ಉಳ್ಳಾಲ, ಡಿ 27 : ಕೋಟೆಕಾರು ಪಟ್ಟಣ ಪಂಚಾಯಿತಿ ಚುನಾವಣೆಗೆ ಇಂದು ಬೆಳಗ್ಗೆಯಿಂದ ಚುನಾವಣೆ ಅರಂಭಗೊಂಡಿದ್ದು, 17 ವಾರ್ಡುಗಳಿಗೆ 18 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ.
17 ವಾರ್ಡುಗಳಿಗೆ 18 ಮತಗಟ್ಟೆಗಳಲ್ಲಿ ನಡೆಯುತ್ತಿರುವ ಚುನಾವಣೆ 1-2 ವಾರ್ಡಿಗೆ ಕೋಟೆಕಾರು ಪ.ಪಂ ಕಚೇರಿ, 2-3 ಮಾಡೂರು ಸರಕಾರಿ ಶಾಲೆ, 4-5 ಅಸಿಸಿ ಶಾಲೆ ಬಗಂಬಿಲ,5-6 ಸರಕಾರಿ ಹಿ.ಪ್ರಾ ಶಾಲೆ ಬಗಂಬಿಲ , 7-8 ಸರಕಾರಿ ಪ್ರೌಢ ಶಾಲೆ ಕೋಟೆಕಾರು, 9-10 ಸರಕಾರಿ ಕಿರಿಯ ಪ್ರಾ ಥಮಿಕ ಶಾಲೆ ಮಾಡೂರು, 11,11A ಸರಕಾರಿ ಪ್ರಾಥಮಿಕ ಶಾಲೆ ಪಾನೀರು, 12 ಕಣಚೂರು ಶಿಕ್ಷಣ ಸಂಸ್ಥೆ, 13 ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪನೀರು, 14-15 ಮರ್ಕಝ್ ಅರೆಬಿಕ್ ಶಾಲೆ ಅಜ್ಜಿನಡ್ಕ, 16-17 ಅಜ್ಜಿನಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ.
ಈ ನಡುವೆ ಮತದಾರ ಪಟ್ಟಿಯಲ್ಲಿ ಖಾಸಗಿ ಕಾಲೇಜುಗಳ ಕೇರಳದ ವಿದ್ಯಾರ್ಥಿಗಳ ಹೆಸರುಗಳು ಇದೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದು ಈ ಹಿನ್ನಲೆಯಲ್ಲಿಮತಗಟ್ಟೆ ಸಂಖ್ಯೆ 5,6 ರಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ವಿದ್ಯಾರ್ಥಿಗಳು ಮತ ಚಲಾವಣೆಗೆ ಬಂದಲ್ಲಿ ಗ್ರಾಮಸ್ಥರಿಂದ ತಡೆಯೊಡ್ಡುವ ಎಚ್ಚರಿಕೆ ನೀಡಿದ್ದಾರೆ . ಮುನ್ನೆಚ್ಚರಿಕೆ ಕ್ರಮವಾಗಿನಿನ್ನೆಯೂ ತಹಸೀಲ್ದಾರ್ ಭೇಟಿ ಮಾಡಿ ಮತಗಟ್ಟೆ ಪರಿಶೀಲನೆ ನಡೆಸಿದ್ದರು.