ಮಂಗಳೂರು: ನಮ್ಮದು ಶೌರ್ಯ ಪರಾಕ್ರಮಗಳ ಇತಿಹಾಸ, ಸುಮಾರು ಎರಡು ಸಾವಿರ ವರ್ಷಗಳಿಗೂ ಹೆಚ್ಚು ಕಾಲ ಈ ರಾಷ್ಟ್ರದ ಮೇಲೆ ಪರಕೀಯರ ಅಕ್ರಮಣಗಳು ನಡೆಯುತ್ತಲೇ ಇದ್ದರೂ ಅದನ್ನು ದಿಟ್ಟವಾಗಿ ಸಮರ್ಪಕವಾಗಿ ಎದುರಿಸುತ್ತಾ ನಮ್ಮ ಸನಾತನ ಧರ್ಮವನ್ನು ಈ ಪವಿತ್ರ ಭರತಭೂಮಿಯನ್ನು ಸಂರಕ್ಷಿಸುವಲ್ಲಿ ಲಕ್ಷಾಂತರ ವೀರ ಪರಾಕ್ರಮಿಗಳು ತಮ್ಮ ಜೀವನವನ್ನೇ ಸಮರ್ಪಿಸಿ ಬಲಿದಾನಗೈದು ನಮಗೆ ಶ್ರೇಷ್ಠ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ. ಅವರ ತ್ಯಾಗ ಬಲಿದಾನಗಳಿಂದ ನಮ್ಮ ಸನಾತನ ಧರ್ಮವು ಸುರಕ್ಷಿತವಾಗಿ ಉಳಿದಿದ, ಸನಾತನ ಧರ್ಮವನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಕಾರ್ಯವು ಪ್ರತಿಯೊಬ್ಬ ಹಿಂದುವಿನ ಮೇಲೆ ಇದೆ. ಇಂದಿನ ಯುವಪೀಳಿಗೆಗೆ ನಮ್ಮ ಪೂರ್ವಜರು ತೋರಿಸಿದ ಶೌರ್ಯ, ಪರಾಕ್ರಮ, ಬಲಿದಾನಗಳನ್ನು ನೆನಪಿಸಿ, ಅವರನ್ನು ಜಾಗೃತಗೊಳಿಸಿ, ಅವರ ಜೀವನ ಪ್ರೇರಣೆ ಪಡೆದು ದೇಶಕೋಸ್ಕರ, ಧರ್ಮಕೋಸ್ಕರ ಬದುಕಲು ಸಂಕಲ್ಪ ಮಾಡುವ ಉದ್ದೇಶದಿಂದ ಸೆಪ್ಟೆಂಬರ್ 25 ರಿಂದ ರಾಜ್ಯಾದ್ಯಂತ ಶೌರ್ಯ ಜಾಗರಣ ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಈ ರಥಯಾತ್ರೆಯೊಂದಿಗೆ ನೂರಾರು ಕಡೆ ಸಾರ್ವಜನಿಕ ಸಭೆಗಳನ್ನು ನಡೆಸಿ, ಸಮಾಜವನ್ನು ಜಾಗ್ರತಗೊಳಿಸಲಿದ್ದೇವ.
ಸೆಪ್ಟೆಂಬರ್ 25 2023 ರಂದು ಚಿತ್ರದುರ್ಗದಲ್ಲಿ ಉದ್ಘಾಟನೆ – ಅಕ್ಟೋಬರ್ 10 ರಂದು ಉಡುಪಿಯಲ್ಲಿ ಸಮಾರೋಪ :
ಪರಕೀಯರ ವಿರುದ್ಧ ಧೈರ್ಯ ಸಾಹಸದಿಂದ ಹೋರಾಡಿ ಶೌರ್ಯ ಮರದ ಗಂಡು ಮೆಟ್ಟಿದ ನಾಡು ರಾಜ ವೀರ ಮದಕರಿ ನಾಯಕ ಮತ್ತು ವೀರ ವನಿತೆ ಓಬವ್ವಳ ಪುಣ್ಯಭೂಮಿಯಾದ ಚಿತ್ರದುರ್ಗದಲ್ಲಿ ಸಪ್ಟೆಂಬರ್ 25 ರಂದು ಈ ರಥಯಾತ್ರೆಯು ಉದ್ಘಾಟನೆಗೊಂಡು ಧಾವಣಗರ, ಶಿವಮೊಗ್ಗ, ಸಾಗರ, ಶೃಂಗೇರಿ, ಬಾಳೆಹೊನ್ನೂರು, ಚಿಕ್ಕಮಂಗಳೂರು, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಮಂಡ್ಯ, ಮೈಸೂರ್, ಕೊಡಗು, ಸುಳ್ಯ ಪುತ್ತೂರು. ಮಂಗಳೂರು ಮೂಲಕ ಉಡುಪಿಯಲ್ಲಿ ಅಕ್ಟೋಬರ್ 10ರಂದು ಸಮಾರೋಪಗೊಳ್ಳಲಿದೆ. ಪುತೀ ಜಿಲ್ಲೆಯಲ್ಲಿ ಶೌರ್ಯ ಜಾಗರಣ ರಥಯಾತ್ರೆಯ ಮೂಲಕ ಸಾವಿರಾರರು ಯುವಕರನ್ನು ಜೋಡಿಸಿ ಬೃಹತ್ ಸಾರ್ವಜನಿಕ ಸಭೆಗಳು ನಡೆಯಲಿವೆ. ಆ ಸಭೆಯಲ್ಲಿ ನಮ್ಮ ಶೌರ್ಯ ಪರಾಕ್ರಮ ಮೆರೆದ ಮಹಾಪುರುಷರ ಸ್ಮರಣೆಯಾಗಲಿದೆ.
ರಥಯಾತ್ರೆಯ ಸಂಕ್ಷಿಪ್ತ ಉದ್ದೇಶ :
ಯುವಶಕ್ತಿಯನ್ನು ರಾಷ್ಟ್ರಶಕ್ತಿಯನ್ನಾಗಿಸುವ ಕಾರ್ಯವನ್ನು ಮಾಡುವುದು ನಮ್ಮ ಉದ್ದೇಶ, ಈಗಾಗಲೇ ರಾಜ್ಯದಲ್ಲಿ ಪ್ರತೀ ಜಿಲ್ಲೆಯಲ್ಲಿ ಹೊಸ ಹೊಸ ಬಜರಂಗದಳದ ಘಟಕಗಳನ್ನು ರಚಿಸಿ ಯುವಕರನ್ನು ಸಂಘಟಿಸಿ, ದೇಶದ 2000 ಕ್ಕೂ ಹೆಚ್ಚು, ಬಜರಂಗದಳದ ಘಟಕಗಳನ್ನು ಹೊಂದಿದ್ದು ಅದನ್ನು ಮುಂದಿನ ಕೃಷ್ಣ ಜನ್ಮಾಷ್ಟಮಿಯ ಒಳಗಡೆ 5000 ಮಾಡುವ ಗುರಿ ಹೊಂದಿದ್ದೇವೆ.
* ಹಿಂದೂ ಧರ್ಮದ ವೈಭವಯುತ ಚರಿತ್ರೆ, ಸಂಸ್ಕೃತಿ, ಸಂಪ್ರದಾಯ ಇಡೀ ಸಮಾಜಕ್ಕೆ ತಿಳಿಸುತ್ತಾ ಸಮಾಜಕ್ಕೆ ಅನ್ಯರಿಂದ ಆಗಿರುವ ಹಾನಿ ಹಾಗೂ ಪ್ರಸ್ತುತ ಆಗುತ್ತಿರುವ ಘಾಸಿ ಅನ್ಯರ ತುಷ್ಟಿಕರಣ ಮಾಡಿ ರಾಜಕೀಯ ಮಾಡುತ್ತಿರುವ ಪರಿ ತಿಳಿಸಿ ಅದನ್ನು ತುಳಿದು ನಿಂತು ಗೌರವಯುತ ಶಾಂತಿಯುತ ಸಮಾಜ ನಿರ್ಮಾಣಕ್ಕೆ ಪ್ರೇರಣೆ ಕೊಡುವುದು.
* ಹಿಂದೂ ಧರ್ಮದ ಅಡಿಪಾಯಗಳಾದ ಗೋವು, ದೇವಸ್ಥಾನಗಳು, ಶ್ರದ್ಧಾ ಕೇಂದ್ರಗಳನ್ನು ಉಳಿಸಿ ಬೆಳೆಸುವಲ್ಲಿ ಪ್ರೇರಣೆ ಕೊಡುವುದು.
* ಸಮಾಜದಲ್ಲಿ ಪರಸ್ಪರ ಸಾಮರಸ್ಯ ಕಾಪಾಡಿ ನಮ್ಮ ಹೆಮ್ಮೆಯ ಸನಾತನ ಹಿಂದೂಧರ್ಮ ಮತ್ತು ಸಂಸ್ಕೃತಿ, ಸಂವುದಾಯಗಳನ್ನು ತಿಳಿಹೇಳಿ ಸಮರ್ವಕವಾಗಿ ಆಚರಿಸುವಂತೆ ಪ್ರೇರಣೆ ನೀಡುವುದು.
* ಯುವಪೀಳಿಗೆಯನ್ನು ಪಾಶ್ಚಾತ್ಯ ಪ್ರಭಾವದಿಂದ ಹೊರ ತಂದು ಮಹಾಪಾತಕಗಳಿಂದ ಮುಕ್ತಗೊಳಿಸಿ ನಮ್ಮ ಹಮ್ಮೆಯ ಧರ್ಮ ಆಚರಣೆಗೆ ಸಿದ್ಧಪಡಿಸುವ ಯೋಜನೆ ಮತ್ತು ಪ್ರೇರೇಪಣೆ ಮಾಡುವುದು.
*ಯುವಕರನ್ನು ಜಾಗೃತಿಗೊಳಿಸಿ ಸ್ವಾವಲಂಬಿಗಳಾಗಿ ಬದುಕಿ, ಹೊಸ ಭಾರತ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಲು ಕರೆ.
* ಹಿಂದೂ ಯುವಕರಲ್ಲಿ ನಮ್ಮ ಪೂರ್ವಜರ ಮತ್ತು ಹುತಾತ್ಮರ ಜೀವನದ ಬಗ್ಗೆ, ಹಮ್ಮೆಯ ಭಾವವನ್ನು ಮೂಡಿಸುವುದು. ಅವರ ಪ್ರೇರಣೆಯಿಂದ ಸ್ಫೂರ್ತಿ ಪಡೆದು ಯುವಕರು ದೇಶಕ್ಕಾಗಿ ಬದುಕುವ ಸಂಕಲ್ಪ ಮಾಡಿಸುವುದು.
* ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಮೇಲಿನ ಗೌರವವನ್ನು ಜಾಗೃತಗೊಳಿಸುವುದು.
ನಾವೆಲ್ಲಾ ಹಿಂದೂ ನಾವೆಲ್ಲ ಒಂದು ಎಂಬ ಘೋಷಣೆಯಿಂದ ಸಮಾಜದಲ್ಲಿ ಸಾಮಾಜಿಕ ಸಾಮರಸ್ಯಕ್ಕಾಗಿ ಸಂಕಲ್ಪಮಾಡಿಸುವುದು.
* ಯುವಕರನ್ನು ವ್ಯಸನಗಳಿಂದ ಮುಕ್ತಿಗೊಳಿಸಿ, ಸಂಸ್ಕಾರವನ್ನು ನೀಡಿ ದೇಶಭಕ್ತರನ್ನಾಗಿಸುವುದು.
* ಲವ್ ಜಿಹಾದ್, ಮತಾಂತರ, ಗೋಹತ್ಯೆ ಇವುಗಳನ್ನು ತಡೆದು ಹಿಂದೂ ಧರ್ಮದ ರಕ್ಷಣೆ.
ದಕ್ಷಿಣಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯಲ್ಲಿ ಬೃಹತ್ ಶೋಭಾಯಾತ್ರೆ ಸಾರ್ವಜನಿಕ ಸಭೆ ಹಮ್ಮಿಕೊಳ್ಳಲಾಗಿದೆ.
ಈ ಶೌರ್ಯ ಜಾಗರಣ ರಥಯಾತ್ರೆಯು ಕೊಡಗು ಮೂಲಕ ಅಕ್ಟೋಬರ್ 6 ನೇ ತಾರೀಕು ಸುಳ್ಯ ತಾಲೂಕಿಗೆ ತಲುಪಲಿದ್ದು, ಸುಳ್ಯದಲ್ಲಿ ಬೃಹತ್ ಕಾರ್ಯಕ್ರಮದ ಮುಖಾಂತರ ರಥವನ್ನು ಸ್ವಾಗತಿಸಲಿದ್ದೇವೆ. ಅಕ್ಟೋಬರ್ 7 ರಂದು ಪುತ್ತೂರು ನಗರದಲ್ಲಿ ಬೃಹತ್ ಸಾರ್ವಜನಿಕ ಸಭೆ, ಒಕ್ಟೋಬರ್ 09 ರಂದು ಮಂಗಳೂರಿನಲ್ಲಿ ಬೃಹತ್ ಶೋಭಾಯಾತ್ರೆಯೊಂದಿಗೆ ಕದ್ರಿ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಈ ರಥಯಾತ್ರೆಯ ಸಮಾರೋಪ ಕಾರ್ಯಕ್ರಮವು ಉಡುಪಿಯಲ್ಲಿ ಬೃಹತ್ ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಮೂಲಕ ಸಂಪನ್ನಗೊಳ್ಳಲಿದೆ.
Discussion about this post