• About us
  • Contact us
  • Disclaimer
Saturday, September 12, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಪ್ರಮೋದ್ ಮಧ್ವರಾಜ್ ಚುನಾವಣೆಗೆ ಎಲ್ಲಿ ನಿಂತ್ರೂ ಸೋಲಿಸಿ; ಡಿ.ಕೆ.ಶಿವಕುಮಾರ್

Coastal Times by Coastal Times
January 22, 2023
in ರಾಜಕೀಯ
ಪ್ರಮೋದ್ ಮಧ್ವರಾಜ್ ಚುನಾವಣೆಗೆ ಎಲ್ಲಿ ನಿಂತ್ರೂ ಸೋಲಿಸಿ; ಡಿ.ಕೆ.ಶಿವಕುಮಾರ್
65
VIEWS
WhatsappTelegramShare on FacebookShare on Twitter

ಉಡುಪಿ, ಜ.22 : ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ನಂಬಿಕೆ ದ್ರೋಹ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವನ್ನೂ ಅನುಭವಿಸಿ ಪಕ್ಷ ಬಿಟ್ಟು ಹೋಗಿದ್ದಾರೆ. ಅವರು ಯಾವುದೇ ಜಾಗದಲ್ಲಿ ಚುನಾವಣೆ ನಿಂತರೂ ಸೊಲಿಸಿಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಮತ್ತು ವಿಧಾನಸಭೆಯ ವಿರೋಧ ಪಕ್ಷಗಳ ನಾಯಕ ಸಿದ್ದರಾಮಯ್ಯ ಮತದಾರರಿಗೆ ಕರೆ ನೀಡಿದ್ದಾರೆ.

ಉಡುಪಿಗೆ ರವಿವಾರ ಆಗಮಿಸಿದ ಪ್ರಜಾಧ್ವನಿ ಯಾತ್ರೆಯ ಬಹಿರಂಗ ಸಭೆಯಲ್ಲಿ ತಮ್ಮ ಭಾಷಣದ ಸಂದರ್ಭದಲ್ಲಿ ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರು ಪ್ರಮೋದ್ ಮಧ್ವರಾಜ್ ಪಕ್ಷಕ್ಕೆ ಎಸಗಿದ ದ್ರೋಹವನ್ನು ಉಲ್ಲೇಖಿಸಿ ಈ ಮಾತುಗಳನ್ನಾಡಿದರು. ಕಾಂಗ್ರೆಸ್ ಪಕ್ಷ  ಮಧ್ವರಾಜ್  ಅವರ ತಂದೆಯನ್ನು  ಶಾಸಕರನ್ನಾಗಿ ಮಾಡಿತು. ತಾಯಿಯವರನ್ನು ಶಾಸಕಿ ಹಾಗೂ ಸಚಿವೆಯನ್ನಾಗಿ ಮಾಡಿತು. ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದರೂ ಪ್ರಮೋದ್‌ರನ್ನು ಸಿದ್ಧರಾಮಯ್ಯ ಸಚಿವರನ್ನಾಗಿ ಮಾಡಿದರು. ಆದರೂ ಅವರು ಇದೆಲ್ಲವನ್ನೂ ಮರೆತು ಬಿಜೆಪಿ ಪಕ್ಷ ಸೇರಿದ್ದಾರೆ ಎಂದ ಡಿ.ಕೆ.ಶಿವಕುಮಾರ್, ಅವರಿಗೆ ಬಿಜೆಪಿ ಪಕ್ಷ ಈ ಬಾರಿ ಟಿಕೇಟ್ ನೀಡತ್ತೊ, ಇಲ್ಲವೊ ಗೊತ್ತಿಲ್ಲ. ಆದರೆ ಟಿಕೇಟ್ ನೀಡಿದಲ್ಲಿ ಅವರು ಎಲ್ಲೇ ಚುನಾವಣೆಗೆ ನಿಂತರೂ ಅವರನ್ನು ಜನರು ಸೋಲಿಸಬೇಕು ಎಂದರು.

ಪ್ರಮೋದ್ ಬಿಜೆಪಿ ಪಕ್ಷ ಸೇರುವಾಗ ಕಾಂಗ್ರೆಸ್‌ನ ಒಬ್ಬನೇ ಒಬ್ಬ ಕಾರ್ಯಕರ್ತ ಆತನ ಹಿಂದೆ ಹೋಗಿಲ್ಲ. ಇದಕ್ಕಾಗಿ ನಾನು ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲವನ್ನೂ ನೀಡಿದ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದ ಪ್ರಮೋದ್ ಎಲ್ಲೇ ನಿಂತರೂ ಸೋಲುವುದನ್ನು ಖಚಿತ ಪಡಿಸಿ ಎಂದು ಡಿಕೆಶಿ ನುಡಿದರು.

ತಮ್ಮ ಭಾಷಣದ ವೇಳೆ ಇದೇ ವಿಷಯ ಪ್ರಸ್ತಾಪಿಸಿದ ಸಿದ್ದರಾಮಯ್ಯ, ಬಿಜೆಪಿಯವರು ಹಿಂದುತ್ವವಾದಿಗಳು. ಹಿಂದುಗಳ ಪರ ಇರುವವರಲ್ಲ. ನಾವು ಹಿಂದುಗಳ ಪರ ಇರುವವರು. ರಣದೀಪ್ ಸುರ್ಜೇವಾಲಾ, ಡಿಕೆ ಶಿವಕುಮಾರ್ ನಾವೆಲ್ಲ ಹಿಂದುಗಳಲ್ಲವೇ.. ಬಿಜೆಪಿಯವರಿಗೆ ಹಿಂದುಗಳು ಬೇಕಿಲ್ಲ. ಹಿಂದುತ್ವ ವಾದಿಗಳಷ್ಟೆ ಬೇಕು. ಇದನ್ನು ನಾವು ಒಪ್ಪಲ್ಲ. ಹಿಂದು ಅನ್ನೋದು ಎಲ್ಲವನ್ನು ಸ್ವೀಕಾರ ಮಾಡೋದು. ಆರೆಸ್ಸೆಸ್ ಮಂದಿ ಹೊಸ ಹಿಂದುತ್ವ ಹೇಳ್ತಾ ಇದೆಯಷ್ಟೆ. ಇದರಿಂದ ಸಮಾಜದಲ್ಲಿ ಸಾಮರಸ್ಯ ಕದಡುತ್ತಾ ಇದೆ ಎಂದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಐಫೋನ್‌ನಲ್ಲಿ ಸೋನಿ ಕ್ಯಾಮೆರಾ ಲೆನ್ಸ್ ; ಆ್ಯಪಲ್ ಸಿಇಒ ಟಿಮ್ ಕುಕ್ ಟ್ವೀಟ್

Next Post

ಕರಾವಳಿ ಅಭಿವೃದ್ಧಿಗೆ 2500 ಕೋಟಿ ಬಜೆಟ್ ಘೋಷಣೆ, ಪ್ರತಿ ಮೀನುಗಾರರಿಗೆ 10 ಲಕ್ಷ ರೂ. ವಿಮಾ ಯೋಜನೆ

Related Posts

ನಿತಿನ್ ನಬಿನ್ ಅವರ ನೇತೃತ್ವದ ಬಿಜೆಪಿಯ ಹೊಸ ತಂಡ ರೆಡಿ: ರಾಮ್ ಮಾಧವ್, ಸ್ಮೃತಿ ಇರಾನಿಗೆ ಪ್ರಮುಖ ಹೊಣೆ, ಯುವಮೋರ್ಚಾಕ್ಕೆ ಹೊಸ ಸಾರಥಿ ನೇಮಕ
ರಾಜಕೀಯ

ನಿತಿನ್ ನಬಿನ್ ಅವರ ನೇತೃತ್ವದ ಬಿಜೆಪಿಯ ಹೊಸ ತಂಡ ರೆಡಿ: ರಾಮ್ ಮಾಧವ್, ಸ್ಮೃತಿ ಇರಾನಿಗೆ ಪ್ರಮುಖ ಹೊಣೆ, ಯುವಮೋರ್ಚಾಕ್ಕೆ ಹೊಸ ಸಾರಥಿ ನೇಮಕ

August 18, 2026
35
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಸಿದ್ದರಾಮಯ್ಯ! ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗೆ ಪತ್ರ ಹಸ್ತಾಂತರ
ರಾಜಕೀಯ

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಸಿದ್ದರಾಮಯ್ಯ! ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗೆ ಪತ್ರ ಹಸ್ತಾಂತರ

May 28, 2026
26
Next Post
ಕರಾವಳಿ ಅಭಿವೃದ್ಧಿಗೆ 2500 ಕೋಟಿ ಬಜೆಟ್ ಘೋಷಣೆ, ಪ್ರತಿ ಮೀನುಗಾರರಿಗೆ 10 ಲಕ್ಷ ರೂ. ವಿಮಾ ಯೋಜನೆ

ಕರಾವಳಿ ಅಭಿವೃದ್ಧಿಗೆ 2500 ಕೋಟಿ ಬಜೆಟ್ ಘೋಷಣೆ, ಪ್ರತಿ ಮೀನುಗಾರರಿಗೆ 10 ಲಕ್ಷ ರೂ. ವಿಮಾ ಯೋಜನೆ

Discussion about this post

Recent News

ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ: ನಾಲ್ವರು ಅಂತರ್ ಜಿಲ್ಲಾ ಕಳ್ಳರ ಬಂಧನ

ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ: ನಾಲ್ವರು ಅಂತರ್ ಜಿಲ್ಲಾ ಕಳ್ಳರ ಬಂಧನ

September 11, 2026
40
ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿತ ಎಂಡಿಎಂಎ ಹಾಗೂ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಒಟ್ಟು 6 ಮಂದಿ ಆರೋಪಿಗಳ ಬಂಧನ

ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿತ ಎಂಡಿಎಂಎ ಹಾಗೂ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಒಟ್ಟು 6 ಮಂದಿ ಆರೋಪಿಗಳ ಬಂಧನ

September 11, 2026
59
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ: ನಾಲ್ವರು ಅಂತರ್ ಜಿಲ್ಲಾ ಕಳ್ಳರ ಬಂಧನ

ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ: ನಾಲ್ವರು ಅಂತರ್ ಜಿಲ್ಲಾ ಕಳ್ಳರ ಬಂಧನ

September 11, 2026
ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿತ ಎಂಡಿಎಂಎ ಹಾಗೂ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಒಟ್ಟು 6 ಮಂದಿ ಆರೋಪಿಗಳ ಬಂಧನ

ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿತ ಎಂಡಿಎಂಎ ಹಾಗೂ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಒಟ್ಟು 6 ಮಂದಿ ಆರೋಪಿಗಳ ಬಂಧನ

September 11, 2026
ಸೆ.19: ಕಾಞಂಗಾಡ್‌ನ  ಹೊಸದುರ್ಗ ನಿತ್ಯಾನಂದ ಆಶ್ರಮದಲ್ಲಿ ಪುಸ್ತಕ ಬಿಡುಗಡೆ

ಸೆ.19: ಕಾಞಂಗಾಡ್‌ನ ಹೊಸದುರ್ಗ ನಿತ್ಯಾನಂದ ಆಶ್ರಮದಲ್ಲಿ ಪುಸ್ತಕ ಬಿಡುಗಡೆ

September 11, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d