ಉಳ್ಳಾಲ: ತಾಲಿಬಾನ್ ಆಕ್ರಮಿತ ಕಾಬುಲ್‌ನಲ್ಲಿ ಒಂದು ವಾರದಿಂದ ಅತಂತ್ರ ಸ್ಥಿತಿಯಲ್ಲಿದ್ದ ಮಂಗಳೂರಿನ ಇಬ್ಬರು ಸುರಕ್ಷಿತವಾಗಿ ಏರ್‌ಲಿಫ್ಟ್ ಆಗಿ ಮಂಗಳವಾರ ನವದೆಹಲಿ ತಲುಪಿದ್ದಾರೆ. ಇದೇ ವೇಳೆ ಅಫ್ಘನ್‌ನಿಂದ ಕತಾರ್‌ಗೆ ಏರ್‌ಲಿಫ್ಟ್ ಆಗಿದ್ದ ಉಳ್ಳಾಲದ ಯುವಕ ಮನೆ ತಲುಪಿದ್ದಾರೆ.
ಬಂಟ್ವಾಳ ಸಿದ್ದಕಟ್ಟೆಯ ಜೆರೋಮ್ ಸಿಕ್ವೇರಾ ಮತ್ತು ಮಂಗಳೂರು ಚಾರಿಟಿಯ ಸಿಸ್ಟರ್ ತೆರೆಸಾ ಕ್ರಾಸ್ತಾ ನವದೆಹಲಿ ತಲುಪಿದ್ದು, ಒಂದೆರಡು ದಿನದಲ್ಲಿ ತವರಿಗೆ ವಾಪಸಾಗಲಿದ್ದಾರೆ. ಉಳ್ಳಾಲದ ಡೆನ್ಸಿ ಮೊಂತೇರೊ ವಾರದ ಹಿಂದೆ ಏರ್‌ಲಿಫ್ಟ್ ಆಗಿ ಕತಾರ್‌ನಲ್ಲಿ ಇದ್ದರು. ಅಲ್ಲಿಂದ ಮಂಗಳವಾರ ತವರು ಸೇರಿದ್ದಾರೆ.
ಜೋಧ್‌ಪುರ್ ಕ್ರೈಸ್ತ ಸಂಸ್ಥೆಯಿಂದ ಬೋಧಕರಾಗಿ ಜೆರೋಮ್ ಸಿಕ್ವೇರಾ ಹಾಗೂ ಮಂಗಳೂರು ಚಾರಿಟಿಯಿಂದ ಇಟಲಿ ಏಜೆನ್ಸಿ ಮೂಲಕ ತೆರೆಸಾ ಕ್ರಾಸ್ತಾ ಅಫ್ಘನ್‌ಗೆ ತೆರಳಿದ್ದರು. ತಾಲಿಬಾನ್ ಆಕ್ರಮಣ ಮೇರೆ ಮೀರಿದಾಗ ಇವರು ವಾರದ ಹಿಂದೆ ಏರ್‌ಲಿಫ್ಟ್‌ಗೆ ಕಾಬುಲ್‌ಗೆ ಆಗಮಿಸಿದ್ದರು. ಆದರೆ ತಾಲಿಬಾನ್ ಅಟ್ಟಹಾಸದಿಂದಾಗಿ ಭಾರತಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಕೊನೆಗೆ ಕಾಬುಲ್ ನಿಲ್ದಾಣ ಸಮೀಪ ಇವರಿಬ್ಬರು ಪ್ರತ್ಯೇಕ ಆಶ್ರಯದಲ್ಲಿದ್ದರು. ಎರಡು ದಿನ ಹಿಂದೆ ಇವರನ್ನು ನ್ಯಾಟೋ ಸೇನೆ ಕಜಕಿಸ್ತಾನಕ್ಕೆ ಏರ್‌ಲಿಫ್ಟ್ ಮಾಡಿತ್ತು. ಅಲ್ಲಿಂದ ಭಾರತೀಯ ವಾಯುಸೇನೆ ಏರ್‌ಲಿಫ್ಟ್ ಮಾಡಿದ್ದು, ಈಗ ನವದೆಹಲಿ ತಲುಪಿದ್ದಾರೆ.
ಫಾ.ಜೆರೋಮ್ ಸಿಕ್ವೇರಾ ಅವರು ಅಫ್ಘನ್‌ನಿಂದ ಜೋಧ್‌ಪುರಕ್ಕೆ, ಸಿಸ್ಟರ್ ತೆರೆಸಾ ಕ್ರಾಸ್ತಾ ಇಟಲಿ ಚಾರಿಟಿಗೆ ತೆರಳುವವರಿದ್ದರು. ಇಟಲಿಗೆ ತೆರಳುವುದಾಗಿ ತೆರೆಸಾ ಕ್ರಾಸ್ತಾ ಅವರು ಭಾರತೀಯ ರಾಯಭಾರ ಕಚೇರಿಗೆ ಮಾಹಿತಿ ನೀಡಿದ್ದರು. ಆದರೆ ಬದಲಾದ ಸನ್ನಿವೇಶದಲ್ಲಿ ಕಾಬುಲ್ ಏರ್‌ಪೋರ್ಟನ್ನೇ ತಾಲಿಬಾನಿಗಳು ವಶಪಡಿಸುವ ಸನ್ನಾಹದಲ್ಲಿದ್ದಾರೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಕಜಕಿಸ್ತಾನಕ್ಕೆ ಏರ್‌ಲಿಫ್ಟ್‌ಗೆ ಅವಕಾಶ ಲಭಿಸಿತ್ತು. ಅದೇ ಅವಕಾಶ ಬಳಸಿಕೊಂಡು ಇವರಿಬ್ಬರು ಕಜಕಿಸ್ತಾನದಿಂದ ಭಾರತಕ್ಕೆ ಆಗಮಿಸಿದ್ದಾರೆ. ಒಂದೆರಡು ದಿನಗಳಲ್ಲಿ ಮಂಗಳೂರಿಗೆ ಆಗಮಿಸಲಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post