ಮಂಗಳೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಾಳಿಕಾಂಬಾ ನಗರದ ವಿನಾಯಕ ದೇವಸ್ಥಾನದ ಸಹಯೋಗದಲ್ಲಿ ವಿಶ್ವಕರ್ಮ ಜಯಂತಿಯನ್ನು ದಕ್ಷಿಣ ಕನ್ನಡ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಚರಿಸಲಾಯಿತು.
ದಕ್ಷಿಣ ಕನ್ನಡ ಹೆಚ್ಚುವರಿ ಜಿಲ್ಲಾಧಿಕಾರಿ(ಪ್ರಭಾರ )ಮಾಣಿಕ್ಯ ಎನ್. ಅವರು ಮಾಣಿಕ್ಯ ಎನ್. ಅವರು ದೀಪ ಬೆಳಗಿಸಿ ಜಯಂತಿಗೆ ಚಾಲನೆ ನೀಡಿದರು. ಮುಖ್ಯ ಅತಿಥಿ, ಕಾಳಿಕಾಂಬಾ ದೇಗುಲದ ಮೊಕ್ತೇಸರ ಸುಂದರ ಆಚಾರ್ಯ, ‘ಬೆಳುವಾಯಿ ಕನ್ಯಾ ಸಂಕ್ರಮಣ ದಂದು ವಿಶ್ವಕರ್ಮ ಯಜ್ಞ ಪೂಜೆ ಎಲ್ಲೆಡೆ ನಡೆಯುತ್ತಿದೆ. ಎಲ್ಲ ಕಲೆಗಳಲ್ಲಿ ವಿಶ್ವಬ್ರಾಹ್ಮಣ ಕೊಡುಗೆ ಮಹತ್ತರವಾದುದು’ ಎಂದರು.
ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯ ಟಿ. ಜಯಕರ್ ತಲೆಬೈಲ್, ಕೆ. ಕೆ. ವಿಠ್ಠಲ್ ಆಚಾರ್ಯ, ದಾಮೋದರ ಆಚಾರ್ಯ ಕಲ್ಪನೆ, ಟಿ. ದಿವಾಕರ್ ಆಚಾರ್ಯ ಕ್ಷೇತ್ರದ ಆಡಳಿತ ಮಂಡಳಿಯ ವಿಶೇಷ ಆಹ್ವಾನಿತ ಸುಜೀರ್ ವಿನೋದ್ ಪಾಲ್ಗೊಂಡಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ನಿರೂಪಿಸಿದರು. ರಮೇಶ್ ಆಚಾರ್ಯ ಬಿ.ಜಿ. ವಂದಿಸಿದರು.
ಹಿಂದುಳಿದ ವರ್ಗಗಳ ಮೋರ್ಚಾ: ಅಟಲ್ ಸೇವಾ ಕೇಂದ್ರದಲ್ಲಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಅಧ್ಯಕ್ಷ ಅನಿಲ್ ಕುಮಾರ್ ಅಧ್ಯಕ್ಷತೆಯಲ್ಲಿ ಗುರುವಾರ ವಿಶ್ವಕರ್ಮ ಜಯಂತಿ ನಡೆಯಿತು.
ರಥಬೀದಿಯ ಕಾಳಿಕಾಂಬಾ ದೇವಸ್ಥಾನದ ಮೊಕ್ತೇಸರ ಬೆಳುವಾಯಿ ಸುಂದರ್ ಆಚಾರ್ಯ ಆರತಿ ಬೆಳಗಿ, ಪುಷ್ಪಾರ್ಚನೆ ಮಾಡಿ ಬಳಿಕ ಉಪನ್ಯಾಸ ನೀಡಿದರು. ಕಾಳಿಕಾಂಬಾ ವಿನಾಯಕ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಸುಜೀರ್ ವಿನೋದ್, ಮೋಹನ್ ಆಚಾರ್ಯ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಸಂತೋಷ್ ಉಳ್ಳಾಲ, ಪ್ರಧಾನ ಕಾರ್ಯದರ್ಶಿ ಕಿರಣ್ ಮರೋಳಿ, ದೀಪಕ್, ಪದಾಧಿಕಾರಿಗಳು ಹಾಗೂ ಶಕ್ತಿ ಕೇಂದ್ರದ ಸದಸ್ಯರು ಇದ್ದರು.