• About us
  • Contact us
  • Disclaimer
Saturday, August 15, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಬಿಜೆಪಿಯಿಂದ ಬಸನಗೌಡ ಪಾಟೀಲ್‌ ಯತ್ನಾಳ್‌ ಆರು ವರ್ಷಗಳ ಕಾಲ ಉಚ್ಛಾಟನೆ

Coastal Times by Coastal Times
March 26, 2025
in ರಾಜ್ಯ
ಬಿಜೆಪಿಯಿಂದ ಬಸನಗೌಡ ಪಾಟೀಲ್‌ ಯತ್ನಾಳ್‌ ಆರು ವರ್ಷಗಳ ಕಾಲ ಉಚ್ಛಾಟನೆ
87
VIEWS
WhatsappTelegramShare on FacebookShare on Twitter

ನವದೆಹಲಿ, ಮಾ​ 26: ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್​ ಅವರನ್ನು ಉಚ್ಚಾಟನೆ ಮಾಡಲಾಗಿದೆ. ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್ ಅವರನ್ನು 6 ವರ್ಷಗಳ ಕಾಲ ಬಿ ಉಚ್ಚಾಟಿಸಿ ಬಿಜೆಪಿ ಕೇಂದ್ರ ಶಿಸ್ತು ಸಮಿಯಿಂದ ಆದೇಶ ಹೊರಡಿಸಿದೆ. ಬಿಜೆಪಿ ಶಿಸ್ತು ಸಮಿತಿ ಎರಡು ಬಾರಿ ಶೋಕಾಸ್​ ನೋಟಿಸ್‌ ನೀಡಿದ್ದರೂ ಪದೇ ಪದೇ ಪಕ್ಷದ ವಿರೋಧಿ ಚಟುವಟಿಕೆ, ಪಕ್ಷದ ಶಿಸ್ತು ಉಲ್ಲಂಘನೆ ಮಾಡುತ್ತಿದ್ದರು. ಕೊನೆಗೆ ಫೆಬ್ರವರಿ 10 ರಂದು ಶೋಕಾಸ್‌ ನೋಟಿಸ್‌ಗೆ ಯತ್ನಾಳ್‌ ಉತ್ತರ ನೀಡಿದ್ದರು. ಯತ್ನಾಳ್ ಉತ್ತರ, ಸ್ಪಷ್ಟನೆ ಒಪ್ಪದ ಕೇಂದ್ರ ಶಿಸ್ತು ಸಮಿತಿ ಇಂದು(ಮಾರ್ಚ್ 26)  ಈ ನಿರ್ಧಾರ ಕೈಗೊಂಡಿದೆ. ಈ ಮೂಲಕ ರಾಜ್ಯ ಬಿಜೆಪಿಯಲ್ಲಿನ ಬಣಬಡಿದಾಟಕ್ಕೆ ಕೊನೆಗೂ ಹೈಕಮಾಂಡ್​ ಬ್ರೇಕ್ ಹಾಕಿದೆ. ಅಲ್ಲದೇ ಇತರೆ ರೆಬೆಲ್​ ನಾಯಕರಿಗೂ ಪರೋಕ್ಷ ಎಚ್ಚರಿಕೆ ಸಂದೇಶ ರವಾನಿಸಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ವಿರುದಧ ಬಹಿರಂಗವಾಗಿಯೇ ಆರೋಪಗಳನ್ನು ಮಾಡಿಕೊಂಡು ಬರುತ್ತಿದ್ದರು. ಅಲ್ಲದೇ ತಮ್ಮದೇ ಒಂದು ತಂಡ ಕಟ್ಟಿಕೊಂಡು ಪ್ರತ್ಯೇಕ ಸಭೆ ಮಾಡುತ್ತಿದ್ದರು. ಈ ಸಂಬಂಧ ಕೇಂದ್ರೀಯ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿತ್ತು. ಆದರೂ ಯತ್ನಾಳ್​ ಸೈಲೆಂಟ್​ ಇದರೇ ತಮ್ಮ ಅಬ್ಬರ ಮುಂದುವರಿಸಿದ್ದರು. ಹೀಗಾಗಿ ಇತ್ತೀಚೆಗೆಷ್ಟೇ ಮತ್ತೊಂದು ಶೋಕಾಸ್ ನೀಡಲಾಗಿತ್ತು. ಆದದರೂ ಸಹ ಅವರು ತಮ್ಮ ಮಾತಿನ ಸಮರ ಮುಂದುವರಿಸಿದ್ದರು. ಹೀಗಾಗಿ ಅಂತಿಮವಾಗಿ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟಿಸಿದೆ.

ಪಕ್ಷದ ಕೇಂದ್ರ ಶಿಸ್ತು ಸಮಿತಿಯು 2025 ಫೆಬ್ರವರಿ 10 ರಂದು ನೀಡಿದ್ದ ಶೋಕಾಸ್ ನೋಟಿಸ್‌ಗೆ ನಿಮ್ಮ ಪ್ರತಿಕ್ರಿಯೆಯನ್ನು ಪರಿಗಣಿಸಿದೆ ಮತ್ತು ಹಿಂದಿನ ಶೋಕಾಸ್ ನೋಟಿಸ್‌ಗಳಿಗೆ ಪ್ರತಿಕ್ರಿಯೆಯಾಗಿ ಉತ್ತಮ ನಡವಳಿಕೆ ಮತ್ತು ನಡವಳಿಕೆಯ ಭರವಸೆಗಳನ್ನು ನೀಡಿದ್ದರೂ ಸಹ, ನೀವು ಪಕ್ಷದ ಶಿಸ್ತಿನ ಪದೇ ಪದೇ ಉಲ್ಲಂಘಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದೆ. ಪಕ್ಷದಿಂದ ಉಚ್ಚಾಟನೆ ಮಾಡುತ್ತಿರುವುದಾಗಿ ಶಿಸ್ತು ಸಮಿತಿಯ ಸದಸ್ಯ ಕಾರ್ಯದರ್ಶಿ ಓಂ ಪಾಠಕ್​, ಪಕ್ಷ ಕೈಗೊಂಡಿರುವ ನಿರ್ಧಾರವನ್ನು ಅಧಿಕೃತವಾಗಿ ಯತ್ನಾಳ್​ ಅವರಿಗೆ ಪತ್ರದಲ್ಲಿ ತಿಳಿಸಿದ್ದಾರೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ ಮಾಡಲಾಗಿದ್ದು, ಪಕ್ಷದ ಇತರ ಜವಾಬ್ದಾರಿಗಳಿಂದಲೂ ಅವರನ್ನು ತೆಗೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು: ಬಡ ಜನರ ಬ್ಯಾಂಕ್​ ಖಾತೆ ಸೈಬರ್ ವಂಚಕರಿಗೆ ನೀಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Next Post

ತನ್ನ ಪ್ರೇಯಸಿಯಾದ ಕಿರುತೆರೆ ನಟಿಯನ್ನು ಕೊಂದು ಶವವನ್ನು ಸೆಪ್ಟಿಕ್ ಟ್ಯಾಂಕ್‌ನಲ್ಲಿ ಮುಚ್ಚಿಟ್ಟ ಅರ್ಚಕನಿಗೆ ಜೀವಾವಧಿ ಶಿಕ್ಷೆ

Related Posts

ರಾಜ್ಯಾದ್ಯಂತ ತಂಬಾಕು, ಗುಟ್ಕಾ ಹಾಗೂ ಪಾನ್ ಮಸಾಲ ಒಂದು ವರ್ಷ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ
ಆರೋಗ್ಯ

ರಾಜ್ಯಾದ್ಯಂತ ತಂಬಾಕು, ಗುಟ್ಕಾ ಹಾಗೂ ಪಾನ್ ಮಸಾಲ ಒಂದು ವರ್ಷ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ

August 12, 2026
38
ಎಸ್ಐಆರ್ ಪಟ್ಟಿಯಿಂದ 1.11 ಕೋಟಿಗೂ ಅಧಿಕ ಮತದಾರರ ಹೆಸರು ಡಿಲೀಟ್ ಸಾಧ್ಯತೆ: ಗಣತಿ ನಮೂನೆ ಸಲ್ಲಿಕೆಗೆ ಆಗಸ್ಟ್​ 8 ಕೊನೆಯ ದಿನ
ರಾಜ್ಯ

ಎಸ್ಐಆರ್ ಪಟ್ಟಿಯಿಂದ 1.11 ಕೋಟಿಗೂ ಅಧಿಕ ಮತದಾರರ ಹೆಸರು ಡಿಲೀಟ್ ಸಾಧ್ಯತೆ: ಗಣತಿ ನಮೂನೆ ಸಲ್ಲಿಕೆಗೆ ಆಗಸ್ಟ್​ 8 ಕೊನೆಯ ದಿನ

August 6, 2026
14
Next Post
ತನ್ನ ಪ್ರೇಯಸಿಯಾದ ಕಿರುತೆರೆ ನಟಿಯನ್ನು ಕೊಂದು ಶವವನ್ನು ಸೆಪ್ಟಿಕ್ ಟ್ಯಾಂಕ್‌ನಲ್ಲಿ ಮುಚ್ಚಿಟ್ಟ  ಅರ್ಚಕನಿಗೆ ಜೀವಾವಧಿ ಶಿಕ್ಷೆ

ತನ್ನ ಪ್ರೇಯಸಿಯಾದ ಕಿರುತೆರೆ ನಟಿಯನ್ನು ಕೊಂದು ಶವವನ್ನು ಸೆಪ್ಟಿಕ್ ಟ್ಯಾಂಕ್‌ನಲ್ಲಿ ಮುಚ್ಚಿಟ್ಟ ಅರ್ಚಕನಿಗೆ ಜೀವಾವಧಿ ಶಿಕ್ಷೆ

Discussion about this post

Recent News

ಆಕಸ್ಮಿಕವಾಗಿ ಯಂತ್ರದಲ್ಲಿ ಸಿಲುಕಿದ ಕೈಬೆರಳು, ಬಿಸಿಯೂಟ ತಯಾರಿಸುವ ಮಹಿಳೆಯ ಪ್ರಾಣ ಉಳಿಸಿದ ಶಾಲಾ ಬಾಲಕ

ಆಕಸ್ಮಿಕವಾಗಿ ಯಂತ್ರದಲ್ಲಿ ಸಿಲುಕಿದ ಕೈಬೆರಳು, ಬಿಸಿಯೂಟ ತಯಾರಿಸುವ ಮಹಿಳೆಯ ಪ್ರಾಣ ಉಳಿಸಿದ ಶಾಲಾ ಬಾಲಕ

August 14, 2026
35
ರಾಜ್ಯದಲ್ಲಿ ತಂಬಾಕು, ನಿಕೋಟಿನ್ ಉತ್ಪನ್ನಗಳ ನಿಷೇಧ ಜಾರಿಯಲ್ಲಿ ಅಡಿಕೆ ಬೆಳೆಗಾರರು ಬಲಿಪಶುವಾಗದಂತೆ ಸ್ಪಷ್ಟ ಚೌಕಟ್ಟು ರಚಿಸುವಂತೆ ಕ್ಯಾಂಪ್ಕೋ ಆಗ್ರಹ

ರಾಜ್ಯದಲ್ಲಿ ತಂಬಾಕು, ನಿಕೋಟಿನ್ ಉತ್ಪನ್ನಗಳ ನಿಷೇಧ ಜಾರಿಯಲ್ಲಿ ಅಡಿಕೆ ಬೆಳೆಗಾರರು ಬಲಿಪಶುವಾಗದಂತೆ ಸ್ಪಷ್ಟ ಚೌಕಟ್ಟು ರಚಿಸುವಂತೆ ಕ್ಯಾಂಪ್ಕೋ ಆಗ್ರಹ

August 13, 2026
14
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಆಕಸ್ಮಿಕವಾಗಿ ಯಂತ್ರದಲ್ಲಿ ಸಿಲುಕಿದ ಕೈಬೆರಳು, ಬಿಸಿಯೂಟ ತಯಾರಿಸುವ ಮಹಿಳೆಯ ಪ್ರಾಣ ಉಳಿಸಿದ ಶಾಲಾ ಬಾಲಕ

ಆಕಸ್ಮಿಕವಾಗಿ ಯಂತ್ರದಲ್ಲಿ ಸಿಲುಕಿದ ಕೈಬೆರಳು, ಬಿಸಿಯೂಟ ತಯಾರಿಸುವ ಮಹಿಳೆಯ ಪ್ರಾಣ ಉಳಿಸಿದ ಶಾಲಾ ಬಾಲಕ

August 14, 2026
ರಾಜ್ಯದಲ್ಲಿ ತಂಬಾಕು, ನಿಕೋಟಿನ್ ಉತ್ಪನ್ನಗಳ ನಿಷೇಧ ಜಾರಿಯಲ್ಲಿ ಅಡಿಕೆ ಬೆಳೆಗಾರರು ಬಲಿಪಶುವಾಗದಂತೆ ಸ್ಪಷ್ಟ ಚೌಕಟ್ಟು ರಚಿಸುವಂತೆ ಕ್ಯಾಂಪ್ಕೋ ಆಗ್ರಹ

ರಾಜ್ಯದಲ್ಲಿ ತಂಬಾಕು, ನಿಕೋಟಿನ್ ಉತ್ಪನ್ನಗಳ ನಿಷೇಧ ಜಾರಿಯಲ್ಲಿ ಅಡಿಕೆ ಬೆಳೆಗಾರರು ಬಲಿಪಶುವಾಗದಂತೆ ಸ್ಪಷ್ಟ ಚೌಕಟ್ಟು ರಚಿಸುವಂತೆ ಕ್ಯಾಂಪ್ಕೋ ಆಗ್ರಹ

August 13, 2026
ರಾಜ್ಯಾದ್ಯಂತ ತಂಬಾಕು, ಗುಟ್ಕಾ ಹಾಗೂ ಪಾನ್ ಮಸಾಲ ಒಂದು ವರ್ಷ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ

ರಾಜ್ಯಾದ್ಯಂತ ತಂಬಾಕು, ಗುಟ್ಕಾ ಹಾಗೂ ಪಾನ್ ಮಸಾಲ ಒಂದು ವರ್ಷ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ

August 12, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d