• About us
  • Contact us
  • Disclaimer
Wednesday, April 29, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಸಿಆರ್‌ಝಡ್ ವ್ಯಾಪ್ತಿಯ ನದಿಗಳ ಸಂಗ್ರಹಿತ ಮರಳು ಮಾರಾಟಕ್ಕೆ ಎನ್‌ಜಿಟಿ ನಿಷೇಧ!

Coastal Times by Coastal Times
May 21, 2022
in ಕರಾವಳಿ
ಸಿಆರ್‌ಝಡ್ ವ್ಯಾಪ್ತಿಯ ನದಿಗಳ ಸಂಗ್ರಹಿತ ಮರಳು ಮಾರಾಟಕ್ಕೆ ಎನ್‌ಜಿಟಿ ನಿಷೇಧ!
59
VIEWS
WhatsappTelegramShare on FacebookShare on Twitter

ಉಡುಪಿ: ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ವ್ಯಾಪ್ತಿಯ ನದಿಗಳ ಮರಳು ದಿಬ್ಬಗಳನ್ನು ತೆರವುಗೊಳಿಸುವ ವೇಳೆ ಸಂಗ್ರಹಿಸಿದ ಮರಳನ್ನು ಮಾರಾಟ ಮಾಡುವಂತಿಲ್ಲ ಎಂದು ಚೈನ್ನೈನಲ್ಲಿರುವ ರಾಷ್ಟ್ರೀಯ ಹಸಿರು ಪೀಠ ಬುಧವಾರ ಮಹತ್ವದ ಆದೇಶ ನೀಡಿದೆ. ಮರಳು ದಿಬ್ಬಗಳಿಂದ ಸಂಗ್ರಹಿಸಿದ ಮರಳನ್ನು ತೀರಾ ಕೆಳಮಟ್ಟದಲ್ಲಿರುವ ನದಿ ತಳವನ್ನು ಎತ್ತರಿಸಲು, ನದಿದಡಗಳನ್ನು ಬಲಿಷ್ಠಗೊಳಿಸಲು ಅಥವಾ ಬೀಚ್‌ಗಳಲ್ಲಿ ಬೇಕಿದ್ದರೆ ಬಳಸಬಹುದಾಗಿದೆ ಎಂದು ಚೆನ್ನೈನ ದಕ್ಷಿಣ ವಲಯದ ಇಬ್ಬರು ಸದಸ್ಯರ ಪೀಠ ತೀರ್ಪಿನಲ್ಲಿ ತಿಳಿಸಿದೆ.

ಮರಳುಗಾರಿಕೆ ನಡೆಯುತ್ತಿರುವ ಪ್ರದೇಶಗಳ ಜನರ ಬವಣೆಯಿಂದ ಬೇಸತ್ತು, ಇಲ್ಲಿ ನಡೆಯುತ್ತಿರುವ ಕಾನೂನಿನ ಉಲ್ಲಂಘನೆಯಿಂದ ಆಕ್ರೋಶಿತರಾಗಿ ಬ್ರಹ್ಮಾವರ ತಾಲೂಕು ಬೈಕಾಡಿ ಗ್ರಾಮದ ಭದ್ರಗಿರಿಯ ಉದಯ ಸುವರ್ಣ ಹಾಗೂ ಕಲ್ಯಾಣಪುರದ ದಿನೇಶ್ ಕುಂದರ್ ಎಂಬವರು ಎರಡನೇ ಬಾರಿಗೆ ಹಸಿರು ಪೀಠಕ್ಕೆ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ರಾಮಕೃಷ್ಣನ್ ಹಾಗೂ ವಿಷಯತಜ್ಞ ಸದಸ್ಯ ಡಾ.ಸತ್ಯಗೋಪಾಲ ಕೊರಾಲ್‌ಪತಿ ಅವರನ್ನೊಳಗೊಂಡ ಪೀಠ ಈ ತೀರ್ಪನ್ನು ನೀಡಿದೆ. ಸಿಆರ್‌ಝಡ್ ವ್ಯಾಪ್ತಿಯ ನದಿಗಳ ಮರಳನ್ನು ಕೇವಲ ಪರವಾನಿಗೆ ಪಡೆದವರು ಅಥವಾ ಅವರ ಕುಟುಂಬಿಕರು ಮಾತ್ರ ತೆಗೆಯಬೇಕು. ಮರಳನ್ನು ತೆಗೆಯಲು ಸಾಂಪ್ರದಾಯಿಕ ಪದ್ಧತಿಯನ್ನು ಮಾತ್ರ ಅವಲಂಬಿಸಬೇಕು. ಇದರಲ್ಲಿ ಯಾವುದೇ ಉಪಗುತ್ತಿಗೆದಾರರಿಗಾಗಲೀ,  ಹೊರಗಿನ ಕಾರ್ಮಿಕರಿಗಾಗಲೀ ಅವಕಾಶವನ್ನೇ ನೀಡಬಾರದು ಎಂದು ಪೀಠ  ಸ್ಪಷ್ಟವಾಗಿ ಆದೇಶಿಸಿದೆ.

ಸಿಆರ್‌ಝಡ್ ವ್ಯಾಪ್ತಿಯಲ್ಲಿ ಈವರೆಗೆ ಹೊರತೆಗೆಯಲಾದ ಮರಳಿನ ಪ್ರಮಾಣವನ್ನು ನೋಡಿದಾಗ, ಸಾಂಪ್ರದಾಯಿಕ ಪದ್ಧತಿಯಂತೆ ಮಾನವನ ಬಳಕೆಯಿಂದ ಮಾತ್ರ ಇಷ್ಟೊಂದು ಪ್ರಮಾಣದ ಮರಳು ತೆಗೆಯಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಮರಳು ತೆಗೆಯಲು ಯಾವುದೇ ವಿಧದ ಯಂತ್ರಗಳನ್ನು ಬಳಸುವಂತಿಲ್ಲ ಎಂದೂ ಪೀಠ ವಿಶೇಷ ಒತ್ತಿನೊಂದಿಗೆ ತಿಳಿಸಿದೆ. ಉಡುಪಿ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮೂಲಗಳ ಪ್ರಕಾರ, ಉಡುಪಿ ಜಿಲ್ಲೆಯ ಸಿಆರ್‌ಝಡ್‌ನಲ್ಲಿ ಈ ಹಿಂದೆ ಗುರುತಿಸಲಾದ 23 ಮರಳು ಬಾರ್‌ಗಳನ್ನು ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ (ಕೆಎಸ್‌ಸಿಜೆಡ್‌ಎಂಎ) ಅನುಮೋದಿಸಿದೆ. ಆದರೆ, ಕುಂದಾಪುರದಲ್ಲಿ ನಾಲ್ಕು ಮರಳುಗಾರಿಕೆಗೆ ಅನುಮತಿ ರದ್ದುಗೊಂಡಿದ್ದು, ಉಳಿದವು ಉಡುಪಿ ಮತ್ತು ಬ್ರಹ್ಮಾವರ ತಾಲೂಕುಗಳಲ್ಲಿ ಇಲ್ಲಿಯವರೆಗೆ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿದುಬಂದಿದೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಹೈದರಾಬಾದ್ ಗ್ಯಾಂಗ್‌ ರೇಪ್ ಆರೋಪಿಗಳ ಎನ್‌ಕೌಂಟರ್ ನಕಲಿ ಎಂದ ಸುಪ್ರೀಂಕೋರ್ಟ್‌ ಸಮಿತಿ

Next Post

ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್: ಭಾರತದ ನಿಖತ್ ಜರೀನ್ ಗೆ ಚಿನ್ನ

Related Posts

ಸ್ಟಾರ್ಟ್‌ಅಪ್ ಪರಿಸರಕ್ಕೆ ಹೊಸ ಚೈತನ್ಯ: ರೋಹನ್ ಕಾರ್ಪೊರೇಷನ್ ಮತ್ತು ರೇನ್ ಮೇಕರ್ಸ್ ವರ್ಕ್‌ಸ್ಪೇಸ್ ಸಂಯುಕ್ತ ಒಕ್ಕೂಟಕ್ಕೆ ಚಾಲನೆ
ಕರಾವಳಿ

ಸ್ಟಾರ್ಟ್‌ಅಪ್ ಪರಿಸರಕ್ಕೆ ಹೊಸ ಚೈತನ್ಯ: ರೋಹನ್ ಕಾರ್ಪೊರೇಷನ್ ಮತ್ತು ರೇನ್ ಮೇಕರ್ಸ್ ವರ್ಕ್‌ಸ್ಪೇಸ್ ಸಂಯುಕ್ತ ಒಕ್ಕೂಟಕ್ಕೆ ಚಾಲನೆ

April 28, 2026
0
ಹೊಸ ನಿರೀಕ್ಷೆ ಹುಟ್ಟುಹಾಕಿದ – ವಾದಿರಾಜ ವಾಲಗ ಮಂಡಳಿ ಹಾಸ್ಯಮಯ ಸಿನಿಮಾದ ಚಿತ್ರೀಕರಣ ಮುಕ್ತಾಯ- ನಿರ್ಮಾಪಕ ಡಾ. ಎಂ.ಎನ್ ರಾಜೇಂದ್ರ ಕುಮಾರ್
ಕರಾವಳಿ

ಹೊಸ ನಿರೀಕ್ಷೆ ಹುಟ್ಟುಹಾಕಿದ – ವಾದಿರಾಜ ವಾಲಗ ಮಂಡಳಿ ಹಾಸ್ಯಮಯ ಸಿನಿಮಾದ ಚಿತ್ರೀಕರಣ ಮುಕ್ತಾಯ- ನಿರ್ಮಾಪಕ ಡಾ. ಎಂ.ಎನ್ ರಾಜೇಂದ್ರ ಕುಮಾರ್

April 28, 2026
16
Next Post
ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್: ಭಾರತದ ನಿಖತ್ ಜರೀನ್ ಗೆ ಚಿನ್ನ

ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್: ಭಾರತದ ನಿಖತ್ ಜರೀನ್ ಗೆ ಚಿನ್ನ

Discussion about this post

Recent News

ಸ್ಟಾರ್ಟ್‌ಅಪ್ ಪರಿಸರಕ್ಕೆ ಹೊಸ ಚೈತನ್ಯ: ರೋಹನ್ ಕಾರ್ಪೊರೇಷನ್ ಮತ್ತು ರೇನ್ ಮೇಕರ್ಸ್ ವರ್ಕ್‌ಸ್ಪೇಸ್ ಸಂಯುಕ್ತ ಒಕ್ಕೂಟಕ್ಕೆ ಚಾಲನೆ

ಸ್ಟಾರ್ಟ್‌ಅಪ್ ಪರಿಸರಕ್ಕೆ ಹೊಸ ಚೈತನ್ಯ: ರೋಹನ್ ಕಾರ್ಪೊರೇಷನ್ ಮತ್ತು ರೇನ್ ಮೇಕರ್ಸ್ ವರ್ಕ್‌ಸ್ಪೇಸ್ ಸಂಯುಕ್ತ ಒಕ್ಕೂಟಕ್ಕೆ ಚಾಲನೆ

April 28, 2026
0
ಹೊಸ ನಿರೀಕ್ಷೆ ಹುಟ್ಟುಹಾಕಿದ – ವಾದಿರಾಜ ವಾಲಗ ಮಂಡಳಿ ಹಾಸ್ಯಮಯ ಸಿನಿಮಾದ ಚಿತ್ರೀಕರಣ ಮುಕ್ತಾಯ- ನಿರ್ಮಾಪಕ ಡಾ. ಎಂ.ಎನ್ ರಾಜೇಂದ್ರ ಕುಮಾರ್

ಹೊಸ ನಿರೀಕ್ಷೆ ಹುಟ್ಟುಹಾಕಿದ – ವಾದಿರಾಜ ವಾಲಗ ಮಂಡಳಿ ಹಾಸ್ಯಮಯ ಸಿನಿಮಾದ ಚಿತ್ರೀಕರಣ ಮುಕ್ತಾಯ- ನಿರ್ಮಾಪಕ ಡಾ. ಎಂ.ಎನ್ ರಾಜೇಂದ್ರ ಕುಮಾರ್

April 28, 2026
16
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಸ್ಟಾರ್ಟ್‌ಅಪ್ ಪರಿಸರಕ್ಕೆ ಹೊಸ ಚೈತನ್ಯ: ರೋಹನ್ ಕಾರ್ಪೊರೇಷನ್ ಮತ್ತು ರೇನ್ ಮೇಕರ್ಸ್ ವರ್ಕ್‌ಸ್ಪೇಸ್ ಸಂಯುಕ್ತ ಒಕ್ಕೂಟಕ್ಕೆ ಚಾಲನೆ

ಸ್ಟಾರ್ಟ್‌ಅಪ್ ಪರಿಸರಕ್ಕೆ ಹೊಸ ಚೈತನ್ಯ: ರೋಹನ್ ಕಾರ್ಪೊರೇಷನ್ ಮತ್ತು ರೇನ್ ಮೇಕರ್ಸ್ ವರ್ಕ್‌ಸ್ಪೇಸ್ ಸಂಯುಕ್ತ ಒಕ್ಕೂಟಕ್ಕೆ ಚಾಲನೆ

April 28, 2026
ಹೊಸ ನಿರೀಕ್ಷೆ ಹುಟ್ಟುಹಾಕಿದ – ವಾದಿರಾಜ ವಾಲಗ ಮಂಡಳಿ ಹಾಸ್ಯಮಯ ಸಿನಿಮಾದ ಚಿತ್ರೀಕರಣ ಮುಕ್ತಾಯ- ನಿರ್ಮಾಪಕ ಡಾ. ಎಂ.ಎನ್ ರಾಜೇಂದ್ರ ಕುಮಾರ್

ಹೊಸ ನಿರೀಕ್ಷೆ ಹುಟ್ಟುಹಾಕಿದ – ವಾದಿರಾಜ ವಾಲಗ ಮಂಡಳಿ ಹಾಸ್ಯಮಯ ಸಿನಿಮಾದ ಚಿತ್ರೀಕರಣ ಮುಕ್ತಾಯ- ನಿರ್ಮಾಪಕ ಡಾ. ಎಂ.ಎನ್ ರಾಜೇಂದ್ರ ಕುಮಾರ್

April 28, 2026
ಕಣ್ಣೂರು : ಮಾದಕ ವ್ಯಸನಿ ಮಗನಿಂದ ತಾಯಿಯನ್ನು ಚಾಕುವಿನಿಂದ ಕೊಚ್ಚಿ ಬರ್ಬರ ಹತ್ಯೆ..!

ಕಣ್ಣೂರು : ಮಾದಕ ವ್ಯಸನಿ ಮಗನಿಂದ ತಾಯಿಯನ್ನು ಚಾಕುವಿನಿಂದ ಕೊಚ್ಚಿ ಬರ್ಬರ ಹತ್ಯೆ..!

April 27, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d