ಮಂಗಳೂರು: ನಗರದ ಕೋಡಿಕಲ್ ಮತ್ತು ಕೂಳೂರಿನಲ್ಲಿ ನಡೆದ ನಾಗಬನ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 8 ಮಂದಿಯನ್ನು ಪೊಲೀಸರು ಬಂಧಿಸಿದ್ದು , ಕಾವೂರು ನಿವಾಸಿ ಸಫ್ವಾನ್ , ಮೊಹಮ್ಮದ್ ಸುಹೈಲ್ , ಪ್ರವೀಣ್ ಅನಿಲ್ ಮೊಂತೇರೊ, ನಿಖಿಲೇಶ್, ಸುರತ್ಕಲ್ ನ ಜಯಂತ್ ಕುಮಾರ್, ಬಂಟ್ವಾಳದ ಪ್ರತೀಕ್, ಬೇಲೂರಿನ ಮಂಜುನಾಥ್ , ಹಾಸನ ನಿವಾಸಿ ನೌಷಾದ್ ಬಂಧಿತ ಆರೋಪಿಗಳು.
ಪ್ರವೀಣ್ ಮೊಂತೇರೊ ಈ ಹಿಂದೆ ಡಕಾಯಿತಿ, ದರೋಡೆ ಪ್ರಕರಣ ಎದುರಿಸುತ್ತಿದ್ದ ಆರೋಪಿಯಾಗಿದ್ದ. ಆರೋಪಿಗಳು ಜೈಲಿನಲ್ಲಿದ್ದ ವೇಳೆ ಇವರ ನಡುವೆ ಸಂಪರ್ಕ ಆಗಿದ್ದರು. ಸರಗಳ್ಳತನದ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದ ಇಶಾನ್, ಅಚ್ಚಿ ಎಂಬವರ ಸೂಚನೆಯಂತೆ ಕೃತ್ಯಕ್ಕೆ ಸಂಚು ಹೆಣೆಯಲಾಗಿತ್ತು.
ಕಾವೂರಿನ ಸಫಾನ್ ಮತ್ತು ಸೊಹೇಲ್ ಸೇರಿಕೊಂಡು ಹಿಂದುಗಳ ಭಾವನೆಗೆ ಧಕ್ಕೆ ತರುವುದಕ್ಕಾಗಿ ನಾಗಬನ ಸೇರಿ, ಧಾರ್ಮಿಕ ಕೇಂದ್ರಗಳ ಅಪವಿತ್ರಗೊಳಿಸಲು ಸಂಚು ನಡೆಸಿದ್ದರು. ಸಫ್ವಾನ್ ತನ್ನ ಸ್ನೇಹಿತ ಪ್ರವೀಣ್ ಮೊಂತೇರೊ ಮೂಲಕ ಹತ್ತು ಸಾವಿರಕ್ಕೆ ಡೀಲ್ ಮಾಡಿದ್ದರು. ಹಣ ಪಡೆದು ಕುಳೂರು ಮತ್ತು ಕೋಡಿಕಲ್ ನಾಗಬನಕ್ಕೆ ಹಾನಿ ಎಸಗಿದ್ದಾಗಿ ಒಪ್ಪಿಕೊಂಡಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಆರೋಪಿಗಳನ್ನು ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುವುದು. ಈ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವುದು ಗಮನಕ್ಕೆ ಬಂದಿದೆ. ಅವರ ಪತ್ತೆಗೂ ಕಾರ್ಯಾಚರಣೆ ಮುಂದುವರಿದಿದೆ ಎಂದರು.
ಸರ ಕಳ್ಳತನ ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿದ್ದು ಬೇಲ್ ಮೂಲಕ ಹೊರ ಬಂದಿರುವ ಇರ್ಷಾದ್ ಮತ್ತು ಅಚ್ಚಿ ಎಂಬ ಆರೋಪಿಗಳು ಪ್ರಕರಣದ ಮೂಲ ಸೂತ್ರದಾರರು. ನಗರದಲ್ಲಿ ಕಳ್ಳತನಕ್ಕೆ ಪೊಲೀಸರು ಅಡ್ಡಿಯಾಗುತ್ತಿದ್ದು, ಪೊಲೀಸರ ಗಮನ ಬೇರಡೆ ಸೆಳೆಯಲು ಸಂಚು ರೂಪಿಸಿದ್ದರು. ಇದನ್ನು ತಮ್ಮ ಬಳಗದ ಸಫ್ವಾನ್ ಕಾವೂರು ಗಮನಕ್ಕೆ ತಂದಿದ್ದರು. ಸಫ್ವಾನ್ ತಂಡದವರು ಸೇರಿಕೊಂಡು ಧಾರ್ಮಿಕ ಕೇಂದ್ರಗಳನ್ನು ಅಪವಿತ್ರಗೊಳಿಸಿದರೆ ಪೊಲೀಸರ ಗಮನ ಆ ಕಡೆ ಹೋಗುತ್ತೆ ಎಂದು ನಾಗಬನ ಧ್ವಂಸ ಕೃತ್ಯ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಈ ಮಾಹಿತಿ ನೀಡಿದ್ದಾರೆ. ಇನ್ನಷ್ಟು ವಿಚಾರಣೆ ನಟೆಯುತ್ತಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಆರೋಪಿಗಳ ಪತ್ತೆಗೆ 40 ಮಂದಿಯನ್ನು ಒಳಗೊಂಡ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂದಿಸಿದೆ. ಉಳಿದ ಆರೋಪಿಗಳನ್ನು ಕೂಡ ಶೀಘ್ರ ಬಂಧಿಸಲಾಗುವುದು ಎಂದವರು ತಿಳಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post