ಉಳ್ಳಾಲ: ಉಳ್ಳಾಲ ಜುಮ್ಮಾ ಮಸೀದಿ ಮತ್ತು ಸೈಯ್ಯದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾ ಇದರ ಆಡಳಿತ ಸಮಿತಿ ಆಯ್ಕೆಗೆ ಶನಿವಾರ ಮತದಾನ ನಡೆಯಿತು. ನೋಂದಾಯಿತ 3,512 ಮತದಾರರ ಪೈಕಿ 2,935 ಮಂದಿ ಮತ ಚಲಾಯಿಸಿದರು. ಒಟ್ಟು ಶೇ.86.6 ಮತದಾನವಾಗಿದೆ ಎಂದು ದ.ಕ.ಜಿಲ್ಲಾ ವಕ್ಫ್ ಅಧಿಕಾರಿ ಹಾಗೂ ಚುನಾವಣಾಧಿಕಾರಿ ಸೈಯದ್ ಮೊಹಝಂ ಪಾಶಾ ತಿಳಿಸಿದ್ದಾರೆ.
ಕೋಟೆಪುರ, ಮೇಲಂಗಡಿ, ಮುಕ್ಕಚೇರಿ, ಅಳೇಕಲ, ಕಲ್ಲಾಪು ಹೀಗೆ 5 ಕರಿಯ (ವಲಯ)ಗಳಿಂದ ತಲಾ 11 ಮಂದಿಯಂತೆ 55 ಮಂದಿ ಸದಸ್ಯರ ಆಯ್ಕೆಗೆ 80 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮತದಾನವು ಮುಕ್ಕಚೇರಿ-ಒಂಭತ್ತುಕೆರೆಯ ದ.ಕ.ಜಿ.ಪಂ. ಹಿ.ಪ್ರಾ. ಶಾಲೆಯಲ್ಲಿ ಬೆಳಗ್ಗೆ 8ರಿಂದ ಅಪರಾಹ್ನ 3ರವರೆಗೆ ನಡೆಯಿತು. ಸಂಜೆ 4ಕ್ಕೆ ಮತ ಎಣಿಕೆ ಆರಂಭಿಸಲಾಗಿದ್ದು, ರಾತ್ರಿ ಫಲಿತಾಂಶ ಪ್ರಕಟಿಸಲಾಯಿತು. ಮತದಾನ ಕೇಂದ್ರದ ವ್ಯಾಪ್ತಿಯಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಚುನಾಯಿತರಾದ ನೂತನ ಸದಸ್ಯರ ವಿವರ:- ಕೋಟೆಪುರ ಕರಿಯ: ಅಬ್ದುಲ್ ಅಜೀಜ್, ಅಬ್ದುಲ್ ಖಾದರ್, ಬಶೀರ್ ಯುಬಿಎಂ, ಮುಹಮ್ಮದ್ ರಫೀಕ್, ಹಸೈನಾರ್ ಯುಕೆ, ಹಸೈನಾರ್ ಯು, ಅಬೂಬಕ್ಕರ್, ಅಶ್ರಫ್ ಮುಹಮ್ಮದ್, ರಫೀಕ್ ಯುಎಂ, ತಹಸೀನ್ ಯುಟಿ, ಮುಹಮ್ಮದ್ ಅಬ್ದುಲ್ ಖಾದರ್.
ಮುಕ್ಕಚ್ಚೇರಿ ಕರಿಯ: ಅಬೂಬಕ್ಕರ್, ಅಯ್ಯೂಬ್ ಯು.ಕೆ, ಖಲೀಲ್, ಅಹಮದ್ ತಂಝಿಲ್, ಇಸ್ಮಾಯಿಲ್, ಖಲೀಲ್, ಫಾರೂಕ್ ಅಬೂಬಕ್ಕರ್, ಆಜಾದ್ ಇಸ್ಮಾಯಿಲ್, ನಜೀಂ ರಹಮಾನ್, ಮಯ್ಯದ್ದಿ ಬಸ್ತಿಪಡ್ಪು, ಉಳ್ಳಾಲ ನಾಸೀರ್.
ಕಲ್ಲಾಪು ಕರಿಯ: ಮುಹಮ್ಮದ್ ಕೆ, ಫಾರೂಕ್ ಯು.ಎಚ್, ಮಹಮ್ಮದ್ ಅರೀಫ್ ಯು, ಅಮೀರ್ ಅಹಮದ್, ಮುಹಮದ್ ಇಮ್ತಿಯಾಜ್ ಹುಸೇನ್ ಮುಹಮ್ಮದ್ ಇಜಾಝ್, ಮುಹಮ್ಮದ್ ಮುಸ್ತಫ, ಮುಹಮ್ಮದ್ ಪಿ.ಎಚ್, ಮುಹಮ್ಮದ್ ಮುಸ್ತಫ, ಮೊಹಿದೀನ್, ಹೊಸಹಿತ್ಲು ಹಮೀದ್.
ಮೇಲಂಗಡಿ ಕರಿಯ: ಜಬ್ಬಾರ್ ಯು.ಎಂ, ನಜೀರ್ ಉಳ್ಳಾಲ ಬಾವಾ, ಮುಹಮ್ಮದ್ ಇಸಾಕ್, ಮೊಹಿದೀನಬ್ಬ ಅಶ್ರಫ್, ಅಬ್ದುಲ್ ಸಮದ್, ಇಬ್ರಾಹಿಂ ಶೌಕತ್, ಜೈನುದ್ದೀನ್, ಮುಹಮ್ಮದ್ ಬಾವಾ ಉಳ್ಳಾಲ, ಮುಹಮ್ಮದ್ ರಫೀಕ್, ಬಾವಾ ಹನೀಫ್.
Discover more from Coastal Times Kannada
Subscribe to get the latest posts sent to your email.








Discussion about this post