• About us
  • Contact us
  • Disclaimer
Tuesday, September 29, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಜೆರೋಸಾ ಶಾಲೆ ಶಿಕ್ಷಕಿ ವಿರುದ್ಧ ಆಡಿಯೋ ವೈರಲ್ ಮಾಡಿದ ಮಹಿಳೆಗೆ ವಿದೇಶದಿಂದ ಬೆದರಿಕೆ ಕರೆ

Coastal Times by Coastal Times
February 20, 2024
in ಕರಾವಳಿ
ಜೆರೋಸಾ ಶಾಲೆ ಶಿಕ್ಷಕಿ ವಿರುದ್ಧ ಆಡಿಯೋ ವೈರಲ್ ಮಾಡಿದ ಮಹಿಳೆಗೆ ವಿದೇಶದಿಂದ ಬೆದರಿಕೆ ಕರೆ
231
VIEWS
WhatsappTelegramShare on FacebookShare on Twitter

ಮಂಗಳೂರು, ಫೆ.19: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿರುವ ಸಂತ ಜೆರೋಸಾ ಶಾಲೆಯ ಶಿಕ್ಷಕಿ ಸಿಸ್ಟರ್ ಪ್ರಭಾ ಅವರು ಶ್ರೀರಾಮನಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಆಡಿಯೋ ಮಾಡಿದ ಪೋಷಕಿಗೆ ಇವರೇ ಎಂದು ಮಹಿಳೆಯ ಕುಟುಂಬ ಸಹಿತ ಫೋಟೋವನ್ನು ಕಿಡಿಗೇಡಿಗಳು ವೈರಲ್ ಮಾಡಿದ್ದಾರೆ. ಅಲ್ಲದೆ, ಪ್ರಕರಣದ ನಂತರ ವಿದೇಶದಿಂದ ನಿರಂತರವಾಗಿ ಕರೆ ಮಾಡಿ ಬೆದರಿಕೆ ಹಾಕುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ಜೆರೋಸಾ ಶಾಲೆಯ ಶಿಕ್ಷಕಿ ಧರ್ಮ ಅವಹೇಳನ ಪ್ರಕರಣ ಸಂಬಂಧ ಶಿಕ್ಷಕಿ ವಿರುದ್ಧ ಆಡಿಯೋ ವೈರಲ್ ಮಾಡಿದ್ದು ಇವರೇ ಎಂದು ಹೇಳಿ ಮಂಗಳೂರಿನ ಗರೋಡಿ‌ ನಿವಾಸಿ ಕವಿತಾ ಅವರ ಕುಟುಂಬದ ಫೋಟೋದ ಜೊತೆಗೆ ಕವಿತಾರ ನಂಬರ್​ ಕೂಡ ವೈರಲ್ ಮಾಡಿದ್ದಾರೆ. ಇದರ ಜೊತೆಗೆ ವಿದೇಶದಿಂದ ನಿರಂತರ ಬೆದರಿಕೆ ಕರೆಗಳು ಬರುತ್ತಿದ್ದು, ಕಂಕನಾಡಿ ನಗರ ಪೊಲೀಸ್ ಠಾಣೆಗೆ‌ ಕವಿತಾ ಅವರು ದೂರು ನೀಡಿದ್ದಾರೆ. ಕವಿತಾ ಅವರ ಮಗಳು ಜೆರೋಸಾ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾಳೆ. ಸಿಸ್ಟರ್ ಪ್ರಭಾ ವಿರುದ್ಧ ಪೋಷಕರ ಪ್ರತಿಭಟನೆಯಲ್ಲೂ ಭಾಗವಹಿಸಿದ್ದಳು. ಈ ನಡುವೆ, ಜೆರೋಸಾ ಶಿಕ್ಷಕಿ ಆಡಿಯೋ ವೈರಲ್ ಮಾಡಿದ್ದು ಕವಿತಾ ಅಂತ ಆರೋಪಿಸಿ ಬೆದರಿಕೆ ಹಾಕಲಾಗುತ್ತಿದೆ. ಕತಾರ್, ದುಬೈ, ಸೌದಿ ಸೇರಿ ಹಲವೆಡೆಯಿಂದ ನಿರಂತರ ಬೆದರಿಕೆ ಕರೆಗಳು ಬರುತ್ತಿವೆ. ಅವಾಚ್ಯವಾಗಿ ನಿಂದಿಸಿ ವಾಟ್ಸ್​ಆ್ಯಪ್​ಗೆ ಅಶ್ಲೀಲವಾದ ಆಡಿಯೋ ಸಂದೇಶ ಕಳುಹಿಸಲಾಗುತ್ತಿದೆ. ಕೆಲವು ವಾಟ್ಸ್​ಆ್ಯಪ್​ ಗ್ರೂಪ್​ಗೆ ಕವಿತಾ ಅವರ ನಂಬರ್ ಸೇರಿಸಿ ನಿರಂತರ ಕಿರುಕುಳ ನೀಡಲಾಗುತ್ತಿದೆ. ಆಡಿಯೋ ವೈರಲ್ ಮಾಡುತ್ತೀಯಾ ಅಂತ ನಿರಂತರ ಬೆದರಿಕೆ ಕರೆ ಮಾಡಲಾಗಿದೆ. ಆದರೆ ವೈರಲ್ ಆಗಿರುವ ಆಡಿಯೋ ತನ್ನದಲ್ಲದಿದ್ದರೂ ನಿರಂತರ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿ ಕವಿತಾ ಅವರು ಬೆದರಿಕೆ ಆಡಿಯೋ, ವಾಟ್ಸ್​ಆ್ಯಪ್ ಸ್ಕ್ರೀನ್ ಶಾಟ್​ಗಳ ಸಹಿತ ಕಂಕನಾಡಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಕವಿತಾ, ಫೆ.15 ರಿಂದ ಬೆದರಿಕೆ ಕರೆಗಳು ಬರಲು ಆರಂಭವಾಗಿವೆ. ಈ ಎಲ್ಲಾ ಘಟನೆಗಳಿಗೆ ನಾನು ಕಾರಣ ಎಂಬ ರೀತಿಯಲ್ಲಿ ಸಂದೇಶವೊಂದನ್ನು ಸೃಷ್ಟಿ ಮಾಡಲಾಗಿದೆ. ಫೇಸ್ ಬುಕ್ ಖಾತೆಯಿಂದ ನನ್ನ ಪೋಟೋ ಬಳಸಿ ವೈರಲ್ ಮಾಡಿದ್ದಾರೆ.ರಾತ್ರಿ ಹೊತ್ತು ಹೊರದೇಶದಿಂದ ಅನಾಮಿಕ‌ ಕರೆಗಳು ಬರಲು ಆರಂಭವಾಗಿದೆ. ನನಗೆ ಕಿರುಕುಳ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆಡಿಯೋದಲ್ಲಿ ನನ್ನ ಅಪ್ಪ ಅಮ್ಮನ ಬಗ್ಗೆ ಕೆಟ್ಟದಾಗಿ ಬೈಯಲಾಗಿದೆ. ಅತ್ಯಂತ ಕೆಟ್ಟ ಪದಗಳಲ್ಲಿ ಏನೆಲ್ಲಾ ಬೈದಿದ್ದಾರೆ. ಈ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ತನಿಖೆ ಮಾಡುತ್ತೇವೆಂದು ಪೊಲೀಸರು ಹೇಳಿದ್ದಾರೆ. ಎಲ್ಲಾ ದಾಖಲೆಗಳನ್ನು ಸಹ ಪೊಲೀಸರಿಗೆ ನೀಡಿದ್ದೇನೆ. ನಾನು ಮೊನ್ನೆ ಮಾಧ್ಯಮಗಳ ಮುಂದೆ ಮಾತನಾಡಿದಕ್ಕೆ ಟಾರ್ಗೆಟ್ ಮಾಡಿದ್ದಾರೆ. ಸಿಸ್ಟರ್ ಪ್ರಭಾ ಆ ರೀತಿ ಪಾಠ ಮಾಡಬಾರದಿತ್ತು. ವರ್ಕ್ ಆ್ಯಂಡ್ ವರ್‌ಶಿಪ್ ಪಾಠಕ್ಕೆ ಪೂರಕವಾಗಿ ಬೇರೆ ಏನಾದರೂ ಹೇಳಬಹುದು. ಆದರೆ ರಾಮನ ಬಗ್ಗೆ, ಗೋದ್ರಾ ಘಟನೆ ಬಗ್ಗೆ ವಿವರಿಸುವ ಅಗತ್ಯವಿರಲಿಲ್ಲ ಎಂದರು.

ನಾನು ಸಹ 15 ವರ್ಷದಿಂದ ಶಿಕ್ಷಕಿಯಾಗಿದ್ದೇನೆ. ಶಾಲೆ ಅಂತಾ ಬಂದ ಮೇಲೆ ಎಲ್ಲಾ ಮಕ್ಕಳು ನಮ್ಮವರು. ಎಲ್ಲರನ್ನು ನಮ್ಮ ಮಕ್ಕಳೆಂದು ನೋಡುವಾಗ ನಿರ್ದಿಷ್ಟವಾಗಿ ರಾಮನ ಬಗ್ಗೆ, ಧರ್ಮದ ಬಗ್ಗೆ ನಿಂಧಿಸುವ ಅಗತ್ಯವಿಲ್ಲ. ಆ ಒಂದು ಕಾರಣದಿಂದ ನನಗೆ ಹಲವು ಕರೆಗಳು ಬರುತ್ತಿದೆ. ಘಟನೆ ಬಗ್ಗೆ ತನಿಖೆಗೆ ಸರ್ಕಾರದಿಂದ ನೇಮಿಸಿದ ತನಿಖಾಧಿಕಾರಿ ನನ್ನನ್ನು ಸಂಪರ್ಕಿಸಿಲ್ಲ. ಸಂಪರ್ಕ ಮಾಡಿದರೆ ಇದೆಲ್ಲಾ ವಿಚಾರವನ್ನು ಹೇಳಲು ತಯಾರಿದ್ದೇನೆ. ಶನಿವಾರ ಏಳನೇ ತರಗತಿ ಮಕ್ಕಳು ಹಾಗೂ ಪೋಷಕರನ್ನು ಕರೆದಿದ್ದಾರೆ. ಆದ ಘಟನೆ ಬಗ್ಗೆ ಹೇಳಿಕೆ ಬರೆಸಿಕೊಂಡಿದ್ದಾರೆ. ರಾಮನ ಮೇಲೆ ಭಾರ ಹಾಕಿದ್ದೇನೆ. ಅವನೇ ಸರಿಯಾದ ರೀತಿಯಲ್ಲಿ ತನಿಖೆ ಆಗುವಂತೆ ಮಾಡಬೇಕು ಎಂದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಖ್ಯಾತ ಕಾದಂಬರಿಕಾರ ಕೆ.ಟಿ.ಗಟ್ಟಿ ಇನ್ನಿಲ್ಲ

Next Post

ಜೆರೋಸಾ ಶಾಲೆ ಮುಂಭಾಗ ನಡೆದ ಪ್ರತಿಭಟನೆ ಪ್ರಕರಣದಲ್ಲಿ ವೇದವ್ಯಾಸ ಕಾಮತ್, ಭರತ್ ಶೆಟ್ಟಿಗೆ ನಿರೀಕ್ಷಣಾ ಜಾಮೀನು

Related Posts

ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರಕ್ಕೆ ಸಂಚು ;25 ಲಕ್ಷ ರೂ. ಸುಪಾರಿ, ಪತ್ನಿಯ ಹೆರಿಗೆ ಬಳಿಕ ಬದಲಾದ ದೂರುದಾರನ ಮನಸ್ಸು!
ಕರಾವಳಿ

ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರಕ್ಕೆ ಸಂಚು ;25 ಲಕ್ಷ ರೂ. ಸುಪಾರಿ, ಪತ್ನಿಯ ಹೆರಿಗೆ ಬಳಿಕ ಬದಲಾದ ದೂರುದಾರನ ಮನಸ್ಸು!

September 28, 2026
97
ಇಂದಿನಿಂದ ನಡೆಯಬೇಕಿದ್ದ ಮೂರು ದಿನಗಳ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿಕೆ; ಗ್ರಾಹಕರು ನಿರಾಳ
ಕರಾವಳಿ

ಇಂದಿನಿಂದ ನಡೆಯಬೇಕಿದ್ದ ಮೂರು ದಿನಗಳ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿಕೆ; ಗ್ರಾಹಕರು ನಿರಾಳ

September 28, 2026
38
Next Post
ಜೆರೋಸಾ ಶಾಲೆ ಮುಂಭಾಗ ನಡೆದ ಪ್ರತಿಭಟನೆ ಪ್ರಕರಣದಲ್ಲಿ ವೇದವ್ಯಾಸ ಕಾಮತ್, ಭರತ್ ಶೆಟ್ಟಿಗೆ ನಿರೀಕ್ಷಣಾ ಜಾಮೀನು

ಜೆರೋಸಾ ಶಾಲೆ ಮುಂಭಾಗ ನಡೆದ ಪ್ರತಿಭಟನೆ ಪ್ರಕರಣದಲ್ಲಿ ವೇದವ್ಯಾಸ ಕಾಮತ್, ಭರತ್ ಶೆಟ್ಟಿಗೆ ನಿರೀಕ್ಷಣಾ ಜಾಮೀನು

Discussion about this post

Recent News

ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರಕ್ಕೆ ಸಂಚು ;25 ಲಕ್ಷ ರೂ. ಸುಪಾರಿ, ಪತ್ನಿಯ ಹೆರಿಗೆ ಬಳಿಕ ಬದಲಾದ ದೂರುದಾರನ ಮನಸ್ಸು!

ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರಕ್ಕೆ ಸಂಚು ;25 ಲಕ್ಷ ರೂ. ಸುಪಾರಿ, ಪತ್ನಿಯ ಹೆರಿಗೆ ಬಳಿಕ ಬದಲಾದ ದೂರುದಾರನ ಮನಸ್ಸು!

September 28, 2026
97
ಮಂಗಳೂರು : CCB ಪೋಲೀಸರ ಭರ್ಜರಿ ಕಾರ್ಯಾಚರಣೆ : ರೂ.24 ಲಕ್ಷದ MDMA ವಶ, ಮೂವರು ಅರೆಸ್ಟ್

ಮಂಗಳೂರು : CCB ಪೋಲೀಸರ ಭರ್ಜರಿ ಕಾರ್ಯಾಚರಣೆ : ರೂ.24 ಲಕ್ಷದ MDMA ವಶ, ಮೂವರು ಅರೆಸ್ಟ್

September 28, 2026
37
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರಕ್ಕೆ ಸಂಚು ;25 ಲಕ್ಷ ರೂ. ಸುಪಾರಿ, ಪತ್ನಿಯ ಹೆರಿಗೆ ಬಳಿಕ ಬದಲಾದ ದೂರುದಾರನ ಮನಸ್ಸು!

ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರಕ್ಕೆ ಸಂಚು ;25 ಲಕ್ಷ ರೂ. ಸುಪಾರಿ, ಪತ್ನಿಯ ಹೆರಿಗೆ ಬಳಿಕ ಬದಲಾದ ದೂರುದಾರನ ಮನಸ್ಸು!

September 28, 2026
ಮಂಗಳೂರು : CCB ಪೋಲೀಸರ ಭರ್ಜರಿ ಕಾರ್ಯಾಚರಣೆ : ರೂ.24 ಲಕ್ಷದ MDMA ವಶ, ಮೂವರು ಅರೆಸ್ಟ್

ಮಂಗಳೂರು : CCB ಪೋಲೀಸರ ಭರ್ಜರಿ ಕಾರ್ಯಾಚರಣೆ : ರೂ.24 ಲಕ್ಷದ MDMA ವಶ, ಮೂವರು ಅರೆಸ್ಟ್

September 28, 2026
ಮಾಣಿ : ಕಾರು-ಪಿಕಪ್‌ ನಡುವೆ ಡಿಕ್ಕಿ ಮಹಿಳೆ ಸಾವು; ಮೂವರು ಗಂಭೀರ

ಮಾಣಿ : ಕಾರು-ಪಿಕಪ್‌ ನಡುವೆ ಡಿಕ್ಕಿ ಮಹಿಳೆ ಸಾವು; ಮೂವರು ಗಂಭೀರ

September 28, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d