ಮಂಗಳೂರು: ಅಫ್ಘಾನಿಸ್ತಾನದಿಂದ ತವರೂರಿಗೆ ಆಗಮಿಸಿದವರು ಬುಧವಾರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರನ್ನು ಭೇಟಿ ಮಾಡಿದರು.
ಮೂಡುಬಿದಿರೆಯ ಜಗದೀಶ್ ಪೂಜಾರಿ, ಬಜ್ಪೆಯ ದಿನೇಶ್ ರೈ, ಡೆಸ್ಮಾಂಡ್ ಡೆವಿಡ್ ಡಿಸೋಜ, ಶ್ರವಣ್ ಅಂಚನ್, ಪ್ರಸಾದ್ ಆನಂದ್, ಡೆನ್ಝಿಲ್ ಮೊಂತೆರೊ, ಮೆಲ್ವಿನ್ ಮೊಂತೆರೊ ಅವರು ಪೊಲೀಸ್ ಆಯುಕ್ತರ ಜತೆ ಅಫ್ಘಾನಿಸ್ತಾನದ ಕರಾಳ ಚಿತ್ರಣವನ್ನು ತೆರೆದಿಟ್ಟರು.
ಜಗದೀಶ್ ಪೂಜಾರಿ, ಮೆಲ್ವಿಲ್ ಮೊಂತೆರೋ, ಡೆನ್ಸಿಲ್ ಮೊಂತೆರೋ, ದಿನೇಶ್ ರೈ, ಡೆಸ್ಮಂಡ್ ಡೇವಿಡ್ ಡಿಸೋಜಾ ಹಾಗೂ ಶ್ರವಣ್ ಅಂಚನ್, ಜಗದೀಶ್ ಪೂಜಾರಿ ಅವರನ್ನು ಅಫ್ಗಾನಿಸ್ತಾನದಿಂದ ವಿಮಾನದಲ್ಲಿ ಸುರಕ್ಷಿತವಾಗಿ ಕರೆತರಲಾಗಿತ್ತು.
ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್, “ನ್ಯಾಟೋ ಮಿಲಿಟರಿ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಏಳು ಮಂದಿಯನ್ನು ಕಾಬೂಲ್‌ನಿಂದ ಆ.17ರಂದು ದೆಹಲಿಗೆ ಕರೆತಂದು ನಂತರ ಆ.23 ಹಾಗೂ 24ರಂದು ಎಲ್ಲರೂ ಮಂಗಳೂರಿಗೆ ಆಗಮಿಸಿದ್ದಾರೆ. ಇವರೆಲ್ಲರೂ ಮಿಲಿಟರಿ ಹಾಗೂ ರಕ್ಷಣಾ ನೆಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾರಣ ಅವರಿಗೆ ಯಾವುದೇ ಮಾಹಿತಿ ಇರಲಿಲ್ಲ. ಕೇಂದ್ರ ಸರ್ಕಾರವು ಅಫ್ಗಾನಿಸ್ತಾನದಲ್ಲಿರುವ ಎಲ್ಲಾ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಕೆಲಸ ಮಾಡಿದ್ದು, ಈ ಕುರಿತು ಎಲ್ಲರಿಗೂ ವಿಶ್ವಾಸವಿದೆ” ಎಂದಿದ್ದಾರೆ.