ಪುತ್ತೂರು, ಆಗಸ್ಟ್ 27:ಕಡಬ ತಾಲೂಕಿನ ಕಳಾರ ಎಂಬಲ್ಲಿ ಮನೆ ಹಿಂಬದಿಯ ಶೆಡ್ ನಲ್ಲಿ ದನದ ಕರುವನ್ನು ಕಡಿದು ಮಾಂಸ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ಕಡಬ ಪೊಲೀಸರು ದಾಳಿ ನಡೆಸಿದ್ದು, ಒರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಮಹಮ್ಮದ್ ಇಸ್ಮಾಯಿಲ್ ಎಂಬವರ ಪಾಳು ಬಿದ್ದ ಮನೆ ಹಿಂಬದಿಯ ಶೆಡ್ ನಲ್ಲಿ ಇಂದು ಬೆಳಗ್ಗೆ ಅಕ್ರಮವಾಗಿ ಗೋವುಗಳನ್ನು ಕಡಿದು ಮಾಂಸ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ದೊರೆತು ಪೊಲೀಸರು ದಾಳಿ ನಡೆಸಿದ್ದು ಅಲ್ಲಿದ್ದ ಮೂವರು ವ್ಯಕ್ತಿಗಳು ಓಡಿ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ, ಅಬ್ದುಲ್ ರಹಿಮಾನ್ ಎಂಬಾತನನ್ನು ಬೆನ್ನಟ್ಟಿ ಹಿಡಿದು ಬಂಧಿಸಿದ್ದಾರೆ.
ಪರವಾನಿಗೆ ರಹಿತವಾಗಿ ಹಾಗೂ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಈ ಕಸಾಯಿಖಾನೆಯಲ್ಲಿ ಪ್ಲಾಸ್ಟೀಕ್ ಟಾರ್ಪಾಲಿನಲ್ಲಿದ್ದ ಸುಮಾರು 40 ಕೆ.ಜಿ ಯಷ್ಟು ದನದ ಮಾಂಸ, ದನದ ನಾಲ್ಕು ಕಾಲುಗಳು (ಕಳೆಬರಹ), ಎಲೆಕ್ಟ್ರಾನಿಕ್ ತೂಕಮಾಪನ-01, ಕಬ್ಬಿಣದ ಸತ್ತಾರ್ ಕತ್ತಿಗಳು-02,ಕಬ್ಬಿಣದ ಚೂರಿಗಳು-03, ಕಾಟು ಮರದ ತುಂಡು-01, ಶೆಡ್ ನ ಹೊರಗಡೆ ಕಟ್ಟಿ ಹಾಕಿದ್ದ ನಾಲ್ಕು ದನದ ಕರುಗಳನ್ನು ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಂಡ ವಧೆ ಮಾಡಿದ ದನ ಕರುವಿನ ಮಾಂಸ ಹಾಗೂ ಜೀವಂತ ದನದ ಕರುಗಳ ಮೌಲ್ಯ 19.500/- ಆಗಬಹುದು ಎಂದು ಅಂದಾಜಿಸಲಾಗಿದೆ.