ಮಂಗಳೂರು: ದಿನಾಂಕ 18-08-2023 ರಂದು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಉಳ್ಳಾಯಿಬೆಟ್ಟು ಗ್ರಾಮದ ಇಡ್ಯಾ ಬಳಿ ಪಲ್ಗುಣಿ ನದಿತೀರದಲ್ಲಿ ಅಕ್ರಮವಾಗಿ ಮರಳು ಸಂಗ್ರಹ ಮತ್ತು ಸಾಗಾಟವನ್ನು ಪತ್ತೆ ಹಚ್ಚಿರುವ ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ಧನ್ಯಾ ಎನ್. ನಾಯಕ್ ನೇತೃತ್ವದ ಪೊಲೀಸ್ ತಂಡ ದಾಳಿ ಮಾಡಿದಾಗ, ಫಲ್ಗುಣಿ ನದಿಯ ದಕ್ಷಿಣ ತೀರದ ಸ್ಥಳದಲ್ಲಿದ್ದ ಸರಕಾರಿ ಖನಿಜ ಸಂಪತ್ತಾದ ಸಾವಯವ ಮರಳನ್ನು ಜೆ.ಸಿ.ಬಿ ಮತ್ತು ಡೋಜರ್ ಮೂಲಕ ಟಿಪ್ಪರ್ ಲಾರಿಗಳಿಗೆ ತುಂಬಿಸುತ್ತಿದ್ದ ಜೆ.ಸಿ.ಬಿ ಮತ್ತು ಡೋಜರ್ ಚಾಲಕ ಹಾಗೂ ಅಲ್ಲಿಯೇ ನಿಂತಿದ್ದ ಕೆಲವು ವ್ಯಕ್ತಿಗಳು ನಮ್ಮನ್ನು ಕಂಡು ಪರಾರಿ ಆಗಿರುತ್ತಾರೆ, ಸ್ಥಳದಲ್ಲಿದ್ದ ಜೆ.ಸಿ.ಬಿ-1, ಡೋಜರ್-1, ಮರಳು ತುಂಬಿದ ಟಿಪ್ಪರ್‌ಗಳು-2 (6 ಯುನಿಟ್‌ಗಳಷ್ಟು ಸಾವಯವ ಮರಳು), ಅಕ್ರಮವಾಗಿ ಮರಳು ಲೋಡು ಮಾಡಿ ಸಾಗಾಟ ಮಾಡಲುವ ಸಲುವಾಗಿ ನಿಲ್ಲಿಸಿದ 8 ಖಾಲಿ ಟಿಪ್ಪರ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸ್ವಾಧೀನಪಡಿಸಿಕೊಂಡ ಒಟ್ಟು ಸೊತ್ತುಗಳ ಮೌಲ್ಯ 1,25,12,೦೦೦.೦೦ ಆಗಿರುತ್ತದೆ.
ಪತ್ತೆಯಾದ ಡೋಜರ್, ಜಿ.ಸಿ.ಬಿ., ಟಿಪ್ಪರ್ ಲಾರಿಗಳು ಯಾರಿಗೆ ಸೇರಿದೆಯೆಂದು, ಡೋಜರ್, ಜೆ.ಸಿ.ಬಿ, ಟಿಪ್ಪರ್ ಚಾಲಕರು ಯಾರೆಂದು, ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ ಕಾರ್ಮಿಕರು ಯಾರೆಂದು ತಿಳಿದುಕೊಳ್ಳಲು ತನಿಖೆ ಕೈಗೊಳ್ಳಲಾಗಿರುತ್ತದೆ. ಸದ್ರಿ ಮರಳು ಮತ್ತು ವಾಹನವನ್ನು ಮುಂದಿನ ಕ್ರಮಕ್ಕಾಗಿ ಉಪ- ನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಮಂಗಳೂರು ರವರಿಗೆ ಹಸ್ತಾಂತರಿಸಲಾಗಿರುತ್ತದೆ.
ಮಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಕುಲದೀಪ್ ಕುಮಾರ್.ಅರ್.ಜೈನ್, ಐ.ಪಿ.ಎಸ್, ಶ್ರೀ ಅಂಶುಕುಮಾರ್, ಐ.ಪಿ.ಎಸ್ ಮಾನ್ಯ ಉಪ ಪೊಲೀಸ್ ಆಯುಕ್ತರು, ಕಾನೂನು ಮತ್ತು ಸುವ್ಯವಸ್ಥೆ, ಮಂಗಳೂರು ನಗರ, ಶ್ರೀ ದಿನೇಶ್ ಕುಮಾರ್.ಬಿ.ಪಿ. ಮಾನ್ಯ ಉಪ ಪೊಲೀಸ್ ಆಯುಕ್ತರು, ಅಪರಾಧ ಮತ್ತು ಸಂಚಾರ, ಮಂಗಳೂರು ನಗರರವರ ನಿರ್ದೇಶದಂತೆ ದಾಳಿ ನಡೆಸಿ ಸೊತ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಜಾನ್ಸನ್ ಡಿ’ಸೋಜಾ, ಮಂಗಳೂರು ಗ್ರಾಮಾAತರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಶ್ರೀ ರಾಮ ನಾಯ್ಕ, ಎಎಸ್‌ಐ ರಂಜನ್.ಎo.ಕೆ, ಮಂಗಳೂರು ದಕ್ಷಿಣ ಉಪವಿಭಾಗದ ಕಛೇರಿಯ ಕರ್ತವ್ಯದಲ್ಲಿರುವ ಹೆಚ್‌ಸಿ 333, ರೆಜಿ.ವಿ.ಎಂ, ಹೆಚ್‌ಸಿ 490 ಮಹೇಶ್, ಮಂಗಳೂರು ಗ್ರಾಮಾAತರ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಹೆಚ್‌ಸಿ 849 ಸಂದೀಪ್, ಹೆಚ್‌ಸಿ 404 ಆಶಿತ್ ವಿಶಾತ್ ಡಿಸೋಜಾ, ಸಿಪಿಸಿ 888 ತಿರುಮಲೇಶ್, ಸಿಪಿಸಿ 3155 ಸದ್ದಾಂ ಹುಸೇನ್, ಸಿಪಿಸಿ 2419 ಬಸಪ್ಪ ರಣಧೀರ, ಸಿಪಿಸಿ 776 ಮಲ್ಲಪ್ಪ, ಎಹೆಚ್‌ಸಿ 2613 ಶ್ರೀ ಶೈಲರವರುಗಳು ಸಹಕರಿಸಿರುತ್ತಾರೆ. ಅಕ್ರಮ ಮರಳುಗಾರಿಕೆ, ದಾಸ್ತಾನು, ಕಳುವು ಮಾರಾಟದ ಬಗ್ಗೆ ಮಾಹಿತಿಗಳು ಇದ್ದಲ್ಲಿ ಠಾಣಾಧಿಕಾರಿರವರಿಗೆ ಮತ್ತು ಇಲಾಖಾ ಮೇಲಾಧಿಕಾರಿಯವರಿಗೆ ನೇರವಾಗಿ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಕೋರಲಾಗಿದೆ. ನೀಡಲಾಗುವ ಖಚಿತ ಮಾಹಿತಿಯ ಬಗ್ಗೆ ಗೌಪ್ಯತೆಯನ್ನು ಕಾಪಾಡಲಾಗುವುದು.
Discussion about this post