ಮಂಗಳೂರು : ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಆಶ್ರಯ ದಲ್ಲಿ ರಾಣಿ ಪುಷ್ಪಲತಾ ದೇವಿ ಸಾರಥ್ಯದಲ್ಲಿ ಕನ್ನಡದ ಅದ್ವಿತೀಯ ಪ್ರೇಮ ಕವಿ ಶ್ರೀ ಕೆ.ಎಸ್.ನರಸಿಂಹಸ್ವಾಮಿ ಜನ್ಮದಿನದ ಅಂಗವಾಗಿ “ಮಲ್ಲಿಗೆ ಕಂಪು, ವಿಚಾರ ಗೋಷ್ಠಿ ಮತ್ತು ಕವಿಗೋಷ್ಟಿ ನಗರದ ಮಹಿಳಾ ಪದವಿಪೂರ್ವ ಕಾಲೇಜಿನ ಸರಸ್ವತಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕನ್ನಡ ಕಟ್ಟೆ ಅಧ್ಯಕ್ಷ ಡಾ.ಎಂ.ಅಣ್ಣಯ್ಯ ಕುಲಾಲ್ ಉಲ್ತೂರು ಮಾತನಾಡಿ ” ಅನೇಕರು ಪ್ರಾಸ ಇರಬೇಕು ಎಂಬ ಕಾರಣಕ್ಕೆ ಏನೆಲ್ಲಾ ಶಬ್ದಗಳನ್ನು ಬಳಸಿ ಕವನಗಳನ್ನು ಕಟ್ಟುತ್ತಾರೆ ಆದ್ರೆ ಕವನಗಳು ಮನಸ್ಸಿನ ಭಾವನೆಯಿಂದ ಹುಟ್ಟಬೇಕು ಆಗ ಮಲ್ಲಿಗೆ ಕಂಪಿನಂತ ಸಾಹಿತ್ಯ ಪ್ರಕಾರ ಸಾದ್ಯ” ಎಂದು ಹೇಳಿದ ಅವರು ಕೆ.ಎಸ್.ನರಸಿಂಹಸ್ವಾಮಿ ತನ್ನ ಹೃದಯದ ಭಾವನೆಗಳಿಗೆ ಅಕ್ಷರ ರೂಪ ನೀಡಿರುದರಿಂದ ಇಂದಿಗೂ ಎಂದಿಂದಿಗೂ ಮೈಸೂರು ಮಲ್ಲಿಗೆ ಕಂಪು ಜೀವಂತವಾಗಿ ಇರುತ್ತದೆ ಎಂದು ಹೇಳಿದರು.
ಉಪನ್ಯಾಸಕ ಮತ್ತು ಕವಿ ಡೊಂಬ್ಬಯ್ಯ ಇಡ್ಕಿದು ಮಾತನಾಡಿ ಕೆ.ಎಸ್.ನರಸಿಂಹಸ್ವಾಮಿಯವರದು ಪ್ರೇಮ ಗೀತೆ ಅಲ್ಲ. ದಾಂಪತ್ಯ ಗೀತೆ ಪ್ರೇಮದ ಚಿತ್ರಣವನ್ನು ಆದರ್ಶಿ ಕರಿಸಿರುವ ಜತೆಗೆ ಮನುಷ್ಯ ಸಹಜ ಭಾವನೆಗಳ ಬೆಲೆಯನ್ನು ಎತ್ತಿ ವಹಿಡಿದ ಶ್ರೇಯಸ್ಸು ಅವರದು. ಅವರ ಪ್ರಕಾರ ಬದುಕಿನಲ್ಲಿ ಇರುವುದು ಸುಖವೊಂದೆ. ದುಖ ಎಂಬುವುದಿಲ್ಲ ಎಂಬುದು ಅವರ ನಿಲುವು. ಅವರ ಕವನಗಳು ಸಮಾಜದ ಕೌಟುಂಬಿಕ ಜೀವನದಲ್ಲಿ ಆದ ಮುಖ್ಯ ಬದಲಾವಣೆ ಯನ್ನು ಸೂಚಿಸುತ್ತದೆ ಎಂದರು.
ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸತ್ವ ತತ್ವ ಭರಿತವಾಗಿ ಕವನ ಹುಟ್ಟುವ ಬಗೆಯ ವಿಶ್ಲೇಷಣೆ ಮಾಡುತ್ತಾ ಕವನ ಹುಟ್ಟದೇ ಬರೆಯಲಾಗದು. ಕಥೆ ಕಟ್ಟದೇ ಹುಟ್ಟಲಾರದು ಎಂದರು. ಕವಿಗಳ ಕವನದ ಸಾಧಕ ಬಾಧಕ ಚುಟುಕು ವಿಮರ್ಶೆ ಮಾಡಿದ ಚಿದಂಬರ ಬೈಕಂಪಾಡಿ ಕವಿಗಳಿಗೆ ಉತ್ತಮ ಮಾರ್ಗದರ್ಶನ ಮಾಡಿದರು.
ಡಾ. ಸುರೇಶ್ ನೆಗಳಗುಳಿ, ಎನ್ಎಸ್.ಸಿ.ಡಿ.ಎಫ್ ಅಧ್ಯಕ್ಷ ಗಂಗಾಧರ್ ಗಾಂಧಿ, ಕವಿಗೋಷ್ಠಿಯ ಸಂಚಾಲಕಿ ಶಾಂತ ಪುತ್ತೂರು, ಪಿ.ವಿ.ಪ್ರದೀಪ್ ಕುಮಾರ್ ಹಾಗೂ ಖ್ಯಾತ ಸಾಹಿತಿ ಲಕ್ಷಣ್ ರಾವ್ ಉಪಸ್ಥಿತರಿದ್ದರು. ಕೆಎಸ್ಎಸ್ಎಪಿ ಅಧ್ಯಕ್ಷೆ ರಾಣಿ ಪುಷ್ಪಲತಾದೇವಿ ಸ್ವಾಗತಿಸಿದರು.
ಕವಿಗಳಾದ ಡಾ, ವಾಣಿಶ್ರೀ ಕಾಸರಗೋಡು, ಗೀತಾ ಲಕ್ಷ್ಮೀಶ, ವಾಣಿ ಲೋಕಯ್ಯ, ರೇಮಂಡ್ ಡಿ ಕೂನ ತಾಕೊಡೆ, ಹಿತೇಶ್ ಕುಮಾರ್, ಕಾಸರಗೋಡು, ರೇಖಾ ಸುದೇಶ ರಾವ್, ಸೌಮ್ಯಾಗೋಪಾಲ್, ಶಿವರಾಜ್ ದೇವರ ಗುಡಿ, ಗೋಪಾಲಕೃಷ್ಣ ಶಾಸ್ತ್ರಿ, ಪ್ರೇಮಾ ಮುಲ್ಕಿ, ತಲ್ಲೂರು ಶರಣ, ಉಮೇಶ್ ಶಿರಿಯಾ, ದಿಯಾ ಉದಯ್ ಡಿ.ಯು, ಮರವಂತೆ ಪ್ರಕಾಶ ಪಡಿಯಾರ, ಅನುರಾಧಾ ರಾಜೀವ್ ಸುರತ್ಕಲ್, ಗುರುರಾಜ್ ಎಂ ಆರ್, ನವೀನ ಕುಲಾಲ್ ಚಿಪ್ಪಾರು, ಕು .ಸುಹಾನ ಸಯ್ಯದ್, ಬದ್ರುದ್ದೀನ್ ಕುಳೂರು, ಸೌಮ್ಯಾ ಆರ್ ಶೆಟ್ಟಿ, ಮಾನಸ ಪ್ರವೀಣ್ ಮೂಡು ಬಿದಿರೆ, ಮಹಮ್ಮದ್ ಮನ್ಸೂರ್ ಮುಲ್ಕಿ, ಬಾಲಕೃಷ್ಣ ಕೇಪುಳು, ಜಯಾನಂದ ಪೆರಾಜೆ, ಸುಮಂಗಳಾ ದಿನೇಶ್ ಶೆಟ್ಟಿ ಕುಂಪಲ, ಜಯಲಕ್ಷ್ಮಿ ಶರತ್ ಶೆಟ್ಟಿ ಕತ್ತರಿಕೋಡಿ, ಉಮೇಶ ಕಾರಂತ, ಲತೀಶ್ ಎಂ ಸಂಕೊಲಿಗೆ, ಸಂಭ್ರಮ ಕರ‍್ತಿಕ್ ಭಟ್, ಸೋಮಲಿಂಗ ಎಚ್ ಹಿಪ್ಪರಗಿ, ಮನೋಜ್ ಕುಮಾರ್ ಶಿರ‍್ಲ, ಶಿವಪ್ರಸಾದ್ ಕೊಕ್ಜಡ, ನಾರಾಯಣ ಕುಂಬ್ರ, ವಿಂಧ್ಯಾ ಎಸ್ ರೈ, ಗಳಿಂದ ಕವನ ವಾಚನ ನಡೆದುವು. ರಶ್ಮಿ ಸನಿಲ್ ರವರು ಕರ‍್ಯಕ್ರಮ ನಿರೂಪಿಸಿದರು. ಬಳಿಕ ಸಕಲ ಕವಿಗಳಿಗೂ ಅಭಿನಂದನಾ ಪತ್ರ ಸಹಿತ ಕೃತಿ ಗಳನ್ನು ನೀಡಲಾಯಿತು.
Discover more from Coastal Times Kannada
Subscribe to get the latest posts sent to your email.
Discussion about this post