂಡಿರುವುದು ಕಂಡು ಬಂದಿದೆ. ಬಿಷಪ್ ಕಾಟನ್ ಬಾಲಕಿಯರ ಶಾಲೆಯ ಹಲವಾರು ವಿದ್ಯಾರ್ಥಿನಿಯರು ಹೊಡೆದಾಡಿಕೊಂಡಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ವಿದ್ಯಾರ್ಥಿನಿಯರು ಪರಸ್ಪರ ಕೂದಲನ್ನು ಎಳೆದಾಡಿಕೊಂಡು ಮತ್ತು ಹಿಂಸಾತ್ಮಕವಾಗಿ ತಳ್ಳಾಡಿಕೊಂಡಿರುವುದು ಕಂಡುಬಂದಿದೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
https://twitter.com/jamesaravind98/status/1526803125004251136?s=20&t=QNHUW8GWXaMUrS_iF04otw
ವಿದ್ಯಾರ್ಥಿಗಳು ಒಬ್ಬರನ್ನೊಬ್ಬರು ಹೊಡೆಯಲು ಕೋಲುಗಳನ್ನು ಬಳಸಿರುವುದು ಕಂಡುಬಂದಿದೆ ಮತ್ತು ಒಬ್ಬ ವಿದ್ಯಾರ್ಥಿಯು ಯುವತಿಯೊಬ್ಬಳನ್ನು ಹಿಂಸಾತ್ಮಕವಾಗಿ ಕೂದಲಿನಿಂದ ಮೆಟ್ಟಿಲುಗಳ ಕೆಳಗೆ ಎಳೆದುಕೊಂಡು ಹೋಗುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಈ ಹೊಡೆದಾಟಕ್ಕೆ ನಿಖರ ಕಾರಣಗಳು ಕಂಡು ಬಂದಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಗಳ ಪ್ರಕಾರ ಬಾಯ್ ಫ್ರಂಡ್ಸ್ ವಿಚಾರಕ್ಕೆ ಇಬ್ಬರು ಯುವತಿಯರ ನಡುವೆ ಜಗಳವಾಗಿದೆ ಎಂದು ಹೇಳಲಾಗುತ್ತಿದೆ. ಜಟಾಪಟಿಯಲ್ಲಿ ಕೆಲ ವಿದ್ಯಾರ್ಥಿಗಳು ಗಾಯಗೊಂಡಿದ್ದು, ಕೆಲವರ ಮೂಗಿನಲ್ಲಿ ರಕ್ತಸ್ರಾವಾಗಿದೆ ಎಂದು ಹೇಳಲಾಗುತ್ತಿದೆ.
https://twitter.com/jamesaravind98/status/1526802210893357057?s=20&t=QNHUW8GWXaMUrS_iF04otw
Discussion about this post