ಉಳ್ಳಾಲ: ಗ್ಯಾಸ್ ರಿಪೇರಿ ಅಂಗಡಿ ಮಾಲೀಕ ಉಳ್ಳಾಲ ಉಳಿಯ ನಿವಾಸಿ ಹರೀಶ್ ಗಾಣಿಗ(42) ಇರಿತಕ್ಕೊಳಗಾದ ವ್ಯಕ್ತಿ. ಸ್ಥಳೀಯ ಗಾಂಜಾ ಮಾಫಿಯಾದ ವಿರುದ್ಧ ಪದೇ ಪದೇ ಪೊಲೀಸ್ ದೂರು ನೀಡುತ್ತಿದ್ದ ಹರೀಶ್ ಗಾಣಿಗರನ್ನ ಹಾಡು ಹಗಲೇ ಮಾರಕಾಸ್ತ್ರದಿಂದ ಮಾರಣಾಂತಿಕವಾಗಿ ಇರಿದ ಘಟನೆ ಉಳ್ಳಾಲದಲ್ಲಿ ನಡೆದಿದೆ.
ಹರೀಶ್ ಗಾಣಿಗ(42) ಇರಿತಕ್ಕೊಳಗಾದ ವ್ಯಕ್ತಿ
ಪೊಲೀಸ್ ದೂರು ಕೊಟ್ಟಿದ್ದಕ್ಕೇ ಪ್ರತೀಕಾರ;
ಉಳ್ಳಾಲದ ಉಳಿಯದಲ್ಲಿ ವಿಶಾಲ್ ಸೇರಿದಂತೆ ಯುವಕರು ಗಾಂಜಾ ವ್ಯಸನಕ್ಕೆ ಬಲಿಯಾಗಿ ಕುಕೃತ್ಯಗಳನ್ನ ನಡೆಸುತ್ತಿದ್ದು ಈ ಬಗ್ಗೆ ಉಳಿಯ ನಿವಾಸಿ ಕರಾಟೆ ಮಾಸ್ಟರ್ ಆಗಿರುವ ಹರೀಶ್ ಅವರು ಎರಡು ಬಾರಿ ಉಳ್ಳಾಲ ಠಾಣೆಗೆ ದೂರು ನೀಡಿದ್ದು ಜೀವ ಬೆದರಿಕೆ ಇದೆ ಎಂದೂ ಪೊಲೀಸರಿಗೆ ತಿಳಿಸಿದ್ದರು. ಆದರೆ ಪೊಲೀಸರು ಗಾಂಜಾ ಮಾಫಿಯಾದ ವಿರುದ್ಧ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರಲಿಲ್ಲ. ಒಂದು ತಿಂಗಳ ಹಿಂದೆ ಗಾಂಜಾ ವ್ಯಸನಿ ವಿಶಾಲ್ ವಿರುದ್ಧ ಹರೀಶ್ ಅವರು ಉಳ್ಳಾಲ ಠಾಣೆಗೆ ದೂರು ನೀಡಿದ್ದು ಅಸಡ್ಡೆ ತೋರಿದ ಪೊಲೀಸರು ಇಂದು ಬೆಳಗ್ಗೆ ವಿಶಾಲನ್ನ ಠಾಣೆಗೆ ವಿಚಾರಣೆಗೆ ಕರೆಸಿದ್ದರು. ಅಷ್ಟಕ್ಕೇ ಕುಪಿತನಾದ ವಿಶಾಲ್ ಇಂದು ಸಂಜೆ ಒಬ್ಬನೇ ಎರಡು ಮಾರಕಾಸ್ತ್ರಗಳನ್ನ ಹಿಡಿದು ಹರೀಶ್ ಅವರ ಅಂಗಡಿಗೆ ನುಗ್ಗಿ ಇರಿದಿದ್ದಾನೆ.
ಆಸ್ಪತ್ರೆಗೆ ದಾಖಲಿಸಿ ಯುವಕನ ಪ್ರಾಣ ಕಾಪಾಡಿದ ಎಸ್.ಡಿ.ಪಿ.ಐ ಕಾರ್ಯಕರ್ತರು :
ಉಳ್ಳಾಲ ಕೋಡಿ ರಸ್ತೆಯ ಲಕ್ಷ್ಮಿ ನರಸಿಂಹ ದೇವಸ್ಥಾನ ದ ಬಳಿ ಹರೀಶ್ ಎಂಬವರಿಗೆಮೊಗವೀರ ಪಟ್ಟದ ವಿಶಾಲ್ ಎಂಬುವನು ಎದೆಗೆ ಮತ್ತು ಕೈಗೆ ಚೂರಿ ಇರಿದ ಘಟನೆ ನಡೆದಿತ್ತು. ತೀವ್ರ ಇರಿತಕ್ಕೊಳಪಟ್ಟು ರಸ್ತೆಯಲ್ಲಿ ಬಿದ್ದು ನರಳಿ ಸಹಾಯವನ್ನು ಯಾಚಿಸುತಿದ್ದ ಹರೀಶ್ ರನ್ನು ಅದೇ ದಾರಿಯಲ್ಲಿ ಸ್ಕೂಟರ್ ನಲ್ಲಿ ತೆರಳುತಿದ್ದ ಉಳ್ಳಾಲ ಎಸ್.ಡಿ.ಪಿ.ಐ ನಗರ ಸಮಿತಿಯ ಉಪಾಧ್ಯಕ್ಷರಾದ ಇಮ್ಮಿಯಾಜ್ ಕೋಟೆಪುರ ಮತ್ತು ಉಳ್ಳಾಲ ಕೋಡಿ ಬ್ರಾಂಚ್ ಅಧ್ಯಕ್ಷರಾದ ಲತೀಫ್ ಪಾಪು ರವರು ಕಂಡು ಮಾನವೀಯತೆಯ ನೆಲೆಯಲ್ಲಿ ಹರೀಶ್ ರನ್ನು ಎತ್ತಿಕೊಂಡು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದರು.
Discover more from Coastal Times Kannada
Subscribe to get the latest posts sent to your email.
Discussion about this post