• About us
  • Contact us
  • Disclaimer
Saturday, July 18, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಗಳೂರು: 15ಕ್ಕೂ ಹೆಚ್ಚು ದರೋಡೆ ಮಾಡಿದ್ದ ನೇಪಾಳದ ಕುಖ್ಯಾತ ಗ್ಯಾಂಗ್ ಬಂಧನ, 10 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ವಶಕ್ಕೆ

Coastal Times by Coastal Times
July 18, 2026
in ಕ್ರೈಮ್ ನ್ಯೂಸ್
ಮಂಗಳೂರು: 15ಕ್ಕೂ ಹೆಚ್ಚು ದರೋಡೆ ಮಾಡಿದ್ದ ನೇಪಾಳದ ಕುಖ್ಯಾತ ಗ್ಯಾಂಗ್ ಬಂಧನ, 10 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ವಶಕ್ಕೆ
13
VIEWS
WhatsappTelegramShare on FacebookShare on Twitter

ಮಂಗಳೂರು: ನಗರದಲ್ಲಿ ಸರಣಿ ದರೋಡೆಗೆ ಸ್ಕೆಚ್ ಹಾಕಿದ್ದ ನೇಪಾಳ ಮೂಲದ ಕುಖ್ಯಾತ ಮನೆಗಳ್ಳರ ಜಾಲವನ್ನು ಬರ್ಕೆ ಠಾಣಾ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ನೇಪಾಳದ ಚೈನ್ ಪುರ್ ಜಿಲ್ಲೆಯ ಕೇತ್ ಕೊಟ್ ಗ್ರಾಮದ ನಿವಾಸಿ ತಿಲಕ್ ಕುಮಾರ್ ಖಡ್ಕ ಅಲಿಯಾಸ್ ತಿಲಕ್ ಖಡ್ಕ (36), ಚೈನ್ಪೂರು ಜಿಲ್ಲೆ, ಮಸ್ಟಾ ಗಾಂವಪಾಲಿಕಾ, ನೇಪಾಳ. ಅಶೋಕ್ ರಾಜ್ ಅಲಿಯಾಸ್ ಅಶೋಕ್ ಸಿಂಗ್ ಠಾಕುರಿ (33), ಬಜಂಗ್ ಜಿಲ್ಲೆ, ಮಸ್ಟಾ ಗಾಂವಪಾಲಿಕಾ, ನೇಪಾಳ. ದಿಪೆಂದರ್ ರಸೈಲಿ (25), ಕೈಲಾಲಿ ಜಿಲ್ಲೆ, ಚುರೆ ಗಾಂವ ಪಾಲಿಕಾ, ನೇಪಾಳ.

ಉರ್ವ ಮಾರ್ಕೆಟ್ ಬಳಿಯ ಮನೆಯೊಂದರಲ್ಲಿ ನಡೆದಿದ್ದ ಭಾರಿ ಕಳ್ಳತನದ ಬೆನ್ನತ್ತಿದ ಖಾಕಿ ಪಡೆ, ಘಟನೆ ನಡೆದ ಕೇವಲ ಐದೇ ದಿನಗಳಲ್ಲಿ ಮೂವರು ಕಳ್ಳರನ್ನು ಹೆಡೆಮುರಿ ಕಟ್ಟಿದೆ. ಬಂಧಿತರಿಂದ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಒಡವೆಗಳು ಹಾಗೂ ಮಹಾರಾಷ್ಟ್ರದಲ್ಲಿ ದೋಚಿದ್ದ ಭಾರಿ ಪ್ರಮಾಣದ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಜುಲೈ 11ರಂದು ಉರ್ವ ಮಾರುಕಟ್ಟೆ ಸಮೀಪದ ಮಠದಕಣಿಯ ನಿವಾಸಿಯೊಬ್ಬರು ತಮ್ಮ ಮನೆಗೆ ಬೀಗ ಹಾಕಿ ವಿಟ್ಲ ಕಡಂಬುನಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಮರುದಿನ ಜುಲೈ 12ರಂದು ಬೆಳಿಗ್ಗೆ ಬಂದು ನೋಡಿದಾಗ ಕಳ್ಳರು ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿ, ಗೋದ್ರೇಜ್‌ನಲ್ಲಿದ್ದ 64 ಗ್ರಾಂ ಬಂಗಾರದ ಒಡವೆಗಳು ಹಾಗೂ 25,000 ರೂಪಾಯಿ ನಗದು ಒಳಗೊಂಡಂತೆ ಒಟ್ಟು 8.57 ಲಕ್ಷ ಮೌಲ್ಯದ ಸೊತ್ತುಗಳನ್ನು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬರ್ಕೆ ಠಾಣಾ ಅಧಿಕಾರಿಗಳು ಮತ್ತು ಸಿಬ್ಬಂದಿ ಜುಲೈ 17ರ ಮುಂಜಾನೆ ಬೋಳೂರು ಪರಿಸರದಲ್ಲಿ ಕಾರ್ಯಾಚರಣೆ ನಡೆಸಿ ಮೂವರು ನೇಪಾಳಿ ಕಳ್ಳರನ್ನು ಸೆರೆಹಿಡಿದಿದ್ದಾರೆ. ಬಂಧಿತ ಆರೋಪಿಗಳ ವಶದಿಂದ ಮಠದಕಣಿ ಮನೆಯಿಂದ ಕಳವಾಗಿದ್ದ ಎಲ್ಲಾ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಇದರೊಂದಿಗೆ, ಈ ಗ್ಯಾಂಗ್ ಮಹಾರಾಷ್ಟ್ರದ ನಾಸಿಕ್ ನಗರದಲ್ಲಿ ದೋಚಿದ್ದ ಬರೋಬ್ಬರಿ 790 ಗ್ರಾಂ ತೂಕದ ಬೆಳ್ಳಿಯ ಆಭರಣಗಳನ್ನು ಜಪ್ತಿ ಮಾಡಲಾಗಿದ್ದು, ವಶಪಡಿಸಿಕೊಂಡ ಒಟ್ಟು ಮಾಲಿಕತ್ವದ ಮೌಲ್ಯ 10 ಲಕ್ಷ ರೂಪಾಯಿ ದಾಟುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಖದೀಮರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಇವರ ಅಂತರರಾಜ್ಯ ದರೋಡೆ ಜಾಲ ಬಹಿರಂಗಗೊಂಡಿದೆ. ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಮಂಗಳೂರಿನ ಉರ್ವ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನಕ್ಕೆ ಯತ್ನಿಸಿ ವಿಫಲವಾಗಿದ್ದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ, ಕರ್ನಾಟಕದ ಸಿಲಿಕಾನ್ ಸಿಟಿ ಬೆಂಗಳೂರು, ದಾವಣಗೆರೆ, ಕರಾವಳಿಯ ಉಡುಪಿ ಸೇರಿದಂತೆ ರಾಜ್ಯದ ವಿವಿಧೆಡೆ 15ಕ್ಕೂ ಹೆಚ್ಚು ಮನೆಗಳ್ಳತನ ಕೃತ್ಯಗಳಲ್ಲಿ ಇವರು ಭಾಗಿಯಾಗಿದ್ದು, ಇವರ ವಿರುದ್ಧ ಸರಣಿ ಪ್ರಕರಣಗಳು ದಾಖಲಾಗಿವೆ. ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು, ದೇಶದ ರಾಜಧಾನಿ ದೆಹಲಿ ಹಾಗೂ ಹರಿಯಾಣ ರಾಜ್ಯಗಳಲ್ಲೂ ಈ ಗ್ಯಾಂಗ್ ಕಳ್ಳತನ ನಡೆಸಿರುವ ಮಾಹಿತಿ ಲಭ್ಯವಾಗಿದ್ದು, ಆಯಾ ರಾಜ್ಯಗಳ ಪೊಲೀಸರಿಂದ ಮಾಹಿತಿ ಕಲೆಹಾಕಲಾಗುತ್ತಿದೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ದಕ್ಷಿಣ ಕನ್ನಡ ಜಿಲ್ಲೆಗೆ ‘ಆರೆಂಜ್ ಅಲರ್ಟ್’: ಜುಲೈ 18ರಂದು ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ

Next Post

ವೆಸ್ಟ್ ಇಂಡೀಸ್‌ ಕ್ರಿಕೆಟ್​​ ದಂತಕಥೆ, ಆಲ್​ರೌಂಡರ್ ಸರ್ ಗ್ಯಾರಿ ಸೋಬರ್ಸ್ ನಿಧನ

Related Posts

ಬಂಟ್ವಾಳ ಬಿಸಿ ರೋಡ್​ನ ಬಸ್ ನಿಲ್ದಾಣದಲ್ಲಿ ಯುವತಿ ಹತ್ಯೆಗೈದ ಆರೋಪಿ ಪೊಲೀಸ್ ಬಲೆಗೆ; ಸಿಕ್ಕಿಬೀಳುವ ಭೀತಿಯಲ್ಲಿ ಇಲಿ ಪಾಷಾಣ ಸೇವಿಸಿ ಆಸ್ಪತ್ರೆ ಪಾಲು!
ಕ್ರೈಮ್ ನ್ಯೂಸ್

ಬಂಟ್ವಾಳ ಬಿಸಿ ರೋಡ್​ನ ಬಸ್ ನಿಲ್ದಾಣದಲ್ಲಿ ಯುವತಿ ಹತ್ಯೆಗೈದ ಆರೋಪಿ ಪೊಲೀಸ್ ಬಲೆಗೆ; ಸಿಕ್ಕಿಬೀಳುವ ಭೀತಿಯಲ್ಲಿ ಇಲಿ ಪಾಷಾಣ ಸೇವಿಸಿ ಆಸ್ಪತ್ರೆ ಪಾಲು!

July 17, 2026
57
ಸುರತ್ಕಲ್​ನಲ್ಲಿ ವೈದ್ಯಕೀಯ ವಿದ್ಯಾರ್ಥಿನಿ 5ನೇ ಮಹಡಿಯಿಂದ ಹಾರಿ ಆತ್ಮಹತ್ಯೆ
ಕ್ರೈಮ್ ನ್ಯೂಸ್

ಸುರತ್ಕಲ್​ನಲ್ಲಿ ವೈದ್ಯಕೀಯ ವಿದ್ಯಾರ್ಥಿನಿ 5ನೇ ಮಹಡಿಯಿಂದ ಹಾರಿ ಆತ್ಮಹತ್ಯೆ

July 15, 2026
62
Next Post
ವೆಸ್ಟ್ ಇಂಡೀಸ್‌ ಕ್ರಿಕೆಟ್​​ ದಂತಕಥೆ, ಆಲ್​ರೌಂಡರ್ ಸರ್ ಗ್ಯಾರಿ ಸೋಬರ್ಸ್ ನಿಧನ

ವೆಸ್ಟ್ ಇಂಡೀಸ್‌ ಕ್ರಿಕೆಟ್​​ ದಂತಕಥೆ, ಆಲ್​ರೌಂಡರ್ ಸರ್ ಗ್ಯಾರಿ ಸೋಬರ್ಸ್ ನಿಧನ

Discussion about this post

Recent News

ವೆಸ್ಟ್ ಇಂಡೀಸ್‌ ಕ್ರಿಕೆಟ್​​ ದಂತಕಥೆ, ಆಲ್​ರೌಂಡರ್ ಸರ್ ಗ್ಯಾರಿ ಸೋಬರ್ಸ್ ನಿಧನ

ವೆಸ್ಟ್ ಇಂಡೀಸ್‌ ಕ್ರಿಕೆಟ್​​ ದಂತಕಥೆ, ಆಲ್​ರೌಂಡರ್ ಸರ್ ಗ್ಯಾರಿ ಸೋಬರ್ಸ್ ನಿಧನ

July 18, 2026
11
ಮಂಗಳೂರು: 15ಕ್ಕೂ ಹೆಚ್ಚು ದರೋಡೆ ಮಾಡಿದ್ದ ನೇಪಾಳದ ಕುಖ್ಯಾತ ಗ್ಯಾಂಗ್ ಬಂಧನ, 10 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ವಶಕ್ಕೆ

ಮಂಗಳೂರು: 15ಕ್ಕೂ ಹೆಚ್ಚು ದರೋಡೆ ಮಾಡಿದ್ದ ನೇಪಾಳದ ಕುಖ್ಯಾತ ಗ್ಯಾಂಗ್ ಬಂಧನ, 10 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ವಶಕ್ಕೆ

July 18, 2026
13
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ವೆಸ್ಟ್ ಇಂಡೀಸ್‌ ಕ್ರಿಕೆಟ್​​ ದಂತಕಥೆ, ಆಲ್​ರೌಂಡರ್ ಸರ್ ಗ್ಯಾರಿ ಸೋಬರ್ಸ್ ನಿಧನ

ವೆಸ್ಟ್ ಇಂಡೀಸ್‌ ಕ್ರಿಕೆಟ್​​ ದಂತಕಥೆ, ಆಲ್​ರೌಂಡರ್ ಸರ್ ಗ್ಯಾರಿ ಸೋಬರ್ಸ್ ನಿಧನ

July 18, 2026
ಮಂಗಳೂರು: 15ಕ್ಕೂ ಹೆಚ್ಚು ದರೋಡೆ ಮಾಡಿದ್ದ ನೇಪಾಳದ ಕುಖ್ಯಾತ ಗ್ಯಾಂಗ್ ಬಂಧನ, 10 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ವಶಕ್ಕೆ

ಮಂಗಳೂರು: 15ಕ್ಕೂ ಹೆಚ್ಚು ದರೋಡೆ ಮಾಡಿದ್ದ ನೇಪಾಳದ ಕುಖ್ಯಾತ ಗ್ಯಾಂಗ್ ಬಂಧನ, 10 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ವಶಕ್ಕೆ

July 18, 2026
ದಕ್ಷಿಣ ಕನ್ನಡ ಜಿಲ್ಲೆಗೆ ‘ಆರೆಂಜ್ ಅಲರ್ಟ್’: ಜುಲೈ 18ರಂದು ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಜಿಲ್ಲೆಗೆ ‘ಆರೆಂಜ್ ಅಲರ್ಟ್’: ಜುಲೈ 18ರಂದು ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ

July 17, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d