ಮಂಗಳೂರು, ಜನವರಿ 25: ನಗರದ ಪ್ರಸಿದ್ದ ಸಂತ ಅಲೋಶಿಯಸ್ ಕಾಲೇಜಿನ (ಸ್ವಾಯತ್ತ) ವಿಶ್ವವಿದ್ಯಾನಿಲಯದ ಸ್ಥಾನಮಾನದ ಪ್ರಸ್ತಾವನೆಯನ್ನು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ಮತ್ತು ಭಾರತ ಸರಕಾರದ ಶಿಕ್ಷಣ ಸಚಿವಾಲ ಯವು ಅನುಮೋದಿಸಿ ಪರಿಗಣಿತ ವಿಶ್ವವಿದ್ಯಾನಿಲಯದ ಸ್ಥಾನಮಾನವನ್ನು ನೀಡಿದೆ ಎಂದು ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ರೆ. ಫಾ. ಮೆಲ್ವಿನ್ ಜೆ. ಪಿಂಟೋ ತಿಳಿಸಿದ್ದಾರೆ.
ಕಾಲೇಜಿನ ಸಾನ್ನಿಧ್ಯ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಈ ಮಾಹಿತಿ ನೀಡಿದ ಅವರು, ಮಂಗಳೂರಿನ ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜನ್ನು ಪರಿಗಣಿತ ವಿಶ್ವವಿದ್ಯಾನಿಲಯವೆಂದು ಘೋಷಿಸಲ್ಪಟ್ಟಿದೆ.) ಮಂಗಳೂರಿನ ಪ್ರಸಿದ್ದ ಸoತ ಅಲೋಶಿಯಸ್ ಕಾಲೇಜಿನ (ಸ್ವಾಯತ್ತ) ವಿಶ್ವವಿದ್ಯಾನಿಲಯದ ಸ್ಥಾನಮಾನದ ಪ್ರಸ್ತಾವನೆಯನ್ನು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ಮತ್ತು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಅನುಮೋದಿಸಿದೆ ಮತ್ತು ಪರಿಗಣಿತ ವಿಶ್ವವಿದ್ಯಾನಿಲಯದ ಸ್ಥಾನಮಾನವನ್ನು ನೀಡಿದೆ. ಈ ಸ್ಥಾನಮಾನದೊಂದಿಗೆ ಸಂಸ್ಥೆಯು ಇನ್ನು ಮುಂದೆ ಸoತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ ಎಂದು ಕರೆಯಲ್ಪಡುತ್ತದೆ. ಗುಣ ಮಟ್ಟದ ಉನ್ನತ ಶಿಕ್ಷಣವನ್ನು ನೀಡಿ ಶೈಕ್ಷಣಿಕ ಸೇವೆ ಸಲ್ಲಿಸಬೇಕೆಂದು ಬಹುದಿನಗಳಿoದ ಅವಕಾಶದ ನಿರೀಕ್ಷೆಯಲ್ಲಿದ್ದ ಕಾಲೇಜಿನ ಆಡಳಿತ ಮಂಡಳಿಗೆ ಈ ಸ್ಥಾನಮಾನವು ವಿಶೇಷ ಸಂತಸವನ್ನು ತಂದಿದೆ.
ಯುಜಿಸಿ ಮತ್ತು ಶಿಕ್ಷಣ ಸಚಿವಾಲಯವು, ಕಾಲೇಜಿನ ಭೌತಿಕ ಮತ್ತು ಡಿಜಿಟಲ್ ಮೂಲಸೌಕರ್ಯ, ಪಠ್ಯಕ್ರಮ ವಿನ್ಯಾಸ, ಸoಶೋಧನೆ ಮತ್ತು ಆವಿಷ್ಕಾರ, ಪದವಿ ಫಲಿತಾoಶಗಳು, ವಿದ್ಯಾರ್ಥಿಗಳ ಸಾಧನೆಯ ಮಟ್ಟಗಳು, ನೇಮಕಾತಿ, ಸಂಸ್ಥೆಯ ಕನಸು – ಧ್ಯೇಯ ಮತ್ತು ಸಮಾಜದ ಮೇಲೆ ಇವುಗಳು ಬೀರಿದ ಪರಿಣಾಮವನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಈ ಸ್ಥಾನಮಾನವನ್ನು ನೀಡಿದೆ. ಈ ಎಲ್ಲ ಮಾನದoಡಗಳ ಜೊತೆಗೆ ನ್ಯಾಕ್ ಮತ್ತು ನಿರ್ಫ್ ನಂತಹ ರಾಷ್ಟ್ರೀಯ ಮಟ್ಟದ ಸಂಸ್ಥೆಗಳು ನೀಡಿರುವ ಶ್ರೇಯಾoಕಗಳನ್ನು ಪರಿಗಣಿಸಿ ಸoತ ಅಲೋಶಿಯಸ್ ಕಾಲೇಜಿಗೆ ಈ ಮಾನ್ಯತೆಯನ್ನು ನೀಡಿದೆ. ಕಾಲೇಜಿಗೆ ದೊರೆತ ಈ ಮಾನ್ಯತೆಯಿಂದಾಗಿ ಸಂಸ್ಥೆಯು ಜಾಗತಿಕವಾಗಿ ಸ್ಪರ್ಧಾತ್ಮಕ ಪಠ್ಯಕ್ರಮ, ಉನ್ನತ-ಮಟ್ಟದ ಸoಶೋಧನೆ, ಆವಿಷ್ಕಾರಗಳು ಮತ್ತು ಉದ್ಯಮಶೀಲತಾ ಪ್ರತಿನಿಧೀಕರಣ ಮೊದಲಾದುವುಗಳನ್ನು ದಕ್ಷವಾಗಿ ನಡೆಸುವುದಕ್ಕೆ ಮತ್ತು ರಚನಾತ್ಮಕ ವಾತಾವರಣವನ್ನು ನಿರ್ಮಿಸುವುದಕ್ಕೆ ಶಕ್ತವಾಗುವುದು. ಪ್ರಾದೇಶಿಕ, ರಾಷ್ಟ್ರೀಯ ಮತ್ತು ಜಾಗತಿಕ ಪಾಲುದಾರರೊಂದಿಗೆ ಗಟ್ಟಿಯಾದ ಸಹಯೋಗದ ಸಾಧ್ಯತೆಗಳನ್ನು ಹುಡುಕಲು ಇದು ದೊಡ್ಡಮಟ್ಟದಲ್ಲಿ ಅವಕಾಶಗಳನ್ನು ಒದಗಿಸುತ್ತದೆ.
880 ರಲ್ಲಿ ಜೆಸ್ಯೂಟ್ ಪಿತಾಮಹರಿಂದ ಸ್ಥಾಪಿತವಾದ ಸಂತ ಅಲೋಶಿಯಸ್ ಕಾಲೇಜು ಈ ಪ್ರದೇಶದ ಯುವಕರಲ್ಲಿ ಬದ್ಧತೆ, ಸಾಮರ್ಥ್ಯ, ಸಹಾನುಭೂತಿ ಮತ್ತು ಆತ್ಮಸಾಕ್ಷಿಯನ್ನು ಹೊಂದಿರುವ ವ್ಯಕ್ತಿಗಳನ್ನಾಗಿ ರೂಪಿಸಿದೆ. ಜೊತೆಗೆ ಈ ಸಂಸ್ಥೆ ಹಲವಾರು ವಿಶಿಷ್ಟ ಸಾಧನೆಗಳನ್ನು ಹೊಂದಿರುವ ಈ ದೇಶದ ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಸಂಸ್ಥೆಯ ರಾಷ್ಟ್ರೀಯ ಮತ್ತು ಜಾಗತಿಕ ಸ್ಥಾನಮಾನವನ್ನು ಪರಿಗಣಿಸಿ 2007 ರಲ್ಲಿ ಅದಕ್ಕೆ ಸ್ವಾಯತ್ತತೆಯ ಸ್ಥಾನಮಾನ ನೀಡಲಾಯಿತು. ಇದಲ್ಲದೆ, ಸಂಸ್ಥೆಯು ರಾಷ್ಟ್ರೀಯ ಮಟ್ಟದಲ್ಲಿ ನ್ಯಾಕ್ ಮಾನ್ಯತೆಗಳ ಎಲ್ಲಾ ನಾಲ್ಕು ಹಂತಗಳ ಮೌಲ್ಯಮಾಪನ ಕ್ರಮದಲ್ಲಿ ಉನ್ನತ ದರ್ಜೆಯ ಶ್ರೇಯಾಂಕವನ್ನು ನಿರಂತರವಾಗಿ ಪಡೆದುಕೊಂಡಿದೆ. ನಾಲ್ಕನೇ ಹಂತದ ಮೌಲ್ಯಮಾಪನದಲ್ಲಿ ಒಟ್ಟು ಅಂಕ 4 ರಲ್ಲಿ 3.67 ಸಿಜಿಪಿಎ ಯೊಂದಿಗೆ ಎ ಪ್ಲಸ್ ಪ್ಲಸ್ ದರ್ಜೆಯನ್ನು ಪಡೆದಿದೆ. ನಿರ್ಫ್ ಶ್ರೇಯಾಂಕದಲ್ಲಿ ಸತತ 3 ಅವಧಿಗೆ ಉನ್ನತ 100 ಕಾಲೇಜುಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು.
ಸoಸ್ಕೆಯ ಈ ಹೊಸ ಸಾಧನೆಗೆ ಕಾರಣೀಕರ್ತರಾದ ಕಾಲೇಜಿನ ಗೌರವಾನ್ವಿತ ಹಳೆಯ ವಿದ್ಯಾರ್ಥಿಗಳು ಮತ್ತು ಹಿತೈಷಿಗಳ ಸಹಾಯ ಸಹಕಾರವನ್ನು ಸಂಸ್ಥೆ ವಿಶೇಷವಾಗಿ ನೆನಪಿಸಿಕೊಳ್ಳುತ್ತದೆ. ಪರಿಗಣಿತ ವಿಶ್ವವಿದ್ಯಾನಿಲಯದ ಸ್ವರೂಪಕ್ಕೆ ಹೊoದಿಕೊಳ್ಳುತ್ತಾ ಶೈಕ್ಷಣಿಕ ಸ೦ಸ್ಕೆಯ ಸಾಮಾಜಿಕ ಬದ್ಧತೆಯನ್ನು ಗಮನದಲ್ಲಿಟ್ಟುಕೊಂಡು ಸಮಾಜ ಕಟ್ಟುವ ಸದುದ್ವೇಶದ ಕಾರ್ಯಗಳು ಇನ್ನಷ್ಟು ಉತ್ಸಾಹದಿಂದ ಮುಂದುವರಿಸಬೇಕೆಂದು ಸಂಸ್ಥೆ ಭಾವಿಸುತ್ತದೆ.
Discover more from Coastal Times Kannada
Subscribe to get the latest posts sent to your email.
Discussion about this post