• About us
  • Contact us
  • Disclaimer
Tuesday, September 22, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಗಳೂರು: ಬಜ್ಪೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಎಚ್‌.ಎನ್ ಬಾಲಕೃಷ್ಣ ಲೋಕಾಯುಕ್ತ ಬಲೆಗೆ

Coastal Times by Coastal Times
September 22, 2026
in ಕ್ರೈಮ್ ನ್ಯೂಸ್
ಮಂಗಳೂರು: ಬಜ್ಪೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಎಚ್‌.ಎನ್ ಬಾಲಕೃಷ್ಣ ಲೋಕಾಯುಕ್ತ ಬಲೆಗೆ
35
VIEWS
WhatsappTelegramShare on FacebookShare on Twitter

ಮಂಗಳೂರು, ಸೆ.21: ಬಜ್ಪೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಎಚ್‌.ಎನ್ ಬಾಲಕೃಷ್ಣ ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಿದ್ದಾರೆ. ವಂಚನೆ ಪ್ರಕರಣ ಒಂದರಲ್ಲಿ ವಶಕ್ಕೆ ಪಡೆದಿದ್ದ ಹಣವನ್ನು ಬಿಡುಗಡೆ ಮಾಡಲು 20 ಸಾವಿರ ರೂ. ಲಂಚ ಕೇಳಿ ಟ್ರಾಪ್ ಆಗಿದ್ದಾರೆ.‌

ಬಜ್ಜೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣ ಒಂದರಲ್ಲಿ ಆರೋಪಿಗಳಿಂದ ವಶಕ್ಕೆ ಪಡೆಯಲಾಗಿದ್ದ ಹಣವನ್ನು ಬಿಡುಗಡೆ ಮಾಡಲು ಇನ್ಸ್ ಪೆಕ್ಟರ್ ಬಾಲಕೃಷ್ಣ ರವರು ರೂ. 25,000/- ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಪೈಕಿ 15,000 ಹಣವನ್ನು ಮುಂಚಿತವಾಗಿ ಪಡೆದುಕೊಂಡಿದ್ದರು. ಹೆಚ್ಚುವರಿಯಾಗಿ ರೂ 5000/- ಹಣಕ್ಕಾಗಿ ಬೇಡಿಕೆ ಇಟ್ಟಿದ್ದರಿಂದ ಸಂತ್ರಸ್ತರು ಮಂಗಳೂರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಇದರಂತೆ, ಸೆ.21 ರಂದು ಸಂತ್ರಸ್ತ ವ್ಯಕ್ತಿಯಿಂದ ರೂ.5000 ಲಂಚದ ಹಣವನ್ನು ಸ್ವೀಕರಿಸುತ್ತಿದ್ದಾಗಲೇ ಇನ್ಸ್ ಪೆಕ್ಟರ್ ಬಾಲಕೃಷ್ಣ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಈ ಹಿಂದೆ ಉಳ್ಳಾಲ ಠಾಣೆಯಲ್ಲಿದ್ದಾಗಲೂ ಬಾಲಕೃಷ್ಣ ಅವರು ಭ್ರಷ್ಟಾಚಾರ ಎಸಗಿ ಸಾಕಷ್ಟು ಹೆಸರು ಮಾಡಿದ್ದರು. ಉಳ್ಳಾಲದಲ್ಲಿ ಮನೆಯೊಂದರಲ್ಲಿ 15 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನವಾದ ಪ್ರಕರಣದಲ್ಲಿ ದೂರು ನೀಡಿದ ವ್ಯಕ್ತಿಯದ್ದೇ ಅಪ್ರಾಪ್ತ ಪುತ್ರ ಸೇರಿ ಆತನ ಗೆಳೆಯರ ಕೃತ್ಯವೆಂದು ಪತ್ತೆಹಚ್ಚಿದಲ್ಲದೆ ಮಾರಾಟ ಮಾಡಿದ್ದ ಚಿನ್ನಾಭರಣವನ್ನೂ ವಶ ಪಡಿಸಿದ್ದರು. ಇದರಲ್ಲಿಯೂ ಇನ್ಸ್ ಪೆಕ್ಟರ್ ಲಂಚ ಪಡೆದಿದ್ದ ಆರೋಪ ಕೇಳಿಬಂದಿತ್ತು.

ಪ್ರಕರಣದ ಆರೋಪಿಯಾಗಿದ್ದ ಬೆಳ್ತಂಗಡಿ ಮೂಲದ ಯುವಕನೊಬ್ಬನ ತಾಯಿಯಲ್ಲಿ ಪ್ರಕರಣ ಮುಚ್ಚಿ ಹಾಕಲು 3 ಲಕ್ಷ ರೂಪಾಯಿ ಪೀಕಿಸಿದಲ್ಲದೆ, ಮಗನ ಮೈಮೇಲಿದ್ದ 50 ಗ್ರಾಂ ಚಿನ್ನಾಭರಣವನ್ನ ಎಗರಿಸಿ ಮಗನನ್ನು ಆರೋಪಿಯಾಗಿಸಿದ್ದಕ್ಕೆ ತಾಯಿ ಅಂದಿನ ಕಮೀಷನರ್ ಗೆ ದೂರು ನೀಡಿದ್ದರು. ಇಲಾಖಾ ವಿಚಾರಣೆ ವೇಳೆ ಬಾಲಕೃಷ್ಣ ಅವರು ದೂರುದಾರ ಮಹಿಳೆಗೆ ನಾಲ್ಕೂವರೆ ಲಕ್ಷ ರೂಪಾಯಿ ಕೊಟ್ಟು ಸಮಾಧಾನ ಪಡಿಸಿ ಕೇಸನ್ನ ಹಿಂಪಡೆಯುವಂತೆ ಮಾಡಿದ್ದರೆನ್ನಲಾಗಿದೆ.

ಬಳಿಕ ಈ ವ್ಯಕ್ತಿಯ ಲಂಚದಾಹ ಸಹಿಸಲಾಗದೆ ಉಳ್ಳಾಲದ ಮರಳು ದಂಧೆಕೋರರೇ ಸೇರಿ ಖಾದರ್ ಅವರಲ್ಲಿ ಹೇಳಿ ಠಾಣೆಯಿಂದ ಹೊರದಬ್ಬಿದ್ದರು. ಉಳ್ಳಾಲದಿಂದ ಹೊರದಬ್ಬಲ್ಪಟ್ಟು ತಿಂಗಳ ಕಾಲ ರಜೆಯಲ್ಲಿದ್ದ ಬಾಲಕೃಷ್ಣ ರಾಜಕಾರಣಿಗಳ ಕೈಕಾಲು ಹಿಡಿದು ಮತ್ತೆ ಪಾಂಡೇಶ್ವರ ಮಹಿಳಾ ಠಾಣೆಗೆ ವಕ್ಕರಿಸಿದ್ದರು. ಅಲ್ಲಿಂದ ವರ್ಗಾವಣೆಗೊಂಡು ಸದ್ಯ ಬಜ್ಪೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಕೆ.ಸಿ ರೋಡ್ ಶಾಖೆಯ ದರೋಡೆ ಪ್ರಕರಣದಲ್ಲಿ ನುರಿತ ಪೊಲೀಸ್ ತಂಡಗಳು ಹೊರ ರಾಜ್ಯಗಳಿಗೆ ತೆರಳಿ ಕಣ್ಣಿಗೆ ಎಣ್ಣೆ ಬಿಟ್ಟು ಆರೋಪಿಗಳನ್ನ ಬಂಧಿಸಿ ಕರೆ ತಂದಿದ್ದಲ್ಲದೆ, ದರೋಡೆಗೈದ ಕೋಟಿಗಟ್ಟಲೆ ಮೌಲ್ಯದ ಚಿನ್ನಾಭರಣಗಳನ್ನೂ ವಶಪಡಿಸಿದ್ದರು. ಆದರೆ ದರೋಡೆ ಪ್ರಕರಣದ ನೆಪದಲ್ಲಿ ಅಂದಿನ ಉಳ್ಳಾಲ ಇನ್ಸ್ ಪೆಕ್ಟರ್ ಆಗಿದ್ದ ಬಾಲಕೃಷ್ಣ ಅವರ ಹೆಸರನ್ನು ಮುಖ್ಯಮಂತ್ರಿ ಪದಕಕ್ಕೆ ಶಿಫಾರಸು ಮಾಡಲಾಗಿತ್ತು. ಹಿಂದಿನ ಕಮಿಷನರ್ ಅನುಪಮ್ ಅಗರ್ವಾಲ್ ಅವರ ಕೃಪೆಯಿಂದ ಈ ಶಿಫಾರಸು ಮಾಡಿದ್ದು ಅಂದು ಭಾರೀ ಸುದ್ದಿಯಾಗಿತ್ತು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಅಂತಾರಾಷ್ಟ್ರೀಯ ‘ಹೈರಾಕ್ಸ್’ ಫಿಟ್‌ನೆಸ್ ರೇಸ್ ಪೂರ್ಣಗೊಳಿಸಿದ ದ.ಕ. ಜಿಲ್ಲಾಧಿಕಾರಿ ದರ್ಶನ್, ಪವರ್ ಲಿಫ್ಟರ್ ಪ್ರದೀಪ್ ಕುಮಾರ್ ಆಚಾರ್ಯ

Next Post

ಕಾಪು: ಮೇಯಲು ಬಿಟ್ಟಿದ್ದ ದನ ಕಳವು ಪ್ರಕರಣ; ನಾಲ್ವರ ಬಂಧನ, ವಾಹನ ಮತ್ತು ಜಾನುವಾರು ವಶ

Related Posts

ಬೆಳ್ತಂಗಡಿ: ಮನೆಗೆ ನುಗ್ಗಿ 15.82 ಲಕ್ಷ ಮೌಲ್ಯದ ಚಿನ್ನಾಭರಣ, 1.80 ಲಕ್ಷ ನಗದು ಕಳವು
ಕ್ರೈಮ್ ನ್ಯೂಸ್

ಬೆಳ್ತಂಗಡಿ: ಮನೆಗೆ ನುಗ್ಗಿ 15.82 ಲಕ್ಷ ಮೌಲ್ಯದ ಚಿನ್ನಾಭರಣ, 1.80 ಲಕ್ಷ ನಗದು ಕಳವು

September 16, 2026
52
ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ: ನಾಲ್ವರು ಅಂತರ್ ಜಿಲ್ಲಾ ಕಳ್ಳರ ಬಂಧನ
ಕ್ರೈಮ್ ನ್ಯೂಸ್

ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ: ನಾಲ್ವರು ಅಂತರ್ ಜಿಲ್ಲಾ ಕಳ್ಳರ ಬಂಧನ

September 11, 2026
53
Next Post
ಕಾಪು: ಮೇಯಲು ಬಿಟ್ಟಿದ್ದ ದನ ಕಳವು ಪ್ರಕರಣ; ನಾಲ್ವರ ಬಂಧನ, ವಾಹನ ಮತ್ತು ಜಾನುವಾರು ವಶ

ಕಾಪು: ಮೇಯಲು ಬಿಟ್ಟಿದ್ದ ದನ ಕಳವು ಪ್ರಕರಣ; ನಾಲ್ವರ ಬಂಧನ, ವಾಹನ ಮತ್ತು ಜಾನುವಾರು ವಶ

Discussion about this post

Recent News

ಕಾಪು: ಮೇಯಲು ಬಿಟ್ಟಿದ್ದ ದನ ಕಳವು ಪ್ರಕರಣ; ನಾಲ್ವರ ಬಂಧನ, ವಾಹನ ಮತ್ತು ಜಾನುವಾರು ವಶ

ಕಾಪು: ಮೇಯಲು ಬಿಟ್ಟಿದ್ದ ದನ ಕಳವು ಪ್ರಕರಣ; ನಾಲ್ವರ ಬಂಧನ, ವಾಹನ ಮತ್ತು ಜಾನುವಾರು ವಶ

September 22, 2026
16
ಮಂಗಳೂರು: ಬಜ್ಪೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಎಚ್‌.ಎನ್ ಬಾಲಕೃಷ್ಣ ಲೋಕಾಯುಕ್ತ ಬಲೆಗೆ

ಮಂಗಳೂರು: ಬಜ್ಪೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಎಚ್‌.ಎನ್ ಬಾಲಕೃಷ್ಣ ಲೋಕಾಯುಕ್ತ ಬಲೆಗೆ

September 22, 2026
35
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಕಾಪು: ಮೇಯಲು ಬಿಟ್ಟಿದ್ದ ದನ ಕಳವು ಪ್ರಕರಣ; ನಾಲ್ವರ ಬಂಧನ, ವಾಹನ ಮತ್ತು ಜಾನುವಾರು ವಶ

ಕಾಪು: ಮೇಯಲು ಬಿಟ್ಟಿದ್ದ ದನ ಕಳವು ಪ್ರಕರಣ; ನಾಲ್ವರ ಬಂಧನ, ವಾಹನ ಮತ್ತು ಜಾನುವಾರು ವಶ

September 22, 2026
ಮಂಗಳೂರು: ಬಜ್ಪೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಎಚ್‌.ಎನ್ ಬಾಲಕೃಷ್ಣ ಲೋಕಾಯುಕ್ತ ಬಲೆಗೆ

ಮಂಗಳೂರು: ಬಜ್ಪೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಎಚ್‌.ಎನ್ ಬಾಲಕೃಷ್ಣ ಲೋಕಾಯುಕ್ತ ಬಲೆಗೆ

September 22, 2026
ಅಂತಾರಾಷ್ಟ್ರೀಯ ‘ಹೈರಾಕ್ಸ್’ ಫಿಟ್‌ನೆಸ್ ರೇಸ್ ಪೂರ್ಣಗೊಳಿಸಿದ ದ.ಕ. ಜಿಲ್ಲಾಧಿಕಾರಿ ದರ್ಶನ್, ಪವರ್ ಲಿಫ್ಟರ್ ಪ್ರದೀಪ್ ಕುಮಾರ್ ಆಚಾರ್ಯ

ಅಂತಾರಾಷ್ಟ್ರೀಯ ‘ಹೈರಾಕ್ಸ್’ ಫಿಟ್‌ನೆಸ್ ರೇಸ್ ಪೂರ್ಣಗೊಳಿಸಿದ ದ.ಕ. ಜಿಲ್ಲಾಧಿಕಾರಿ ದರ್ಶನ್, ಪವರ್ ಲಿಫ್ಟರ್ ಪ್ರದೀಪ್ ಕುಮಾರ್ ಆಚಾರ್ಯ

September 21, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d