• About us
  • Contact us
  • Disclaimer
Tuesday, August 11, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

‘ಕರ್ನಾಟಕ ಯುವ ರತ್ನ ಗೌರವ’ ಕ್ಕೆ ಪತ್ರಕರ್ತ, ಕವಿ, ಲೇಖಕ ಶಂಶೀರ್ ಬುಡೋಳಿ ಆಯ್ಕೆ

Coastal Times by Coastal Times
February 27, 2023
in ಕರಾವಳಿ
‘ಕರ್ನಾಟಕ ಯುವ ರತ್ನ ಗೌರವ’ ಕ್ಕೆ ಪತ್ರಕರ್ತ, ಕವಿ, ಲೇಖಕ ಶಂಶೀರ್ ಬುಡೋಳಿ ಆಯ್ಕೆ
36
VIEWS
WhatsappTelegramShare on FacebookShare on Twitter

ಮಂಗಳೂರು: ಮಾರ್ಚ್ 5ರಂದು ನಡೆಯುವ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಪ್ರದಾನ 13 ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ-2023 ರ ‘ಕರ್ನಾಟಕ ಯುವ ರತ್ನ ಗೌರವ’ ಕ್ಕೆ ಪತ್ರಕರ್ತ, ಕವಿ, ಲೇಖಕ, ನಿರೂಪಕ ಶಂಶೀರ್ ಬುಡೋಳಿ ಆಯ್ಕೆಯಾಗಿದ್ದಾರೆ ಎಂದು ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನಸ ಮಿತಿಯ ರಾಜ್ಯಾಧ್ಯಕ್ಷರಾದ ಡಾ.ಶೇಖರ ಅಜೆಕಾರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾರ್ಚ್ 5 ರಂದು ಮೂಲ್ಕಿಯ ಪುನರೂರು ಶ್ರೀ ವಿಶ್ವನಾಥ ದೇವಾಲಯದ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗೌರವ ಪ್ರದಾನ ಮಾಡಲಾಗುವುದೆಂದು ತಿಳಿಸಿದ್ದಾರೆ. ಶಂಶೀರ್ ಬುಡೋಳಿ ಅವರು ಸಾಹಿತ್ಯ, ಮಾಧ್ಯಮ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ. ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗಲೇ ಪತ್ರಿಕೆಗಳಿಗೆ ಬರೆಯುತ್ತಿದ್ದ ಇವರ ಅನೇಕ ಲೇಖನ, ಕವನ, ಲಘುಬರಹಗಳು ಕನ್ನಡದ ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. 2009 ರಲ್ಲಿ ನಡೆದ 11 ನೇ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಅಲ್ಲದೇ ರಾಜ್ಯ ಸರ್ಕಾರದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಕ್ರಿಯಾಶೀಲವಾಗಿ ಗುರುತಿಸಿಕೊಂಡಿದ್ದಾರೆ.

‘ಪಿರ್ಸತ್ತೊ ಪಲಕ’ ಎಂಬ ಬ್ಯಾರಿ ಭಾಷೆಯಲ್ಲಿ ಚೊಚ್ಚಲ ಕವನ ಸಂಕಲನ ಕೂಡಾ ಪ್ರಕಟಗೊಂಡಿವೆ. ಅಲ್ಲದೇ ಕನ್ನಡದಲ್ಲಿ ‘ಆಕಾಶ-ತಾಯಿ’, ‘ವನಸುಮಗಳು’, ‘ಮುಗಿಲ ಮಾಲೆ’, ‘ನೇತ್ರಾವತಿ’ ಕನ್ನಡ ಕವನ ಸಂಕಲನದಲ್ಲಿ ಇವರ ಕವನ ಪ್ರಕಟಗೊಂಡಿವೆ. ಬ್ಯಾರಿ ಕಾವ್ಯ ಸಂಪುಟದಲ್ಲೂ ಇವರ ಕವನ ಪ್ರಕಟಗೊಂಡಿವೆ. ಪದವಿ ವಿದ್ಯಾರ್ಥಿಯಾಗಿದ್ದಾಗಲೇ ಇವರು ‘ರೋಲ್ ಆಫ್ ಯುವವಾಣಿ ಇನ್ ರೂರಲ್ ಏರಿಯಾ’ ಮತ್ತು ‘ಡಾ‌.ಹಾ.ಮಾ.ನಾಯಕ್ – ಬದುಕು ಬರಹ ಮತ್ತು ಪುಸ್ತಕ ಪ್ರೀತಿ’ ಹೀಗೆ ವಿವಿಧ ವಿಷಯದಡಿಯಲ್ಲಿ ಪದವಿ, ಸ್ನಾತಕೋತ್ತರ ಪದವಿಯಲ್ಲಿ ಕಿರು ಸಂಶೋಧನೆ ಮಾಡಿದ್ದರು.

ಉಜಿರೆ ಎಸ್ ಡಿಎಂ ಕಾಲೇಜಿನಲ್ಲಿ ಪದವಿ, ಮೈಸೂರು ಮುಕ್ತ ವಿವಿಯಲ್ಲಿ ಡಿಪ್ಲೊಮಾ ಇನ್‌ ಜರ್ನಲಿಸಂ ಹಾಗೂ ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂಸಿಜೆ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಸದ್ಯ ಮೈಸೂರಿನಲ್ಲಿ ಪಿಎಚ್ ಡಿ ಸಂಶೋಧನೆ ಮಾಡುತ್ತಿದ್ದಾರೆ. ಮಂಗಳೂರಿನ ಯೆನೆಪೋಯ ವಿವಿ ಬೋರ್ಡ್ ಆಫ್ ಸ್ಟಡೀಸ್ ನ ಸದಸ್ಯರಾಗಿದ್ದಾರೆ. ಸಮಾಜ ಸೇವೆಯ ದೃಷ್ಟಿಯಿಂದ ‘ಶಂಶೀರ್ ಬುಡೋಳಿ ಫೌಂಡೇಶನ್’ ಕೂಡಾ ಸ್ಥಾಪಿಸಿದ್ದಾರೆ.

ಸದ್ಯ ಝೀ ಕನ್ನಡ ನ್ಯೂಸ್ ಚಾನೆಲ್ ನ ದಕ್ಷಿಣ ಕನ್ನಡ ಜಿಲ್ಲಾ ವರದಿಗಾರರಾಗಿರುವ ಇವರು ರಾಜ್ ನ್ಯೂಸ್, ಪಬ್ಲಿಕ್ ಟಿವಿ, ಸುವರ್ಣ ನ್ಯೂಸ್, ಟಿವಿ9, ಸುದ್ದಿ ಟಿವಿ ಹಾಗೂ ವಾರ್ತಾಭಾರತಿ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದರು. ಸನ್ಮಾರ್ಗ ಚಾನೆಲ್ ನ ಆಂಕರ್ ಆಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೇ ವಿವಿಧ ಸಾಮಾಜಿಕ ಸುದ್ದಿ ಜಾಲತಾಣಗಳಲ್ಲಿ ವಾಯ್ಸ್ ಓವರ್ ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿದ್ದಾರೆ. ರಾಷ್ಟ್ರ ಮಟ್ಟದ ವಿಚಾರ ಸಂಕಿರಣ, ಕವಿಗೋಷ್ಟಿಗಳಲ್ಲಿ ಕವನ ವಾಚಿಸಿರುವ ಇವರನ್ನು ಅನೇಕ ಕಡೆ ಸನ್ಮಾನಿಸಲಾಗಿದೆ. ಇವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬುಡೋಳಿ ನಿವಾಸಿ ಧರ್ಮಗುರು ಇಬ್ರಾಹಿಂ ಫಾಝಿಲ್ ಹನೀಫಿ ಹಾಗೂ ಕೈರುನ್ನೀಸಾ ದಂಪತಿಯ ಪುತ್ರ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಉಳ್ಳಾಲ ದರ್ಗಾ ಚುನಾವಣೆ: ಆಡಳಿತ ಸಮಿತಿಗೆ 55 ಮಂದಿ ಆಯ್ಕೆ

Next Post

ಕೊಂಕಣಿ ಲೇಖಕ ಸಂಘದಿಂದ ಶ್ರೀಮತಿ ಐರಿನ್ ಪಿಂಟೊರವರಿಗೆ ಪ್ರಶಸ್ತಿ ಪ್ರದಾನ

Related Posts

ಕಾರ್ಕಳ ಹೆಬ್ರಿ ಸಮೀಪ ಭಾರೀ ಗಾಳಿ ಮಳೆಗೆ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಚಾಲಕ ಸ್ಥಳದಲ್ಲೇ ಸಾವು
ಕರಾವಳಿ

ಕಾರ್ಕಳ ಹೆಬ್ರಿ ಸಮೀಪ ಭಾರೀ ಗಾಳಿ ಮಳೆಗೆ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಚಾಲಕ ಸ್ಥಳದಲ್ಲೇ ಸಾವು

August 8, 2026
28
ಬಂಟ್ವಾಳ: ಬಿಸಿ ರೋಡ್ ಬಳಿ ಟಿಪ್ಪರ್ ಸ್ಕೂಟರಿಗೆ ಡಿಕ್ಕಿ ; ಸಹ ಸವಾರ ಆಸ್ಪತ್ರೆಯಲ್ಲಿ ಸಾವು, ಸವಾರ ಗಂಭೀರ
ಕರಾವಳಿ

ಬಂಟ್ವಾಳ: ಬಿಸಿ ರೋಡ್ ಬಳಿ ಟಿಪ್ಪರ್ ಸ್ಕೂಟರಿಗೆ ಡಿಕ್ಕಿ ; ಸಹ ಸವಾರ ಆಸ್ಪತ್ರೆಯಲ್ಲಿ ಸಾವು, ಸವಾರ ಗಂಭೀರ

August 7, 2026
69
Next Post
ಕೊಂಕಣಿ ಲೇಖಕ ಸಂಘದಿಂದ ಶ್ರೀಮತಿ ಐರಿನ್ ಪಿಂಟೊರವರಿಗೆ ಪ್ರಶಸ್ತಿ ಪ್ರದಾನ

ಕೊಂಕಣಿ ಲೇಖಕ ಸಂಘದಿಂದ ಶ್ರೀಮತಿ ಐರಿನ್ ಪಿಂಟೊರವರಿಗೆ ಪ್ರಶಸ್ತಿ ಪ್ರದಾನ

Discussion about this post

Recent News

ನೀಟ್ ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದರಿಂದ ನೊಂದು ಹಾಸ್ಟೆಲ್‌ನಲ್ಲಿ ತಂಗಿ ಆತ್ಮಹತ್ಯೆ ; ದುಬೈನಲ್ಲಿ ಇಂಜಿನಿಯರ್ ಆಗಿದ್ದ ಅಣ್ಣನೂ ಮಂಗಳೂರಿಗೆ ಬಂದು ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣು !

ನೀಟ್ ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದರಿಂದ ನೊಂದು ಹಾಸ್ಟೆಲ್‌ನಲ್ಲಿ ತಂಗಿ ಆತ್ಮಹತ್ಯೆ ; ದುಬೈನಲ್ಲಿ ಇಂಜಿನಿಯರ್ ಆಗಿದ್ದ ಅಣ್ಣನೂ ಮಂಗಳೂರಿಗೆ ಬಂದು ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣು !

August 11, 2026
36
55.8 ಕೋಟಿ ಮೌಲ್ಯದ ಒಟ್ಟು 200 ಕೆಜಿಗೂ ಅಧಿಕ ಮಾದಕವಸ್ತು ವಶಕ್ಕೆ ಪಡೆದ ಬೆಂಗಳೂರು ಪೊಲೀಸರು: 39 ಆರೋಪಿಗಳು ಸೆರೆ

55.8 ಕೋಟಿ ಮೌಲ್ಯದ ಒಟ್ಟು 200 ಕೆಜಿಗೂ ಅಧಿಕ ಮಾದಕವಸ್ತು ವಶಕ್ಕೆ ಪಡೆದ ಬೆಂಗಳೂರು ಪೊಲೀಸರು: 39 ಆರೋಪಿಗಳು ಸೆರೆ

August 10, 2026
55
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ನೀಟ್ ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದರಿಂದ ನೊಂದು ಹಾಸ್ಟೆಲ್‌ನಲ್ಲಿ ತಂಗಿ ಆತ್ಮಹತ್ಯೆ ; ದುಬೈನಲ್ಲಿ ಇಂಜಿನಿಯರ್ ಆಗಿದ್ದ ಅಣ್ಣನೂ ಮಂಗಳೂರಿಗೆ ಬಂದು ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣು !

ನೀಟ್ ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದರಿಂದ ನೊಂದು ಹಾಸ್ಟೆಲ್‌ನಲ್ಲಿ ತಂಗಿ ಆತ್ಮಹತ್ಯೆ ; ದುಬೈನಲ್ಲಿ ಇಂಜಿನಿಯರ್ ಆಗಿದ್ದ ಅಣ್ಣನೂ ಮಂಗಳೂರಿಗೆ ಬಂದು ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣು !

August 11, 2026
55.8 ಕೋಟಿ ಮೌಲ್ಯದ ಒಟ್ಟು 200 ಕೆಜಿಗೂ ಅಧಿಕ ಮಾದಕವಸ್ತು ವಶಕ್ಕೆ ಪಡೆದ ಬೆಂಗಳೂರು ಪೊಲೀಸರು: 39 ಆರೋಪಿಗಳು ಸೆರೆ

55.8 ಕೋಟಿ ಮೌಲ್ಯದ ಒಟ್ಟು 200 ಕೆಜಿಗೂ ಅಧಿಕ ಮಾದಕವಸ್ತು ವಶಕ್ಕೆ ಪಡೆದ ಬೆಂಗಳೂರು ಪೊಲೀಸರು: 39 ಆರೋಪಿಗಳು ಸೆರೆ

August 10, 2026
ಗಾಲ್ಫ್ ಆಟಕ್ಕೆ ನೂತನ ಅಲೈನ್‌ಮೆಂಟ್ ಸಾಧನಗಳ ಪರಿಚಯ ಮಾಡಿದ ಮಂಗಳೂರು ಮೂಲದ ಡಾ. ದಿನಕರ್ ರೈ

ಗಾಲ್ಫ್ ಆಟಕ್ಕೆ ನೂತನ ಅಲೈನ್‌ಮೆಂಟ್ ಸಾಧನಗಳ ಪರಿಚಯ ಮಾಡಿದ ಮಂಗಳೂರು ಮೂಲದ ಡಾ. ದಿನಕರ್ ರೈ

August 10, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d