ಹೆಜಮಾಡಿ: ಟೋಲ್ ಗೇಟ್ ಬಳಿ ಈಚರ್ ವಾಹನವೊಂದು ಬುಧವಾರ ರಾತ್ರಿ ಹೊತ್ತಿ ಉರಿದ ಘಟನೆ ನಡೆದಿದೆ.
ವಾಹನವನ್ನು ನಿಲ್ಲಿಸಿ ಅಡುಗೆ ತಯಾರಿ ಮಾಡುತ್ತಿರುವ ವೇಳೆ ಆಕಸ್ಮಿಕವಾಗಿ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಘಟನೆಗೆ ಕಾರಣ ಎಂದು ತಿಳಿದುಬಂದಿದೆ.

ಈಚರ್ ಎಂಸಿಎಫ್ ನಿಂದ ಭದ್ರಾವತಿಗೆ ತೆರಳುತ್ತಿತ್ತು. ವಾಹನದಿಂದ ಚಾಲಕ ಹಾರಿದ್ದು, ಸಣ್ಣಪುಟ್ಟ ಗಾಯಗಳಿಂದ ಪಾರಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ