• About us
  • Contact us
  • Disclaimer
Sunday, April 26, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಕಾಲೇಜಿನ ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ ಇರಲಿಲ್ಲ ! ವಾಟ್ಸಪ್ ಮೆಸೇಜ್‌‌ಗಳಿಗೆ ಗಮನ ಕೊಡಬೇಡಿ’ – ಖುಷ್ಬೂ ಸುಂದರ್

Coastal Times by Coastal Times
July 27, 2023
in ಕರಾವಳಿ
ಕಾಲೇಜಿನ ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ ಇರಲಿಲ್ಲ ! ವಾಟ್ಸಪ್ ಮೆಸೇಜ್‌‌ಗಳಿಗೆ ಗಮನ ಕೊಡಬೇಡಿ’ – ಖುಷ್ಬೂ ಸುಂದರ್
135
VIEWS
WhatsappTelegramShare on FacebookShare on Twitter

ಉಡುಪಿ: ಉಡುಪಿಯ ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜು ಶೌಚಾಲಯದಲ್ಲಿ ವಿದ್ಯಾರ್ಥಿನಿಯರೇ ಹಿಡನ್ ಕ್ಯಾಮೆರಾ ಇಟ್ಟಿದ್ದ ಪ್ರಕರಣ ಇದೀಗ ರಾಜಕೀಯಕ್ಕೆ ಕಾರಣ ಆಗಿತ್ತು. ಅನ್ಯಕೋಮಿನ ವಿದ್ಯಾರ್ಥಿನಿಯರು  ಹಿಂದೂಗಳನ್ನ ಟಾರ್ಗೆಟ್​ ಮಾಡಿದ್ರು ಅನ್ನೋಮಟ್ಟಿಗೆ ಬಿಜೆಪಿ ಅಬ್ಬರಿಸಿತ್ತು. ಅಯ್ಯೋ ಮಕ್ಕಳಾಟವನ್ನ ರಾಜಕೀಯ ಕಳ್ಳಾಟ ಮಾಡ್ತಾವ್ರೆ ಅಂತ ಕಾಂಗ್ರೆಸ್  ಒಗ್ಗರಣೆ ಹಾಕಿತ್ತು. ಮೊದಲಿನಿಂದ್ಲೂ ಅಂಥದ್ದೇನೂ ಆಗಿಲ್ಲ ಅಂತಲೇ ಹೇಳುತ್ತಾ ಬಂದಿದ್ದ ಪೊಲೀಸ್ರು ಈಗ ಎಫ್‌ಐಆರ್ ಹಾಕಿದ್ದಾರೆ. ಮೂವರು ವಿದ್ಯಾರ್ಥಿನಿಯರ ಜೊತೆಗೆ ಸಾಕ್ಷ್ಯ ನಾಶದ ಆರೋಪದಡಿ ಕಾಲೇಜು ಆಡಳಿತ ಮಂಡಳಿ ವಿರುದ್ಧವೂ ಮಲ್ಪೆ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ವಿಡಿಯೋ ವಿವಾದ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡ್ತಿದ್ದಂತೆ ರಾಷ್ಟ್ರೀಯ ಮಹಿಳಾ ಆಯೋಗ ಎಂಟ್ರಿ ಕೊಟ್ಟಿದೆ. ಮಹಿಳಾ ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ ಕೂಡ ಟ್ವೀಟ್ ಮಾಡಿದ್ದು, ನಾವೂ ಪ್ರಕರಣದ ತನಿಖೆ ನಡೆಸ್ತೇವೆ ಎಂದಿದ್ದಾರೆ. ಅಲ್ದೇ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ, ನಟಿ ಖುಷ್ಬೂ ಸುಂದರ್ ಕಾಲೇಜಿಗೆ ತೆರಳಿ ವಿಚಾರಣೆ ನಡೆಸಿದ್ದಾರೆ.

ನೇತ್ರಾ ಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನ ಮೊಬೈಲ್ ವಿಡಿಯೋ ಪ್ರಕರಣ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು ಸುಂದರ್ ಉಡುಪಿ ಕಾಲೇಜಿನಲ್ಲಿ ಸತತ ಐದು ಗಂಟೆಗಳ ಸುಧೀರ್ಘ ಸಭೆ ನಡೆಸಿದ್ದಾರೆ. ಸತತ 5 ಗಂಟೆಗಳ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಖುಷ್ಬು ಸುಂದರ್ ಶೌಚಾಲಯದಲ್ಲಿ ಯಾವುದೇ ಹಿಡನ್ ಕ್ಯಾಮೆರಾ ಇರಲಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಈ ಬಗ್ಗೆ ವಿವರವಾಗಿ ಮಾತನಾಡಿದ ಅವರು, ಈಗಷ್ಟೇ ನಾನು ತನಿಖೆ ಆರಂಭ ಮಾಡಿದ್ದೇನೆ. ಯಾವುದೇ ಮಾಹಿತಿಗಳನ್ನು ಹೊರಗೆ ಹೇಳಲು ಸಾಧ್ಯವಿಲ್ಲ. ಒಳಗಡೆ ಏನು ಚರ್ಚೆ ಆಯ್ತು ಎಂದು ಬಹಿರಂಗಪಡಿಸಲು ಸಾಧ್ಯವಿಲ್ಲ. ಈಗಲೇ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಈಗಷ್ಟೇ ತನಿಖೆ ಆರಂಭಿಸಿದ್ದೇವೆ, ಈ ವಿಚಾರದಲ್ಲಿ ಯಾವುದೇ ಅಂತಿಮ ತೀರ್ಮಾನಕ್ಕೆ ಬರಬೇಡಿ. ಸಾಕ್ಷಿ ಸಿಕ್ಕಿದೆಯಾ ಎನ್ನುವ ಬಗ್ಗೆ ಹೇಳಲು ಸಾಧ್ಯವಿಲ್ಲ. ಪೊಲೀಸರ ಹೇಳಿಕೆ ಹೊರತಾಗಿ ಸದ್ಯ ಜನರು ಬೇರೆ ಯಾವುದೇ ಊಹಾಪೋಹಗಳಿಗೆ ಕಿವಿ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ.

ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹಕ್ಕೆ ನಮಗೆ ಇನ್ನೂ ಸ್ವಲ್ಪ ಸಮಯ ಬೇಕು. ಎಲ್ಲರೂ ಜವಾಬ್ದಾರಿಯುತ ನಾಗರಿಕರಾಗಿ ವರ್ತಿಸಬೇಕೆಂದು ಪ್ರಾಮಾಣಿಕವಾಗಿ ಕೋರುತ್ತೇನೆ. ಯಾವುದೇ ರೂಮರ್‌ಗಳಿಗೆ, ವಾಟ್ಸಪ್ ಮೆಸೇಜ್‌ಗಳಿಗೆ ಗಮನ ಕೊಡಬೇಡಿ. ನಾವೇ ಸರಿಯಾದ ಮಾಹಿತಿಯನ್ನು ನೀಡುತ್ತೇವೆ ಎಂದರು. ಸಂಬಂಧಪಟ್ಟ ಫೋನ್‌ಗಳು ವಿಧಿ ವಿಜ್ಞಾನ ಪ್ರಯೋಗಕ್ಕೆ ಕಳುಹಿಸಲಾಗಿದೆ. ಇದಕ್ಕೆ ಹೊರತಾಗಿ ಯಾವುದೇ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ನಮಗೆ ನಮ್ಮ ಕೆಲಸ ಮಾಡಲು ಬಿಡಿ. ನಾವು ಯಾರನ್ನು ಮಾತನಾಡಿಸುತ್ತೇವೆ ಎಲ್ಲಿಗೆ ಹೋಗುತ್ತೇವೆ ಎಂದು ಹಿಂಬಾಲಿಸಬೇಡಿ. ರಾಷ್ಟ್ರೀಯ ಮಹಿಳಾ ಆಯೋಗದ ಪರವಾಗಿ ನಾನು ಸ್ಥಳದಲ್ಲಿ ಇದ್ದೇನೆ. ನಮಗೆ ನಮ್ಮ ಕೆಲಸ ಮಾಡಲು ಬಿಡಿ. ಸದ್ಯ ನಿಮಗೆ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ. ಮಹಿಳಾ ಆಯೋಗಕ್ಕೆ ದೂರು ಬಂದ ಕಾರಣ ನಾನು ಇಲ್ಲಿ ಇದ್ದೇನೆ ಎಂದು ಖುಷ್ಬು ಹೇಳಿದ್ದಾರೆ.
ಆರೋಪಗಳು ಅನೇಕ ಇರಬಹುದು, ಅದರ ಆಧಾರದಲ್ಲಿ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ನಾನು ಯಾವುದೇ ಬ್ರೇಕಿಂಗ್ ನ್ಯೂಸ್ ಕೊಡಲು ಇಲ್ಲಿ ಇಲ್ಲ. ಇದು ವಿದ್ಯಾರ್ಥಿನಿಯರಿಗೆ ಸಂಬಂಧಿಸಿದ ವಿಚಾರ. ಇದು ಮಹಿಳೆಯರಿಗೆ ಸಂಬಂಧಿಸಿದ ವಿಚಾರ, ಕಾಯಬೇಕು. ಇದು ಎರಡು ನಿಮಿಷದ ನೂಡಲ್ಸ್ ಥರ ಅಲ್ಲ. ಟಾಯ್ಲೆಟ್‌ನಲ್ಲಿ ಹಿಡನ್ ಕ್ಯಾಮೆರಾ ಇರಿಸಲಾಗಿದೆ ಎನ್ನುವ ರೂಮರ್ ನಂಬಬೇಡಿ. ಹರಿದಾಡುತ್ತಿರುವ ಸುಳ್ಳು ವಿಡಿಯೋಗಳನ್ನು ನಂಬಬೇಡಿ. ಇದೊಂದು ಶೈಕ್ಷಣಿಕ ಕೇಂದ್ರ ಎಲ್ಲಿ ಹಿಡನ್ ಕ್ಯಾಮೆರಾ ಇರಲು ಸಾಧ್ಯವಿಲ್ಲ. ಪೊಲೀಸರ ಜೊತೆಗೆ ನಾವು ಮಾಹಿತಿ ಸಂಗ್ರಹ ಮಾಡುತ್ತಿದ್ದೇವೆ. ಪೊಲೀಸರ ಸಹಕಾರದೊಂದಿಗೆ ನಮ್ಮ ತನಿಖೆ ಮುಂದುವರಿಯಲಿದೆ ಎಂದು ಖುಷ್ಬು ಸಭೆಯ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು| ವಿದ್ಯಾರ್ಥಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಉಪನ್ಯಾಸಕನಿಗೆ ಜೀವಾವಧಿ ಶಿಕ್ಷೆ

Next Post

11 ಮಂದಿ ಮಹಿಳೆಯರು ಸೇರಿ ಖರೀದಿಸಿದ್ದ ಕೇರಳದ ಮಾನ್ಸೂನ್​ ಬಂಪರ್​ ಲಾಟರಿಗೆ ಜಾಕ್​ಪಾಟ್​! ರೂ.10 ಕೋಟಿ ಗೆದ್ದು ಕೋಟ್ಯಾಧೀಶರಾದ ಪೌರಕಾರ್ಮಿಕರು

Related Posts

ದೈವದ ಭಂಡಾರ ಮೆರವಣಿಗೆ ವೇಳೆ ಕುಸಿದ ಕಿರು ಸೇತುವೆ, ಪಲ್ಲಕ್ಕಿ ಹೊತ್ತಿದ್ದ ಎಂಟು ಮಂದಿ ತೀವ್ರ ಗಾಯ
ಕರಾವಳಿ

ದೈವದ ಭಂಡಾರ ಮೆರವಣಿಗೆ ವೇಳೆ ಕುಸಿದ ಕಿರು ಸೇತುವೆ, ಪಲ್ಲಕ್ಕಿ ಹೊತ್ತಿದ್ದ ಎಂಟು ಮಂದಿ ತೀವ್ರ ಗಾಯ

April 25, 2026
38
ಮಂಗಳೂರು: ಭಾರಿ ಗಾಳಿ-ಮಳೆಗೆ ಅಶ್ವತ್ಥ ಮರದ ಗೆಲ್ಲು ಮುರಿದು ಮನೆ, ವಾಹನಗಳಿಗೆ ಹಾನಿ, ಅತ್ತಾವರದಲ್ಲಿ ತಡೆಗೋಡೆ ಕುಸಿದು ಕಾರುಗಳು ಜಖಂ
ಕರಾವಳಿ

ಮಂಗಳೂರು: ಭಾರಿ ಗಾಳಿ-ಮಳೆಗೆ ಅಶ್ವತ್ಥ ಮರದ ಗೆಲ್ಲು ಮುರಿದು ಮನೆ, ವಾಹನಗಳಿಗೆ ಹಾನಿ, ಅತ್ತಾವರದಲ್ಲಿ ತಡೆಗೋಡೆ ಕುಸಿದು ಕಾರುಗಳು ಜಖಂ

April 22, 2026
60
Next Post
11 ಮಂದಿ ಮಹಿಳೆಯರು ಸೇರಿ ಖರೀದಿಸಿದ್ದ ಕೇರಳದ ಮಾನ್ಸೂನ್​ ಬಂಪರ್​ ಲಾಟರಿಗೆ ಜಾಕ್​ಪಾಟ್​! ರೂ.10 ಕೋಟಿ ಗೆದ್ದು ಕೋಟ್ಯಾಧೀಶರಾದ ಪೌರಕಾರ್ಮಿಕರು

11 ಮಂದಿ ಮಹಿಳೆಯರು ಸೇರಿ ಖರೀದಿಸಿದ್ದ ಕೇರಳದ ಮಾನ್ಸೂನ್​ ಬಂಪರ್​ ಲಾಟರಿಗೆ ಜಾಕ್​ಪಾಟ್​! ರೂ.10 ಕೋಟಿ ಗೆದ್ದು ಕೋಟ್ಯಾಧೀಶರಾದ ಪೌರಕಾರ್ಮಿಕರು

Discussion about this post

Recent News

ದೈವದ ಭಂಡಾರ ಮೆರವಣಿಗೆ ವೇಳೆ ಕುಸಿದ ಕಿರು ಸೇತುವೆ, ಪಲ್ಲಕ್ಕಿ ಹೊತ್ತಿದ್ದ ಎಂಟು ಮಂದಿ ತೀವ್ರ ಗಾಯ

ದೈವದ ಭಂಡಾರ ಮೆರವಣಿಗೆ ವೇಳೆ ಕುಸಿದ ಕಿರು ಸೇತುವೆ, ಪಲ್ಲಕ್ಕಿ ಹೊತ್ತಿದ್ದ ಎಂಟು ಮಂದಿ ತೀವ್ರ ಗಾಯ

April 25, 2026
38
ಬೆಳ್ತಂಗಡಿ ಐತಿಹಾಸಿಕ ಬಳಂಜ ಪಂಚಲಿಂಗೇಶ್ವರ ದೇಗುಲಕ್ಕೆ ನುಗ್ಗಿ ದಾಂಧಲೆ: ದೈವದ ಪರಿಕರಗಳನ್ನ ಚೆಲ್ಲಾಪಿಲ್ಲಿ ಮಾಡಿದ ಪದವೀಧರ

ಬೆಳ್ತಂಗಡಿ ಐತಿಹಾಸಿಕ ಬಳಂಜ ಪಂಚಲಿಂಗೇಶ್ವರ ದೇಗುಲಕ್ಕೆ ನುಗ್ಗಿ ದಾಂಧಲೆ: ದೈವದ ಪರಿಕರಗಳನ್ನ ಚೆಲ್ಲಾಪಿಲ್ಲಿ ಮಾಡಿದ ಪದವೀಧರ

April 24, 2026
59
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ದೈವದ ಭಂಡಾರ ಮೆರವಣಿಗೆ ವೇಳೆ ಕುಸಿದ ಕಿರು ಸೇತುವೆ, ಪಲ್ಲಕ್ಕಿ ಹೊತ್ತಿದ್ದ ಎಂಟು ಮಂದಿ ತೀವ್ರ ಗಾಯ

ದೈವದ ಭಂಡಾರ ಮೆರವಣಿಗೆ ವೇಳೆ ಕುಸಿದ ಕಿರು ಸೇತುವೆ, ಪಲ್ಲಕ್ಕಿ ಹೊತ್ತಿದ್ದ ಎಂಟು ಮಂದಿ ತೀವ್ರ ಗಾಯ

April 25, 2026
ಬೆಳ್ತಂಗಡಿ ಐತಿಹಾಸಿಕ ಬಳಂಜ ಪಂಚಲಿಂಗೇಶ್ವರ ದೇಗುಲಕ್ಕೆ ನುಗ್ಗಿ ದಾಂಧಲೆ: ದೈವದ ಪರಿಕರಗಳನ್ನ ಚೆಲ್ಲಾಪಿಲ್ಲಿ ಮಾಡಿದ ಪದವೀಧರ

ಬೆಳ್ತಂಗಡಿ ಐತಿಹಾಸಿಕ ಬಳಂಜ ಪಂಚಲಿಂಗೇಶ್ವರ ದೇಗುಲಕ್ಕೆ ನುಗ್ಗಿ ದಾಂಧಲೆ: ದೈವದ ಪರಿಕರಗಳನ್ನ ಚೆಲ್ಲಾಪಿಲ್ಲಿ ಮಾಡಿದ ಪದವೀಧರ

April 24, 2026
ಮಂಗಳೂರು: ಭಾರಿ ಗಾಳಿ-ಮಳೆಗೆ ಅಶ್ವತ್ಥ ಮರದ ಗೆಲ್ಲು ಮುರಿದು ಮನೆ, ವಾಹನಗಳಿಗೆ ಹಾನಿ, ಅತ್ತಾವರದಲ್ಲಿ ತಡೆಗೋಡೆ ಕುಸಿದು ಕಾರುಗಳು ಜಖಂ

ಮಂಗಳೂರು: ಭಾರಿ ಗಾಳಿ-ಮಳೆಗೆ ಅಶ್ವತ್ಥ ಮರದ ಗೆಲ್ಲು ಮುರಿದು ಮನೆ, ವಾಹನಗಳಿಗೆ ಹಾನಿ, ಅತ್ತಾವರದಲ್ಲಿ ತಡೆಗೋಡೆ ಕುಸಿದು ಕಾರುಗಳು ಜಖಂ

April 22, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d