• About us
  • Contact us
  • Disclaimer
Sunday, September 27, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಗಳೂರು: ಯುರೋಪ್‌ನ ಲಕ್ಸೆಂಬರ್ಗ್ ದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಕಲಿ ಸಂದರ್ಶನ ಪಂಪ್‌ವೆಲ್‌ನ ‘ಓರ್ಲಾ ಕೆರಿಯರ್ ಸೊಲ್ಯೂಷನ್ಸ್’ ವಿರುದ್ಧ ಎಫ್‌ಐಆರ್ ದಾಖಲು

Coastal Times by Coastal Times
September 27, 2026
in ಕ್ರೈಮ್ ನ್ಯೂಸ್
ಮಂಗಳೂರು: ಯುರೋಪ್‌ನ ಲಕ್ಸೆಂಬರ್ಗ್ ದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಕಲಿ ಸಂದರ್ಶನ ಪಂಪ್‌ವೆಲ್‌ನ ‘ಓರ್ಲಾ ಕೆರಿಯರ್ ಸೊಲ್ಯೂಷನ್ಸ್’ ವಿರುದ್ಧ ಎಫ್‌ಐಆರ್ ದಾಖಲು
4
VIEWS
WhatsappTelegramShare on FacebookShare on Twitter

ಮಂಗಳೂರು: ಯಾವುದೇ ಅಧಿಕೃತ ನೋಂದಣಿ ಹಾಗೂ ಕಡ್ಡಾಯ ಪರವಾನಗಿ ಇಲ್ಲದೆ ಯುರೋಪ್‌ನ ಲಕ್ಸೆಂಬರ್ಗ್ (Luxembourg) ದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಸುಳ್ಳು ಭರವಸೆ ನೀಡಿ ಕಾನೂನುಬಾಹಿರವಾಗಿ ಉದ್ಯೋಗ ನೇಮಕಾತಿ ಸಂದರ್ಶನ ನಡೆಸುತ್ತಿದ್ದ ಮಂಗಳೂರಿನ ಪಂಪ್‌ವೆಲ್ ಮೂಲದ ಸಂಸ್ಥೆಯೊಂದರ ವಿರುದ್ಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಂಗಳೂರು ನಗರ ಪೊಲೀಸರ ಪ್ರಕಟಣೆ ತಿಳಿಸಿದೆ.

ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ಅಧೀನದಲ್ಲಿರುವ ಬೆಂಗಳೂರಿನ ‘ಪ್ರೊಟೆಕ್ಟರ್ ಆಫ್ ಎಮಿಗ್ರೆಂಟ್ಸ್’ (Protector of Emigrants – PoE) ಕಚೇರಿಯು ನೀಡಿದ ಅಧಿಕೃತ ದೂರಿನ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಘಟನೆಯ ವಿವರ: ಮಂಗಳೂರು ನಗರದ ಪಂಪ್‌ವೆಲ್‌ನಲ್ಲಿರುವ ‘ಲೋಟಸ್ ಗ್ಯಾಲಕ್ಸಿ’ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ‘ಮೆಸರ್ಸ್ ಓರ್ಲಾ ಕೆರಿಯರ್ ಸೊಲ್ಯೂಷನ್ಸ್’ (M/s Orla Career Solutions) ಎಂಬ ಸಂಸ್ಥೆಯು ವಿದೇಶದಲ್ಲಿ ಉದ್ಯೋಗ ನೀಡುವ ಕುರಿತು ಸಾರ್ವಜನಿಕವಾಗಿ ಜಾಹೀರಾತು ನೀಡಿತ್ತು. ದಿನಾಂಕ 24-09-2026 ರಿಂದ 26-09-2026 ರವರೆಗೆ ಲಕ್ಸೆಂಬರ್ಗ್‌ನಲ್ಲಿ ಉದ್ಯೋಗಕ್ಕಾಗಿ ಅಭ್ಯರ್ಥಿಗಳಿಗೆ ನೇಮಕಾತಿ ಸಂದರ್ಶನ ಆಯೋಜಿಸಿರುವುದಾಗಿ ಪ್ರಚಾರ ಮಾಡಿತ್ತು.

ಈ ಬಗ್ಗೆ ಬೆಂಗಳೂರಿನ ಪ್ರೊಟೆಕ್ಟರ್ ಆಫ್ ಎಮಿಗ್ರೆಂಟ್ಸ್ ಕಚೇರಿಗೆ ಬಂದ ದೂರಿನ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದಾಗ, ಸದರಿ ಸಂಸ್ಥೆಯು ಯಾವುದೇ ರೀತಿಯ ನೋಂದಣಿ ಮಾಡಿಕೊಂಡಿಲ್ಲದಿರುವುದು ಹಾಗೂ ‘ಎಮಿಗ್ರೇಷನ್ ಕಾಯ್ದೆ 1983’ರ ಅಡಿಯಲ್ಲಿ ವಿದೇಶಿ ಉದ್ಯೋಗ ನೇಮಕಾತಿ ನಡೆಸಲು ಪಡೆಯಬೇಕಾದ ಕಡ್ಡಾಯ ಪರವಾನಗಿಯನ್ನು ಹೊಂದಿಲ್ಲದಿರುವುದು ಪತ್ತೆಯಾಗಿದೆ.

ಕೇಂದ್ರ ಸರ್ಕಾರದ ಪರವಾನಗಿ ಇಲ್ಲದೆ ವಿದೇಶದಲ್ಲಿ ಉದ್ಯೋಗಾವಕಾಶ ಕಲ್ಪಿಸುವುದಾಗಿ ಸುಳ್ಳು ಆಶ್ವಾಸನೆ ನೀಡುವುದು, ನೇಮಕಾತಿ ಪ್ರಕ್ರಿಯೆ ನಡೆಸುವುದು ಮತ್ತು ಅಭ್ಯರ್ಥಿಗಳಿಂದ ಹಣ ವಸೂಲಿ ಮಾಡುವುದು ಎಮಿಗ್ರೇಷನ್ ಕಾಯ್ದೆಯನ್ವಯ ಗಂಭೀರ ಅಪರಾಧವಾಗಿದೆ. ಈ ಸಂಸ್ಥೆಯು ಸಾರ್ವಜನಿಕರನ್ನು ವಂಚಿಸಿ ಹಣ ಲೂಟಿ ಮಾಡುವ ದುರುದ್ದೇಶದಿಂದ ಈ ಕಾನೂನುಬಾಹಿರ ಸಂದರ್ಶನ ಹಮ್ಮಿಕೊಂಡಿದೆ ಎಂದು ವಿದೇಶಾಂಗ ಇಲಾಖೆಯ ಬೆಂಗಳೂರು ಕಚೇರಿಯು (ಪತ್ರ ಸಂಖ್ಯೆ: PoEB/385/14/2026-02) ಕಂಕನಾಡಿ ನಗರ ಠಾಣೆಗೆ ಇಮೇಲ್ ಮೂಲಕ ದೂರು ರವಾನಿಸಿದೆ.

ದೂರಿನನ್ವಯ ಎಮಿಗ್ರೇಷನ್ ಆಕ್ಟ್ 1983 ರ ಕಲಂ 10 ಹಾಗೂ 24 ರ ಅಡಿಯಲ್ಲಿ ‘ಓರ್ಲಾ ಕೆರಿಯರ್ ಸೊಲ್ಯೂಷನ್ಸ್’ ಸಂಸ್ಥೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಕಂಕನಾಡಿ ನಗರ ಪೊಲೀಸರು, ಸಂಸ್ಥೆಯ ದಾಖಲೆ ಪತ್ರಗಳ ಶೋಧನೆ ಹಾಗೂ ಮುಂದಿನ ತನಿಖೆ ಚುರುಕುಗೊಳಿಸಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಸರ್ವಕಾಲೇಜು ವಿದ್ಯಾರ್ಥಿ ಸಂಘದ ಪದಗ್ರಹಣ ಸಂಭ್ರಮಾಚರಣೆ ವೇಳೆ ಬಾಲ್ಕನಿಯ ತಡೆಗೋಡೆ ಕುಸಿದು ಬಿದ್ದು ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿ ಮೃತ್ಯು

Related Posts

ಬಂಟ್ವಾಳ ಆಟೋರಿಕ್ಷಾದಲ್ಲಿ ಬಂದು ತಲವಾರು, ರಾಡ್‌ನಿಂದ ಮಾರಣಾಂತಿಕ ಹಲ್ಲೆ: ಮೂವರು ಆರೋಪಿಗಳ ಬಂಧನ
ಕ್ರೈಮ್ ನ್ಯೂಸ್

ಬಂಟ್ವಾಳ ಆಟೋರಿಕ್ಷಾದಲ್ಲಿ ಬಂದು ತಲವಾರು, ರಾಡ್‌ನಿಂದ ಮಾರಣಾಂತಿಕ ಹಲ್ಲೆ: ಮೂವರು ಆರೋಪಿಗಳ ಬಂಧನ

September 26, 2026
60
ಪಾಂಡೇಶ್ವರದ ಶ್ರೀನಿವಾಸ ಪದವಿ ಕಾಲೇಜಿನಲ್ಲಿ ರ‍್ಯಾಗಿಂಗ್: ಇಬ್ಬರು ಕಿರಿಯ ವಿದ್ಯಾರ್ಥಿಗಳನ್ನು ಚಡ್ಡಿಯಲ್ಲಿ ನಿಲ್ಲಿಸಿ ಚಿತ್ರಹಿಂಸೆ, 9 ಮಂದಿ ವಿರುದ್ಧ ಎಫ್ಐಆರ್ ದಾಖಲು
ಕ್ರೈಮ್ ನ್ಯೂಸ್

ಪಾಂಡೇಶ್ವರದ ಶ್ರೀನಿವಾಸ ಪದವಿ ಕಾಲೇಜಿನಲ್ಲಿ ರ‍್ಯಾಗಿಂಗ್: ಇಬ್ಬರು ಕಿರಿಯ ವಿದ್ಯಾರ್ಥಿಗಳನ್ನು ಚಡ್ಡಿಯಲ್ಲಿ ನಿಲ್ಲಿಸಿ ಚಿತ್ರಹಿಂಸೆ, 9 ಮಂದಿ ವಿರುದ್ಧ ಎಫ್ಐಆರ್ ದಾಖಲು

September 25, 2026
76

Discussion about this post

Recent News

ಮಂಗಳೂರು: ಯುರೋಪ್‌ನ ಲಕ್ಸೆಂಬರ್ಗ್ ದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಕಲಿ ಸಂದರ್ಶನ ಪಂಪ್‌ವೆಲ್‌ನ ‘ಓರ್ಲಾ ಕೆರಿಯರ್ ಸೊಲ್ಯೂಷನ್ಸ್’ ವಿರುದ್ಧ ಎಫ್‌ಐಆರ್ ದಾಖಲು

ಮಂಗಳೂರು: ಯುರೋಪ್‌ನ ಲಕ್ಸೆಂಬರ್ಗ್ ದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಕಲಿ ಸಂದರ್ಶನ ಪಂಪ್‌ವೆಲ್‌ನ ‘ಓರ್ಲಾ ಕೆರಿಯರ್ ಸೊಲ್ಯೂಷನ್ಸ್’ ವಿರುದ್ಧ ಎಫ್‌ಐಆರ್ ದಾಖಲು

September 27, 2026
4
ಸರ್ವಕಾಲೇಜು ವಿದ್ಯಾರ್ಥಿ ಸಂಘದ ಪದಗ್ರಹಣ ಸಂಭ್ರಮಾಚರಣೆ ವೇಳೆ ಬಾಲ್ಕನಿಯ ತಡೆಗೋಡೆ ಕುಸಿದು ಬಿದ್ದು ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿ ಮೃತ್ಯು

ಸರ್ವಕಾಲೇಜು ವಿದ್ಯಾರ್ಥಿ ಸಂಘದ ಪದಗ್ರಹಣ ಸಂಭ್ರಮಾಚರಣೆ ವೇಳೆ ಬಾಲ್ಕನಿಯ ತಡೆಗೋಡೆ ಕುಸಿದು ಬಿದ್ದು ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿ ಮೃತ್ಯು

September 27, 2026
104
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು: ಯುರೋಪ್‌ನ ಲಕ್ಸೆಂಬರ್ಗ್ ದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಕಲಿ ಸಂದರ್ಶನ ಪಂಪ್‌ವೆಲ್‌ನ ‘ಓರ್ಲಾ ಕೆರಿಯರ್ ಸೊಲ್ಯೂಷನ್ಸ್’ ವಿರುದ್ಧ ಎಫ್‌ಐಆರ್ ದಾಖಲು

ಮಂಗಳೂರು: ಯುರೋಪ್‌ನ ಲಕ್ಸೆಂಬರ್ಗ್ ದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಕಲಿ ಸಂದರ್ಶನ ಪಂಪ್‌ವೆಲ್‌ನ ‘ಓರ್ಲಾ ಕೆರಿಯರ್ ಸೊಲ್ಯೂಷನ್ಸ್’ ವಿರುದ್ಧ ಎಫ್‌ಐಆರ್ ದಾಖಲು

September 27, 2026
ಸರ್ವಕಾಲೇಜು ವಿದ್ಯಾರ್ಥಿ ಸಂಘದ ಪದಗ್ರಹಣ ಸಂಭ್ರಮಾಚರಣೆ ವೇಳೆ ಬಾಲ್ಕನಿಯ ತಡೆಗೋಡೆ ಕುಸಿದು ಬಿದ್ದು ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿ ಮೃತ್ಯು

ಸರ್ವಕಾಲೇಜು ವಿದ್ಯಾರ್ಥಿ ಸಂಘದ ಪದಗ್ರಹಣ ಸಂಭ್ರಮಾಚರಣೆ ವೇಳೆ ಬಾಲ್ಕನಿಯ ತಡೆಗೋಡೆ ಕುಸಿದು ಬಿದ್ದು ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿ ಮೃತ್ಯು

September 27, 2026
ಬಂಟ್ವಾಳ ಆಟೋರಿಕ್ಷಾದಲ್ಲಿ ಬಂದು ತಲವಾರು, ರಾಡ್‌ನಿಂದ ಮಾರಣಾಂತಿಕ ಹಲ್ಲೆ: ಮೂವರು ಆರೋಪಿಗಳ ಬಂಧನ

ಬಂಟ್ವಾಳ ಆಟೋರಿಕ್ಷಾದಲ್ಲಿ ಬಂದು ತಲವಾರು, ರಾಡ್‌ನಿಂದ ಮಾರಣಾಂತಿಕ ಹಲ್ಲೆ: ಮೂವರು ಆರೋಪಿಗಳ ಬಂಧನ

September 26, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d