ಪಾಕಿಸ್ತಾನ ಮತ್ತು ಚೀನಾ ನಡುವೆ ಸಂಪರ್ಕ ಕಲ್ಪಿಸುತ್ತಿದ್ದ ಪಾಕಿಸ್ತಾನದ ಐತಿಹಾಸಿಕ ಹಸನಾಬಾದ್ ಬೃಹತ್ ಸೇತುವೆ ಕುಸಿದು ಬಿದ್ದಿದೆ. ಉತ್ತರ ಪಾಕಿಸ್ತಾನದಲ್ಲಿ ಶಿಶ್ಪರ್ ಹೆಸರಿನ ಗ್ಲೇಶಿಯರ್ ಭಾರಿ ತಾಪಮಾನಕ್ಕೆ ಕರಗಿಹೋಗಿದೆ. ಸೇತುವೆ ಕುಸಿದು ಬಿದ್ದಿದ್ದರಿಂದ ಇದ್ದಕ್ಕಿದಂತೆ ಪ್ರವಾಹ ಕೂಡ ಉಂಟಾಗಿದೆ , ಎಲ್ಲೆಡೆ ಹೀಟ್‌ವೇವ್ ತೀವ್ರವಾಗುತ್ತಿದೆ. ಜನ ಜಾನುವಾರು, ಪ್ರಾಣಿ-ಪಕ್ಷಿ ಸಂಕುಲ ತಾಪಮಾನಕ್ಕೆ ತತ್ತರಿಸಿ ಹೋಗಿದ್ದಾರೆ. ಇನ್ನೂ ಪಾಕಿಸ್ತಾನ ಮತ್ತು ನೆರೆಯ ಭಾರತವು ಸಹ ತೀವ್ರವಾದ ಶಾಖದಿಂದ ಕಂಗೆಟ್ಟು ಹೋಗಿದೆ. ಭಾರಿ ತಾಪಮಾನಕ್ಕೆ ಪಾಕಿಸ್ತಾನ ಮತ್ತು ಚೀನಾ ( ನಡುವೆ ಸಂಪರ್ಕ ಕಲ್ಪಿಸುತ್ತಿದ್ದ ಪಾಕಿಸ್ತಾನದ ಐತಿಹಾಸಿಕ ಹಸನಾಬಾದ್ ಬೃಹತ್ ಸೇತುವೆ ಕುಸಿದು ಬಿದ್ದಿದೆ. ಉತ್ತರ ಪಾಕಿಸ್ತಾನದಲ್ಲಿ ಶಿಶ್ಪರ್ ಹೆಸರಿನ ಗ್ಲೇಶಿಯರ್ ಭಾರಿ ತಾಪಮಾನಕ್ಕೆ ಕರಗಿಹೋಗಿದೆ. ಸೇತುವೆ ಕುಸಿದು ಬಿದ್ದಿದ್ದರಿಂದ ಇದ್ದಕ್ಕಿದಂತೆ ಪ್ರವಾಹ ಕೂಡ ಉಂಟಾಗಿದೆ.
ಪ್ರವಾಹಕ್ಕೆ ಕೊಚ್ಚಿಹೋದ ಹಾಸನಾಬಾದ್ ಸೇತುವೆ : ಪಾಕಿಸ್ತಾನದ ಹುಂಜಾ ಕಣಿವೆಯಲ್ಲಿರುವ ಹಾಸನಾಬಾದ್ ಸೇತುವೆಯು ಸಂಪೂರ್ಣವಾಗಿ ಪ್ರವಾಹದ ನೀರಿನಿಂದ ಕೊಚ್ಚಿಹೋಗಿದೆ, ಸಾವಿರಾರು ಸ್ಥಳೀಯರು ಮತ್ತು ಪ್ರವಾಸಿಗರು ಪ್ರವಾಹದಲ್ಲಿ ಸಿಲುಕಿಕೊಂಡರು. ಅದೃಷ್ಟವಶಾತ್ ಜನಸಾಮಾನ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಾಕಿಸ್ತಾನದ ಫೆಡರಲ್ ಸಚಿವ ಹವಾಮಾನ ಬದಲಾವಣೆ ಮತ್ತು ಸೆನೆಟರ್ ಶೆರ್ರಿ ರೆಹಮಾನ್ ಅವರು ಸೇತುವೆ ಕುಸಿಯುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ದೃಶ್ಯಾವಳಿಗಳಲ್ಲಿ ಕಾಂಕ್ರೀಟ್ ಬ್ಲಾಕ್‌ಗಳು ಕುಸಿಯುತ್ತಿರುವುದನ್ನು ನೋಡಬಹುದು ಮತ್ತು ಸೇತುವೆ ಕುಸಿದು ಬೀಳುತ್ತಿದ್ದಂತೆ ಭಾರಿ ಪ್ರಮಾಣದ ನೀರು ಹೊರಬಂದು ಪ್ರವಾಹದಂತ ಪರಿಸ್ಥಿತಿ ಉಂಟಾಯಿತು. ಈ ದೃಶ್ಯಗಳನ್ನು ವೇಗವಾಗಿ ಕರಗುವ ಹಿಮನದಿಗಳ ಪ್ರಭಾವ ಮತ್ತು ಮಳೆ ನೀರಿಗಿಂತ ಹೆಚ್ಚು ಎಂದು ಹೇಳಲಾಗಿದೆ.
ಕೊಚ್ಚಿ ಹೋದ ಜಲವಿದ್ಯುತ್ ಯೋಜನೆಗಳು, ಮನೆಗಳು ; ಗ್ಲೇಶಿಯರ್ ಪ್ರವಾಹದಿಂದಾಗಿ ಎರಡು ಜಲವಿದ್ಯುತ್ ಯೋಜನೆಗಳು ಕೊಚ್ಚಿ ಹೋಗಿವೆ, ಅನೇಕ ಮನೆಗಳು ಮುಳುಗಿವೆ, ಕೃಷಿ ಭೂಮಿ ಮತ್ತು ನೀರು ಸರಬರಾಜು ಮಾರ್ಗಗಳು ಸಹ ನೀರಿನಿಂದ ನಾಶಗೊಂಡಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಾಶವಾದ ಸೇತುವೆಯು ಉತ್ತರ ಪಾಕಿಸ್ತಾನ ಮತ್ತು ಚೀನಾ ನಡುವಿನ ಸಂಪರ್ಕವನ್ನು ಕರಾಕೋರಂ ಹೆದ್ದಾರಿಯಲ್ಲಿ ಕಡಿತಗೊಳಿಸಿದೆ. ಇದು ಪ್ರಪಂಚದಲ್ಲೇ ಅತ್ಯಂತ ಎತ್ತರದ ಸುಸಜ್ಜಿತ ರಸ್ತೆಗಳಲ್ಲಿ ಒಂದಾಗಿತ್ತು ಮತ್ತು ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಸೇತುವೆ ದುರಸ್ಥಿಗೊಂಡಿದ್ದರಿಂದ ಅಲ್ಲಿನ ದಾರಿಯನ್ನು ಸಾಸ್ ವ್ಯಾಲಿ ರಸ್ತೆಗೆ ತಿರುಗಿಸಲಾಗಿದ್ದು, ವಾಹನ ಸವಾರರಿಗೆ ಅನುಕೂಲ ಮಾಡಿಕೊಡಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post