ಬೆಂಗಳೂರು, ಮಾ.26: ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸಿ ಬಂದು ಬೆಳಗ್ಗೆ ಮತ್ತೆ ಜಿಮ್ ಸೆಂಟರಿನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ಯುವತಿಯೊಬ್ಬಳು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಮಲ್ಲೇಶಪಾಳ್ಯದಲ್ಲಿ ನಡೆದಿದೆ.
ಮಂಗಳೂರು ಮೂಲದ ಯುವತಿ ವಿನಯ ಕುಮಾರಿ(44) ಮೃತ ಯುವತಿ. ಈಕೆಯ ಕುಟುಂಬಸ್ಥರು ಮಂಗಳೂರಿನಲ್ಲಿ ವಾಸವಿದ್ದಾರೆ. ಬೆಂಗಳೂರಿನಲ್ಲಿ ಐಡಿಸಿ ಕಂಪನಿಯಲ್ಲಿ ಬ್ಯಾಗ್ರೌಂಡ್ ವೆರಿಫಯರ್ ಆಗಿ ಕೆಲಸ ಮಾಡುತ್ತಿದ್ದು ಒಬ್ಬಂಟಿಯಾಗೇ ವಾಸವಿದ್ದರು. ಶುಕ್ರವಾರ ರಾತ್ರಿ ನೈಟ್ ಶಿಫ್ಟ್ ಮುಗಿಸಿಕೊಂಡು ಬಂದಿದ್ದರು. ಎಂದಿನಂತೆ ಜಿಮ್ ನಲ್ಲಿ ವರ್ಕೌಟ್ ಮಾಡಲು ಹೋಗಿದ್ದು, ಅಲ್ಲಿ ಅಭ್ಯಾಸ ನಿರತವಾಗಿದ್ದಾಗಲೇ ಹಿಂಭಾಗಕ್ಕೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ವಿನಯ ಕುಮಾರಿ ಖಾಸಗಿ ಕಂಪನಿ ಉದ್ಯೋಗಿ, ಮೂಲತಃ ಮಂಗಳೂರು. ಯಾರನ್ನೂ ಮದುವೆ ಆಗದೆ ಜಿಮ್ ಮತ್ತು ಡ್ಯಾನ್ಸ್ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.