• About us
  • Contact us
  • Disclaimer
Sunday, May 3, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಜೆ.ಆರ್‌.ಲೋಬೊ ಬಳಿ ರೂ. 13.39 ಕೋಟಿ ಆಸ್ತಿ , ಉತ್ತರ ಕಾಂಗ್ರೆಸ್‌ ಅಭ್ಯರ್ಥಿ ಇನಾಯತ್‌ ಅಲಿ ಬಳಿ ರೂ. 20.15 ಕೋಟಿ ಆಸ್ತಿ

Coastal Times by Coastal Times
April 21, 2023
in ಕರಾವಳಿ
ಜೆ.ಆರ್‌.ಲೋಬೊ ಬಳಿ ರೂ. 13.39 ಕೋಟಿ ಆಸ್ತಿ , ಉತ್ತರ ಕಾಂಗ್ರೆಸ್‌ ಅಭ್ಯರ್ಥಿ ಇನಾಯತ್‌ ಅಲಿ ಬಳಿ ರೂ. 20.15 ಕೋಟಿ ಆಸ್ತಿ
55
VIEWS
WhatsappTelegramShare on FacebookShare on Twitter

ಮಂಗಳೂರು: ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜೆ.ಆರ್‌.ಲೋಬೊ ಒಟ್ಟು ರೂ. 13.39 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ. ಬಿ.ಎಸ್ಸಿ ಬಿ.ಇಡಿ ಪದವೀಧರರಾಗಿರುವ ಲೋಬೊ, ತಮ್ಮನ್ನು ಉದ್ಯಮಿ ಎಂದು ಹೇಳಿಕೊಂಡಿದ್ದು, ವಾರ್ಷಿಕ ರೂ. 49.69 ಲಕ್ಷ ವರಮಾನವಿದೆ ಎಂದು ತಿಳಿಸಿದ್ದಾರೆ. ಅವರ ಬಳಿ ರೂ. 9.82 ಕೋಟಿ ಮೌಲ್ಯದ ಚರಾಸ್ತಿ ಹಾಗೂ ರೂ. 3.57 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ಅವರ ಪತ್ನಿ ಫಿಲೋಮಿನಾ ಲೋಬೊ ಅವರೂ ಉದ್ಯಮಿಯಾಗಿದ್ದು, ಅವರಿಗೆ ವಾರ್ಷಿಕ ರೂ. 12.06 ಲಕ್ಷ ವರಮಾನವಿದೆ.  ಅವರ ಬಳಿ ರೂ. 1.14 ಕೋಟಿ ಮೌಲ್ಯದ ಚರಾಸ್ತಿ ಹಾಗೂ ರೂ. 2.89 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ಅವರ ಕುಟುಂಬದ ಒಟ್ಟು ಆಸ್ತಿ ರೂ. 17.42 ಕೋಟಿ.

ಅವರ ಪತ್ನಿ ಕೊಪ್ಪ ತಾಲ್ಲೂಕಿನ ಕೇಳ್ಕುಳ್ಳಿಯಲ್ಲಿ 1 ಎಕರೆ 82 ಸೆಂಟ್ಸ್ ಪಿತ್ರಾರ್ಜಿತ ಕೃಷಿ ಜಮೀನು ಹೊಂದಿದ್ದಾರೆ. ಮಳವೂರಿನಲ್ಲಿ 2020ರಲ್ಲಿ ರೂ.49.64 ಲಕ್ಷ ಮೌಲ್ಯದ 3.44ಎಕರೆ ಕೃಷಿ ಜಮೀನು ಖರೀದಿಸಿದ್ದಾರೆ. ಹಿರೇಕೆರೂರಿನಲ್ಲಿ 4 ಎಕರೆ ಕೃಷಿಯೇತರ ಜಮೀನು ಹಾಗೂ ಒಟ್ಟು 8 ನಿವೇಶನಗಳನ್ನು ಹೊಂದಿದ್ದು, ಅದರ ಮೌಲ್ಯ ರೂ. 1.50 ಕೋಟಿ. ಕೊಪ್ಪದಲ್ಲಿ 66 ಲಕ್ಷ ಮೌಲ್ಯದ ವಾಣಿಜ್ಯ ಕಟ್ಟಡ ಹೊಂದಿದ್ದಾರೆ. ಲೋಬೊ ವಿರುದ್ಧ ಯಾವುದೇ ಪ್ರಕರಣಗಳಿಲ್ಲ.

ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಇನಾಯತ್‌ ಅಲಿ ಅವರು ಒಟ್ಟು ರೂ. 20.15 ಕೋಟಿ ಆಸ್ತಿ ತಮ್ಮ ಹೆಸರಿನಲ್ಲಿದೆ ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ. ಉದ್ಯಮಿಯಾಗಿರುವ ಇನಾಯತ್‌ ಅಲಿ (42 ವರ್ಷ) ವಾರ್ಷಿಕ 1.77 ಕೋಟಿ ವರಮಾನವನ್ನು ಹೊಂದಿದ್ದಾರೆ. ಅವರ ಬಳಿ ರೂ. 19.11 ಕೋಟಿ ಚರಾಸ್ತಿ ಹಾಗೂ ರೂ. 1.04 ಕೋಟಿ ಮೌಲ್ಯದ ಸ್ಥಿರಾಸ್ಥಿ ಇದೆ. ಅವರು ಒಟ್ಟು ರೂ. 1.38 ಕೋಟಿ ಸಾಲ ಹೊಂದಿದ್ದಾರೆ. ಅವರ ಪತ್ನಿ ಶಮಾ ಖತೀಜ ಅವರೂ ಉದ್ಯಮಿಯಾಗಿದ್ದು ವಾರ್ಷಿಕ ರೂ. 35.09 ಲಕ್ಷ ವರಮಾನ ಹೊಂದಿದ್ದಾರೆ. ಅವರಿಗೆ ರೂ. 63.69 ಲಕ್ಷ ಮೌಲ್ಯದ ಚರಾಸ್ತಿ ಹಾಗೂ ರೂ. 5.60 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ಪತ್ನಿಗೆ ರೂ. 1.10 ಕೋಟಿ ಸಾಲ ಇದೆ. ಅಲಿ ಕುಟುಂಬವು ಒಟ್ಟು ರೂ. 26.38 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದೆ.

ಅಲಿ ಅವರ ಬಳಿ ರೂ. 3 ಲಕ್ಷ ಹಾಗೂ ಅವರ ಪತ್ನಿ ಬಳಿ ರೂ. 2ಲಕ್ಷ ನಗದು ಇದೆ. ಅಲಿ ಅವರು ವಿವಿಧ ಬ್ಯಾಂಕ್‌ಗಳಲ್ಲಿ  ಒಟ್ಟು ರೂ. 3.35 ಕೋಟಿ ಠೇವಣಿ ಹೊಂದಿದ್ದಾರೆ. ಓಷೀನ್‌ ಕನ್ಸ್‌ಸ್ಟ್ರಕ್ಷನ್ಸ್‌ ಸಂಸ್ಥೆಯಲ್ಲಿ ರೂ. 52.05 ಲಕ್ಷ ಷೇರು ಹೊಂದಿದ್ದಾರೆ. ಉಳಿತಾಯ ಪತ್ರ ಹಾಗೂ ವಿಮೆಗಳಿಗೆ ಒಟ್ಟು ರೂ. 24.47 ಲಕ್ಷ ಹೂಡಿಕೆ ಮಾಡಿದ್ದಾರೆ.  ಆರು ಮಂದಿಗೆ ಹಾಗೂ ಎರಡು ಸಂಸ್ಥೆಗಳಿಗೆ ಒಟ್ಟು ರೂ. 6.81 ಕೋಟಿ ಸಾಲ ನೀಡಿದ್ದಾರೆ. ಇದರಲ್ಲಿ ಜಾನ್‌ ಲೋಬೊ ಅವರಿಗೆ ನೀಡಿರುವ ರೂ. 50 ಲಕ್ಷವೂ ಸೇರಿದೆ. ಓಷೀನ್‌ ಕನ್‌ಸ್ಟ್ರಕ್ಷನ್ಸ್‌ ಕಂಪನಿಯ ಉದ್ಯೋಗಿಗಳ ವೇತನಕ್ಕೆ ರೂ. 7.06 ಕೋಟಿ ಹೂಡಿಕೆ ಮಾಡಿದ್ದಾರೆ. ಅಲ್ಲದೇ ರೂ.15.60 ಲಕ್ಷ ಮೌಲ್ಯದ ಇತರ ಸ್ವತ್ತುಗಳು ಅವರ ಬಳಿ ಇವೆ.

ಇನಾಯತ್‌ ಅಲಿ ಕುಟುಂಬದ ಬಳಿ 2,117 ಗ್ರಾಂ (2.1 ಕೆ.ಜಿ) ಚಿನ್ನ ಇದೆ. ಇದರಲ್ಲಿ 1,045 ಗ್ರಾಂ ಚಿನ್ನ ಅಲಿ ಅವರ ಹೆಸರಿನಲ್ಲಿದ್ದು, ಅದರ ಮೌಲ್ಯ ರೂ. 57.50 ಲಕ್ಷ. ಹಾಗೂ 1,072 ಗ್ರಾಂ ಚಿನ್ನ ಪತ್ನಿಯ ಹೆಸರಿನಲ್ಲಿದ್ದು, ಅದರ ಮೌಲ್ಯ ರೂ. 59 ಲಕ್ಷ. ಇನಾಯತ್‌ ಅಲಿ ಅವರು ಪಿಯುಸಿವರೆಗೆ ಶಿಕ್ಷಣ ಪಡೆದಿದ್ದಾರೆ. ಅವರ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿಲ್ಲ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಕಾಂಗ್ರೆಸ್ ಅಂತಿಮ ಪಟ್ಟಿ ರಿಲೀಸ್ ಮಂಗಳೂರು ಉತ್ತರಕ್ಕೆ ಇನಾಯತ್ ಅಲಿ ಕಾಂಗ್ರೆಸ್ ಅಭ್ಯರ್ಥಿ

Next Post

ಕಾರ್ಕಳ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಮತಾಲಿಕ್ ಆಸ್ತಿ ಮತ್ತು ಎದುರಿಸುತ್ತಿರುವ ಪ್ರಕರಣಗಳ ವಿವರ

Related Posts

ಬೈಕ್ – ಲಾರಿ ಮುಖಾಮುಖಿ ಡಿಕ್ಕಿ ; ಉಪ್ಪಿನಂಗಡಿ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು, ಗೆಳತಿ ಗಂಭೀರ
ಕರಾವಳಿ

ಬೈಕ್ – ಲಾರಿ ಮುಖಾಮುಖಿ ಡಿಕ್ಕಿ ; ಉಪ್ಪಿನಂಗಡಿ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು, ಗೆಳತಿ ಗಂಭೀರ

April 30, 2026
90
ಸ್ಟಾರ್ಟ್‌ಅಪ್ ಪರಿಸರಕ್ಕೆ ಹೊಸ ಚೈತನ್ಯ: ರೋಹನ್ ಕಾರ್ಪೊರೇಷನ್ ಮತ್ತು ರೇನ್ ಮೇಕರ್ಸ್ ವರ್ಕ್‌ಸ್ಪೇಸ್ ಸಂಯುಕ್ತ ಒಕ್ಕೂಟಕ್ಕೆ ಚಾಲನೆ
ಕರಾವಳಿ

ಸ್ಟಾರ್ಟ್‌ಅಪ್ ಪರಿಸರಕ್ಕೆ ಹೊಸ ಚೈತನ್ಯ: ರೋಹನ್ ಕಾರ್ಪೊರೇಷನ್ ಮತ್ತು ರೇನ್ ಮೇಕರ್ಸ್ ವರ್ಕ್‌ಸ್ಪೇಸ್ ಸಂಯುಕ್ತ ಒಕ್ಕೂಟಕ್ಕೆ ಚಾಲನೆ

April 28, 2026
3
Next Post
ಕಾರ್ಕಳ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಮತಾಲಿಕ್ ಆಸ್ತಿ ಮತ್ತು ಎದುರಿಸುತ್ತಿರುವ ಪ್ರಕರಣಗಳ ವಿವರ

ಕಾರ್ಕಳ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಮತಾಲಿಕ್ ಆಸ್ತಿ ಮತ್ತು ಎದುರಿಸುತ್ತಿರುವ ಪ್ರಕರಣಗಳ ವಿವರ

Discussion about this post

Recent News

ಮಹಿಳೆಯ ಅಂತ್ಯಕ್ರಿಯೆ ನಡೆಯುತ್ತಿದ್ದಾಗ ಬಂದ ಫೋನ್​ನಿಂದ ಬಯಲಾಯ್ತು ಸಾವಿನ ರಹಸ್ಯ

ಮಹಿಳೆಯ ಅಂತ್ಯಕ್ರಿಯೆ ನಡೆಯುತ್ತಿದ್ದಾಗ ಬಂದ ಫೋನ್​ನಿಂದ ಬಯಲಾಯ್ತು ಸಾವಿನ ರಹಸ್ಯ

May 1, 2026
1
ಬೆಂಗಳೂರು ದಿಢೀರ್ ಮಳೆಯ ಅಬ್ಬರಕ್ಕೆ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಮಂದಿ ಸಾವು, 5 ಲಕ್ಷ ಪರಿಹಾರ ಘೋಷಣೆ

ಬೆಂಗಳೂರು ದಿಢೀರ್ ಮಳೆಯ ಅಬ್ಬರಕ್ಕೆ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಮಂದಿ ಸಾವು, 5 ಲಕ್ಷ ಪರಿಹಾರ ಘೋಷಣೆ

April 30, 2026
20
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಹಿಳೆಯ ಅಂತ್ಯಕ್ರಿಯೆ ನಡೆಯುತ್ತಿದ್ದಾಗ ಬಂದ ಫೋನ್​ನಿಂದ ಬಯಲಾಯ್ತು ಸಾವಿನ ರಹಸ್ಯ

ಮಹಿಳೆಯ ಅಂತ್ಯಕ್ರಿಯೆ ನಡೆಯುತ್ತಿದ್ದಾಗ ಬಂದ ಫೋನ್​ನಿಂದ ಬಯಲಾಯ್ತು ಸಾವಿನ ರಹಸ್ಯ

May 1, 2026
ಬೆಂಗಳೂರು ದಿಢೀರ್ ಮಳೆಯ ಅಬ್ಬರಕ್ಕೆ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಮಂದಿ ಸಾವು, 5 ಲಕ್ಷ ಪರಿಹಾರ ಘೋಷಣೆ

ಬೆಂಗಳೂರು ದಿಢೀರ್ ಮಳೆಯ ಅಬ್ಬರಕ್ಕೆ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಮಂದಿ ಸಾವು, 5 ಲಕ್ಷ ಪರಿಹಾರ ಘೋಷಣೆ

April 30, 2026
ಬೈಕ್ – ಲಾರಿ ಮುಖಾಮುಖಿ ಡಿಕ್ಕಿ ; ಉಪ್ಪಿನಂಗಡಿ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು, ಗೆಳತಿ ಗಂಭೀರ

ಬೈಕ್ – ಲಾರಿ ಮುಖಾಮುಖಿ ಡಿಕ್ಕಿ ; ಉಪ್ಪಿನಂಗಡಿ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು, ಗೆಳತಿ ಗಂಭೀರ

April 30, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d