ಉಳ್ಳಾಲ, ಡಿ.26 : ಕೊಣಾಜೆ ಪೊಲೀಸ್ ಠಾಣೆಯ ಪಿಎಸ್ಐ ಶರಣಪ್ಪ ಭಂಡಾರಿ ಅವರು ಡ್ರಗ್ ಸಾಗಾಟದ ವಿರುದ್ಧ ಸಮರ ಸಾರಿದ್ದು ಇಂದು ಬೆಳಗ್ಗೆ ಬೆಂಗಳೂರಿನಿಂದ ಕೇರಳಕ್ಕೆ ಸಾಗಿಸುತ್ತಿದ್ದ 3 ಲಕ್ಷ ರೂಪಾಯಿ ಮೌಲ್ಯದ ಗಾಂಜಾ ಮತ್ತು ಕೇರಳ ಮೂಲದ ನಾಲ್ಕು ಡ್ರಗ್ ಪೆಡ್ಲರ್ ಗಳನ್ನ ಬಂಧಿಸಿದ್ದಾರೆ.
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಬಂದ್ಯೋಡು ನಿವಾಸಿ ಮಹಮ್ಮದ್ ನೌಫಾಲ್(24), ಮಲಪ್ಪುರಂ ಜಿಲ್ಲೆಯ ಪೊನ್ನಾನಿ ನಿವಾಸಿ ಜಂಶೀರ್(24), ಕಾಸರಗೋಡು ಜಿಲ್ಲೆಯ ಮಂಗಲ್ಪಾಡಿ ನಿವಾಸಿ ಮಹಮ್ಮದ್ ಬಾತಿಷ್ (37), ಕಾಸರಗೋಡು ಜಿಲ್ಲೆಯ ಮುಟ್ಟತೇಡಿ ನಿವಾಸಿ ಮಹಮ್ಮದ್ ಅಶ್ರಫ್(42) ಬಂಧಿತ ಡ್ರಗ್ ಪೆಡ್ಲರ್ ಗಳು.

ದಿನಾಂಕ 26.12.2022 ರಂದು ಬೆಳಿಗ್ಗೆ 06-00 ಗಂಟೆಗೆ ಕೊಣಾಜೆ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಶರಣಪ್ಪ ಭಂಡಾರಿರವರು ವಿಶೇಷ ರೌಂಡ್, ಕರ್ತವ್ಯದಲಿರುವ ಸಮಯ ಬೆಂಗಳೂರಿನಿಂದ ಉಪ್ಪಿನಂಗಡಿ, ಮೇಲಾ, ಬೋಳಿಯಾರು ಮಾರ್ಗವಾಗಿ ಕೇರಳ ಕಡೆಗೆ KL14-T-2133 ನೇ ಮಾರುತಿ ಸುಜುಕಿ ಆಲ್ಟೋ 800 ಕಾರಿನಲಿ ಮಾದಕ ವಸ್ತು ಮತ್ತು ಮಾದಕ ದ್ರವವನ್ನು ಸಾಗಾಟ ಮಾಡುತ್ತಿದ್ದಾರೆ ಎಂಬುದಾಗಿ ದೊರೆತ ಖಚಿತ ಮಾಹಿತಿಯಂತೆ ಬೆಳಿಗ್ಗೆ ಮೆಲಾರ್ ಕಡೆಯಿಂದ ಬರುತ್ತಿದ್ದ ಬಿಳಿ ಬಣ್ಣದ ಆಲ್ಟೋ ಕಾರನ್ನ ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಆಲ್ಟೋ ಕಾರಲ್ಲಿ 3,19,000 ಮೌಲ್ಯದ 32.195 ಕೆ.ಜಿ ಗಾಂಜಾ ಸಾಗಾಟ ನಡೆಸುತ್ತಿರುವುದು ಕಂಡುಬಂದಿದೆ. ನಿಷೇಧಿತ ಗಾಂಜಾ, ಕಾರು ಮತ್ತು ನಾಲ್ವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಲಾದ 4 ಮೊಬೈಲ್ ಫೋನ್ ಹಾಗೂ ಗಾಂಜಾ ತುಂಬಿಕೊಂಡು ಬರಲು ಬಳಸಿದ ಎರಡು ಟ್ರಾವೆಲ್ ಬಾಗ್ ಮಾರುತಿ ಸಂಜುಕಿ ಆಲ್ಟೋ 800 ಸ್ವಾಧೀನಪಡಿಸಿಕೊಂಡಿದು, ಸ್ವಾಧೀನಪಡಿಸಿದ ಎಲ್ಲಾ ಸೊತ್ತುಗಳ ಒಟು ಅಂದಾಜು ಮೌಲ: ರೂ. 6,32,000/- ಆಗಬಹುದು,
ಕಾರ್ಯಾಚರಣೆಯಲ್ಲಿ ಪಿ.ಎಸ್.ಐ ರವರಾದ ಶರಣಪ್ಪ ಭಂಡಾರಿ ಸಿಬ್ಬಂದಿದಾರರಾದ ಶೈಲೇಂದ್ರ, ಮಹಮ್ಮದ್ ಶರೀಫ್, ಮಹೇಶ್, ಪುರುಷೋತ್ತಮ ದೀಪಕ್, ಆಶಿನ್ಸ್, ಸುರೇಶ್, ಅಂಬರೀಶ್ ಭರಮ ಬಡಿಗೇರ್, ಶ್ರೀಮತಿ ರೇಷ್ಮಾ, ಶ್ರೀಮತಿ ಸುನೀತಾ ಭಾಗವಹಿಸಿದ್ದರು. ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ .
Discover more from Coastal Times Kannada
Subscribe to get the latest posts sent to your email.








Discussion about this post