ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಗರಡಿಗಳಲ್ಲಿ ಒಂದಾದ ಕಂಕನಾಡಿ ಬ್ರಹ್ಮಬೈದರ್ಕಳ ಗರಡಿ ಆರಂಭವಾಗಿ 150 ವರ್ಷಗಳು ಸಂದಿವೆ. ಇದರ ಪ್ರಯುಕ್ತ ಈ ಗರಡಿ ಕ್ಷೇತ್ರದಲ್ಲಿ ಸಹಸ್ರ ನಾರಿಕೇಳ ಗಣಯಾಗ, ಸಹಸ್ರ ಕುಂಭಾಭಿಷೇಕ, ನಾಗಬ್ರಹ್ಮಮಂಡಲೋತ್ಸವ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಮಾರ್ಚ್ 3ರಿಂದ 7ರವರೆಗೆ ನಡೆಯಲಿವೆ. ಮಾರ್ಚ್ 7ರಂದು ಸಂಜೆ 6.30ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವರು, ಸಂಸದರು, ಶಾಸಕರು ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಗರಡಿ ಕ್ಷೇತ್ರದ ಅಧ್ಯಕ್ಷ ಕೆ. ಚಿತ್ತರಂಜನ್, ‘ಗರಡಿಗೆ 150 ವರ್ಷ ತುಂಬಿದ ಸಲುವಾಗಿ ಕ್ಷೇತ್ರದ ಪ್ರಧಾನ ಅರ್ಚಕ ಕೆ. ವಾಸುದೇವ ಶಾಂತಿ ಉಪಸ್ಥಿತಿಯಲ್ಲಿ ಬಿ. ಗಂಗಾಧರ ಶಾಂತಿ ನೇತತ್ವದಲ್ಲಿ ಹಾಗೂ ನಗರದ ನಾರಾಯಣಗುರು ವೈದಿಕ ಸಮಿತಿ ಸಹಭಾಗಿತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ’ ಎಂದರು.
ಮಾ.4ರಂದು ಬೆಳಗ್ಗೆ 5.00ರಿಂದ ಸಹಸ್ರ ನಾರಿಕೇಳ ಗಣಯಾಗ, ಪೂರ್ವಾಹ್ನ ಗಂಟೆ 11.00ಕ್ಕೆ ಪೂರ್ಣಾಹುತಿ, ಮಾ.5ರಂದು ಪೂರ್ವಾಹ್ನ ಗಂಟೆ 7.00ರಿಂದ ಕ್ಷೇತ್ರದ ಪರಿವಾರ ದೈವದೇವರುಗಳಿಗೆ ಕಲಶಾಭಿಷೇಕ, ಮಾ.6ರಂದು ಪೂರ್ವಾಹ್ನ ಗಂಟೆ 7.40ಕ್ಕೆ ಒದಗುವ ಮೀನ ಲಗ್ನದಲ್ಲಿ ಶ್ರೀ ಬ್ರಹ್ಮ ಬೈದರ್ಕಳರಿಗೆ ಸಹಸ್ರ ಕುಂಭಾಭಿಷೇಕ, ಮಾ.7ರಂದು ನಾಗಪಾತ್ರಿ ಕಾವೂರು ಮನೋಜ್ ಶಾಂತಿ ಮತ್ತು ಬಳಗದವರಿಂದ ರಾತ್ರಿ ಗಂಟೆ 9.00ಕ್ಕೆ ಹಾಲಿಟ್ಟು ಸೇವೆ ಬಳಿಕ ರಾತ್ರಿ ಗಂಟೆ 12.00ಕ್ಕೆ ನಾಗಬ್ರಹ್ಮ ಮಂಡಲೋತ್ಸವ ಸೇವೆ ನಡೆಯಲಿದೆ.
ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ವಿವರ: ಮಾ. 3ರಂದು ಪೂರ್ವಾಹ್ನ 6.00ಗಂಟೆಗೆ ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ಶ್ರೀ ಮಚ್ಚೇಂದ್ರನಾಥ ಬಾಬಾ ಇವರ ಉಪಸ್ಥಿತಿಯಲ್ಲಿ ಶ್ರೀ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಶ್ರೀ ಕ್ಷೇತ್ರದಿಂದ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರಕ್ಕೆ ಋತ್ವಿಜರ ಆಗಮನ. ಬೆಳಗ್ಗೆ 9.12ಕ್ಕೆ ತೋರಣ ಮುಹೂರ್ತ, 9.30ಕ್ಕೆ ಕೊಪ್ಪರಿಗೆ ಮುಹೂರ್ತ, 11.08ಕ್ಕೆ ಉಗ್ರಾಹ ಮುಹೂರ್ತ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮ: ರಾತ್ರಿ ಗಂಟೆ 7.30ರಿಂದ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈಭವ ಕಾರ್ಯಕ್ರಮ, ಹಾಗೂ ನಾದ ಸಂಕೀರ್ತನಾ ಮಂಗಳೂರು ತಂಡದಿಂದ ಭಕ್ತಿ ಲಹರಿ ಮಾ.4ರಂದು ಬೆಳಗ್ಗೆ 6.00ರಿ೦ದ ಸಹಸ್ರ ನಾರಿಕೇಳ ಗಣಯಾಗ, ಪೂರ್ವಾಹ್ನ ಗಂಟೆ 11.00ಕ್ಕೆ ಪೂರ್ಣಾಹುತಿ, ಮಧ್ಯಾಹ್ನ 12.00 ಗಂಟೆಗೆ ಮಹಾಪೂಜೆ, ಮಹಾಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ: ಸಂಜೆ 4.30ರಿಂದ ಮಂಗಳೂರಿನ ಖ್ಯಾತ ಸಪ್ತಸ್ವರ ಆರ್ಕೆಸ್ಟ್ರಾ ಪ್ರಭಾಕರ್ ತಣ್ಣೀರುಬಾವಿ ಮತ್ತು ಬಳಗದವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ, ರಾತ್ರಿ ಗಂಟೆ 8.00ರಿಂದ ರುದ್ರ ಥೇಟರ್ ಮಂಗಳೂರು ಅರ್ಪಿಸುವ ‘ಶೂದ್ರ ಶಿವ’.
ಮಾ.6ರಂದು ಬೆಳಗ್ಗೆ ಸಹಸ್ರಕಲರ ಪ್ರಸನ್ನ ಪೂಜೆ, ಕಲಶಾಭಿಷೇಕ ಪ್ರಾರಂಭ, 7.40 ಮೀನ ಲಗ್ನದಲ್ಲಿ ಶ್ರೀ ಬ್ರಹ್ಮ ಬೈದರ್ಕಳರಿಗೆ ಸದಸ್ಯ ಕುಂಭಾಭಿಷೇಕ, ಪ್ರಸನ್ನ ಪೂಜೆ, ಅನ್ನನೈವೇದ್ಯ ಸೇವೆ, ಬೈದರ್ಕಳರಿಗೆ ದರ್ಶನ ಸೇವೆ, ಪಾಣಿತಾಡನ, ಭೂತಬಲಿ, ಪಲ್ಯ ಪೂಜೆ. ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ, ಸಂಜೆ 4.00ರಿಂದ ನಾಗಮಂಡಲ ಮಂಟಪ ಶುದ್ದಿ, ವಾಸ್ತುರಾಗೋಪ್ಪ ಹೋಮ, ವಾಸ್ತು ಬಲಿ. ರಾತ್ರಿ 7.00ರಿಂದ ಪಲ್ಲಕಿ ಬಲಿ ಉತ್ಸವ, ಬ್ರಹ್ಮಬೈದರ್ಕಳರಿಗೆ ವಿಶೇಷ ಮಹಾಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ: ಸಂಜೆ 4.30ರಿಂದ ಸ್ಥಳೀಯ ಪ್ರತಿಭೆಗಳಿಂದ ನಾನ ನೃತ್ಯಾವಳಿಗಳು, ರಾತ್ರಿ ಗಂಟೆ 8.00ರಿಂದ ಮೈಮ್ ರಾಮ್ ದಾಸ್, ಶಶಿರಾಜ್ ಕಾವೂರ್ ಹಾಗೂ ವರಹಾ ರೂಪಂ ಖ್ಯಾತಿಯ ಹಾಡುಗಾರ ಸಾಯಿ ವಿಶ್ಲೇಶ್ ಇವರ ತುಳು ಮತ್ತು ಭಾರತೀಯ ಜಾನಪದ ಶಾಸ್ತ್ರೀಯ ಸಂಗೀತಗಳ ಅದ್ಧೂರಿ ಕಾರ್ಯಕ್ರಮ.
ಮಾ. 7ರಂದು ಪ್ರಾತಃಕಾಲ 4.30 ಗಣಹೋಮ, ನಾಗದೇವರಿಗೆ ವಿಶೇಷ ಪಂಚಾಮೃತ ಅಭಿಷೇಕ, ತನುತಂಬಿಲ ಸೇವೆ, ಆಶ್ಲೇಷ ಬಲಿ, ಸರ್ವಸೂಕ್ತ ಹೋಮ, ಮ೦ಡಲ ಪೂಜೆ, ರಾತ್ರಿ ಗಂಟೆ 9.00 ಕ್ಕೆ ನಾಗಪಾತ್ರಿ ಶ್ರೀ ಮನೋಜ್ ಶಾಂತಿ ಮತ್ತು ಬಳಗದವರಿಂದ ನಾಗ ಸಾನಿಧ್ಯದಲ್ಲಿ ‘ಹಾಲಿಟ್ಟು ಸೇವೆ’, ರಾತ್ರಿ ಗಂಟೆ 12.00ರಿಂದ ನಾಗಬ್ರಹ್ಮ ಮಂಡಲೋತ್ಸವ ಸೇವೆ ಸಂಜೆ 4ರಿಂದ ಶ್ರೀ ದೇವಿ ನೃತ್ಯಾರಾಧನಾ ಕಲಾ ಕೇಂದ್ರ ಮಂಗಳೂರು ತಂಡದಿಂದ ನೃತ್ಯ ರೂಪಕ.
ಹೊರೆಕಾಣಿಕೆ ಮೆರವಣಿಗೆ : ಮಾ.3ರ ಶುಕ್ರವಾರ ಮಧ್ಯಾಹ್ನ ಗಂಟೆ 3.00ಕ್ಕೆ ಹಸಿರುವಾಣಿ ಹೊರಕಾಣಿಕ ಮೆರವಣಿಗೆಯು ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಇಲ್ಲಿಂದ ಹೊರಟು ಶ್ರೀ ನಾರಾಯಣಗುರು ವೃತ್ತ, ಲಾಲ್ ಭಾಗ್, ಪಿ.ವಿ.ಎಸ್ ವೃತ್ತ, ಬಂಟ್ಸ್ ಹಾಸ್ಟೆಲ್ ವೃತ್ತ, ಜ್ಯೋತಿ ವೃತ್ತ, ಕಂಕನಾಡಿ, ಪಂಪ್ ವೆಲ್ ವೃತ್ತದ ಮೂಲಕ ಶ್ರೀ ಕ್ಷೇತ್ರ ಗರಡಿಗೆ ಆಗಮಿಸಲಿದೆ.

ಸುದ್ದಿಗೋಷ್ಠಿಯಲ್ಲಿ ಕ್ಷೇತ್ರದ ವ್ಯವಸ್ಥಾಪಕ ಜೆ. ಕಿಶೋರ್ ಕುಮಾರ್, ‘ಕಂಕನಾಡಿ ಗರಡಿ 150’ರ ಸಂಭ್ರಮ ಸಮಿತಿ ಪ್ರಧಾನ ಸಂಚಾಲಕ ಎಂ. ಮೋಹನ್ ಉಜ್ಜೋಡಿ, ಕ್ಷೇತ್ರದ ಮೊಕ್ತೇಸರರಾದ ಬಿ. ದಾಮೋದರ ನಿಸರ್ಗ, ಬಿ.ವಿಠಲ, ಎ. ವಾಮನ, ದಿವರಾಜ್, ಜಗದೀಪ್ ಡಿ. ಸುವರ್ಣ, ಜೆ.ವಿಜಯ, ಆರ್ಥಿಕ ಸಮಿತಿಯ ಶರಣ್ ಪಂಪ್‌ವೆಲ್, ಪಾಲಿಕೆ ಸದಸ್ಯ ಸಂದೀಪ್ ಗರೋಡಿ, ಪ್ರಚಾರ ಸಮಿತಿ ಸಂಚಾಲಕ ಬ್ರಿಜೇಶ್ ಮತ್ತಿತರರು ಇದ್ದರು.
Discover more from Coastal Times Kannada
Subscribe to get the latest posts sent to your email.








Discussion about this post