• About us
  • Contact us
  • Disclaimer
Tuesday, March 10, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಗಳೂರು: ತವರಿಗೆ ಬಂದಿಳಿದ ಡೆನ್ಸಿ ಮೊಂತೇರೊ, ಜೆರೋಮ್ ಸಿಕ್ವೇರಾ, ಸಿಸ್ಟರ್ ತೆರೆಸಾ ಕ್ರಾಸ್ತಾ

Coastal Times by Coastal Times
August 25, 2021
in ತಾಜಾ ಸುದ್ದಿ, ರಾಜ್ಯ
ಮಂಗಳೂರು: ತವರಿಗೆ ಬಂದಿಳಿದ ಡೆನ್ಸಿ ಮೊಂತೇರೊ, ಜೆರೋಮ್ ಸಿಕ್ವೇರಾ, ಸಿಸ್ಟರ್ ತೆರೆಸಾ ಕ್ರಾಸ್ತಾ
35
VIEWS
WhatsappTelegramShare on FacebookShare on Twitter

ಉಳ್ಳಾಲ: ತಾಲಿಬಾನ್ ಆಕ್ರಮಿತ ಕಾಬುಲ್‌ನಲ್ಲಿ ಒಂದು ವಾರದಿಂದ ಅತಂತ್ರ ಸ್ಥಿತಿಯಲ್ಲಿದ್ದ ಮಂಗಳೂರಿನ ಇಬ್ಬರು ಸುರಕ್ಷಿತವಾಗಿ ಏರ್‌ಲಿಫ್ಟ್ ಆಗಿ ಮಂಗಳವಾರ ನವದೆಹಲಿ ತಲುಪಿದ್ದಾರೆ. ಇದೇ ವೇಳೆ ಅಫ್ಘನ್‌ನಿಂದ ಕತಾರ್‌ಗೆ ಏರ್‌ಲಿಫ್ಟ್ ಆಗಿದ್ದ ಉಳ್ಳಾಲದ ಯುವಕ ಮನೆ ತಲುಪಿದ್ದಾರೆ.

ಬಂಟ್ವಾಳ ಸಿದ್ದಕಟ್ಟೆಯ ಜೆರೋಮ್ ಸಿಕ್ವೇರಾ ಮತ್ತು ಮಂಗಳೂರು ಚಾರಿಟಿಯ ಸಿಸ್ಟರ್ ತೆರೆಸಾ ಕ್ರಾಸ್ತಾ ನವದೆಹಲಿ ತಲುಪಿದ್ದು, ಒಂದೆರಡು ದಿನದಲ್ಲಿ ತವರಿಗೆ ವಾಪಸಾಗಲಿದ್ದಾರೆ. ಉಳ್ಳಾಲದ ಡೆನ್ಸಿ ಮೊಂತೇರೊ ವಾರದ ಹಿಂದೆ ಏರ್‌ಲಿಫ್ಟ್ ಆಗಿ ಕತಾರ್‌ನಲ್ಲಿ ಇದ್ದರು. ಅಲ್ಲಿಂದ ಮಂಗಳವಾರ ತವರು ಸೇರಿದ್ದಾರೆ.

ಜೋಧ್‌ಪುರ್ ಕ್ರೈಸ್ತ ಸಂಸ್ಥೆಯಿಂದ ಬೋಧಕರಾಗಿ ಜೆರೋಮ್ ಸಿಕ್ವೇರಾ ಹಾಗೂ ಮಂಗಳೂರು ಚಾರಿಟಿಯಿಂದ ಇಟಲಿ ಏಜೆನ್ಸಿ ಮೂಲಕ ತೆರೆಸಾ ಕ್ರಾಸ್ತಾ ಅಫ್ಘನ್‌ಗೆ ತೆರಳಿದ್ದರು. ತಾಲಿಬಾನ್ ಆಕ್ರಮಣ ಮೇರೆ ಮೀರಿದಾಗ ಇವರು ವಾರದ ಹಿಂದೆ ಏರ್‌ಲಿಫ್ಟ್‌ಗೆ ಕಾಬುಲ್‌ಗೆ ಆಗಮಿಸಿದ್ದರು. ಆದರೆ ತಾಲಿಬಾನ್ ಅಟ್ಟಹಾಸದಿಂದಾಗಿ ಭಾರತಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಕೊನೆಗೆ ಕಾಬುಲ್ ನಿಲ್ದಾಣ ಸಮೀಪ ಇವರಿಬ್ಬರು ಪ್ರತ್ಯೇಕ ಆಶ್ರಯದಲ್ಲಿದ್ದರು. ಎರಡು ದಿನ ಹಿಂದೆ ಇವರನ್ನು ನ್ಯಾಟೋ ಸೇನೆ ಕಜಕಿಸ್ತಾನಕ್ಕೆ ಏರ್‌ಲಿಫ್ಟ್ ಮಾಡಿತ್ತು. ಅಲ್ಲಿಂದ ಭಾರತೀಯ ವಾಯುಸೇನೆ ಏರ್‌ಲಿಫ್ಟ್ ಮಾಡಿದ್ದು, ಈಗ ನವದೆಹಲಿ ತಲುಪಿದ್ದಾರೆ.

ಫಾ.ಜೆರೋಮ್ ಸಿಕ್ವೇರಾ ಅವರು ಅಫ್ಘನ್‌ನಿಂದ ಜೋಧ್‌ಪುರಕ್ಕೆ, ಸಿಸ್ಟರ್ ತೆರೆಸಾ ಕ್ರಾಸ್ತಾ ಇಟಲಿ ಚಾರಿಟಿಗೆ ತೆರಳುವವರಿದ್ದರು. ಇಟಲಿಗೆ ತೆರಳುವುದಾಗಿ ತೆರೆಸಾ ಕ್ರಾಸ್ತಾ ಅವರು ಭಾರತೀಯ ರಾಯಭಾರ ಕಚೇರಿಗೆ ಮಾಹಿತಿ ನೀಡಿದ್ದರು. ಆದರೆ ಬದಲಾದ ಸನ್ನಿವೇಶದಲ್ಲಿ ಕಾಬುಲ್ ಏರ್‌ಪೋರ್ಟನ್ನೇ ತಾಲಿಬಾನಿಗಳು ವಶಪಡಿಸುವ ಸನ್ನಾಹದಲ್ಲಿದ್ದಾರೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಕಜಕಿಸ್ತಾನಕ್ಕೆ ಏರ್‌ಲಿಫ್ಟ್‌ಗೆ ಅವಕಾಶ ಲಭಿಸಿತ್ತು. ಅದೇ ಅವಕಾಶ ಬಳಸಿಕೊಂಡು ಇವರಿಬ್ಬರು ಕಜಕಿಸ್ತಾನದಿಂದ ಭಾರತಕ್ಕೆ ಆಗಮಿಸಿದ್ದಾರೆ. ಒಂದೆರಡು ದಿನಗಳಲ್ಲಿ ಮಂಗಳೂರಿಗೆ ಆಗಮಿಸಲಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಡ್ರಗ್ಸ್ ಪ್ರಕರಣ: ಕರ್ನಾಟಕದಲ್ಲಿ ಕೂದಲು ಸ್ಯಾಂಪಲ್ ಪರೀಕ್ಷೆ ಇದೇ ಮೊದಲು-ರಾಗಿಣಿ, ಸಂಜನಾ ಡ್ರಗ್ಸ್ ಸೇವನೆ ದೃಢ

Next Post

ಅಫ್ಘಾನಿಸ್ತಾನದಿಂದ ಬಂದ 7 ಮಂದಿ ಪೊಲೀಸ್ ಕಮಿಷನರ್ ಅವರನ್ನು ಭೇಟಿ

Related Posts

ಹೊಸಕೋಟೆ: ಭೀಕರ ಸರಣಿ ಅಪಘಾತಕ್ಕೆ ಕಾರಣವಾಯ್ತು ಪಿಯು ವಿದ್ಯಾರ್ಥಿಗಳ ಜಾಲಿ ರೈಡ್! ಆರು ವಿದ್ಯಾರ್ಥಿಗಳು ಸೇರಿ ಏಳು ಸಾವು,
ರಾಜ್ಯ

ಹೊಸಕೋಟೆ: ಭೀಕರ ಸರಣಿ ಅಪಘಾತಕ್ಕೆ ಕಾರಣವಾಯ್ತು ಪಿಯು ವಿದ್ಯಾರ್ಥಿಗಳ ಜಾಲಿ ರೈಡ್! ಆರು ವಿದ್ಯಾರ್ಥಿಗಳು ಸೇರಿ ಏಳು ಸಾವು,

February 14, 2026
72
ಮಾವನ ಮಗನ ಜೊತೆ ನಿಶ್ಚಿತಾರ್ಥ, ಮನೆಯ ಚಾಲಕನ ಜೊತೆ ಓಡಿಹೋದ ಶ್ರೀಮಂತ ಉದ್ಯಮಿಯ ಮಗಳು: ಚೆಲುವಿನ ಚಿತ್ತಾರ ಸಿನಿಮಾ ರೀತಿಯ ನೈಜ ಘಟನೆ
ರಾಜ್ಯ

ಮಾವನ ಮಗನ ಜೊತೆ ನಿಶ್ಚಿತಾರ್ಥ, ಮನೆಯ ಚಾಲಕನ ಜೊತೆ ಓಡಿಹೋದ ಶ್ರೀಮಂತ ಉದ್ಯಮಿಯ ಮಗಳು: ಚೆಲುವಿನ ಚಿತ್ತಾರ ಸಿನಿಮಾ ರೀತಿಯ ನೈಜ ಘಟನೆ

February 2, 2026
132
Next Post
ಅಫ್ಘಾನಿಸ್ತಾನದಿಂದ ಬಂದ 7 ಮಂದಿ ಪೊಲೀಸ್ ಕಮಿಷನರ್ ಅವರನ್ನು ಭೇಟಿ

ಅಫ್ಘಾನಿಸ್ತಾನದಿಂದ ಬಂದ 7 ಮಂದಿ ಪೊಲೀಸ್ ಕಮಿಷನರ್ ಅವರನ್ನು ಭೇಟಿ

Discussion about this post

Recent News

ಬಂಟ್ವಾಳದ ಬಸ್ಸಿನಲ್ಲಿದ್ದಾಗ ಬ್ಯಾಗಿನಿಂದ 180 ಗ್ರಾಂ ಚಿನ್ನಾಭರಣ ಕಳವು ; ಆರೋಪಿ ಸೆರೆ, 20 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ

ಬಂಟ್ವಾಳದ ಬಸ್ಸಿನಲ್ಲಿದ್ದಾಗ ಬ್ಯಾಗಿನಿಂದ 180 ಗ್ರಾಂ ಚಿನ್ನಾಭರಣ ಕಳವು ; ಆರೋಪಿ ಸೆರೆ, 20 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ

March 10, 2026
37
ನ್ಯೂಜಿಲೆಂಡ್​ ಮಣಿಸಿ ಮೂರನೇ ಬಾರಿಗೆ ಟಿ20 ವಿಶ್ವ ಚಾಂಪಿಯನ್​ ಆದ ಭಾರತ!

ನ್ಯೂಜಿಲೆಂಡ್​ ಮಣಿಸಿ ಮೂರನೇ ಬಾರಿಗೆ ಟಿ20 ವಿಶ್ವ ಚಾಂಪಿಯನ್​ ಆದ ಭಾರತ!

March 9, 2026
23
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಬಂಟ್ವಾಳದ ಬಸ್ಸಿನಲ್ಲಿದ್ದಾಗ ಬ್ಯಾಗಿನಿಂದ 180 ಗ್ರಾಂ ಚಿನ್ನಾಭರಣ ಕಳವು ; ಆರೋಪಿ ಸೆರೆ, 20 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ

ಬಂಟ್ವಾಳದ ಬಸ್ಸಿನಲ್ಲಿದ್ದಾಗ ಬ್ಯಾಗಿನಿಂದ 180 ಗ್ರಾಂ ಚಿನ್ನಾಭರಣ ಕಳವು ; ಆರೋಪಿ ಸೆರೆ, 20 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ

March 10, 2026
ನ್ಯೂಜಿಲೆಂಡ್​ ಮಣಿಸಿ ಮೂರನೇ ಬಾರಿಗೆ ಟಿ20 ವಿಶ್ವ ಚಾಂಪಿಯನ್​ ಆದ ಭಾರತ!

ನ್ಯೂಜಿಲೆಂಡ್​ ಮಣಿಸಿ ಮೂರನೇ ಬಾರಿಗೆ ಟಿ20 ವಿಶ್ವ ಚಾಂಪಿಯನ್​ ಆದ ಭಾರತ!

March 9, 2026
ಮಂಗಳೂರು ರಿಫೈನರಿಯ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ ವದಂತಿ ತಳ್ಳಿಹಾಕಿದ ಎಂಆರ್‌ಪಿಎಲ್

ಮಂಗಳೂರು ರಿಫೈನರಿಯ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ ವದಂತಿ ತಳ್ಳಿಹಾಕಿದ ಎಂಆರ್‌ಪಿಎಲ್

March 8, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d