ಉಡುಪಿ, ಜ 28 : ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆಗೆ ಪೊಲೀಸರು ದಾಳಿ ನಡೆಸಿ ನಾಲ್ವರು ಪುರುಷರನ್ನು ಬಂಧಿಸಿ ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಿರುವ ಘಟನೆ ನಡೆದಿದೆ.
ಬಂಧಿತರನ್ನು ಲಾಡ್ಜ್ ಕ್ಯಾಶಿಯರ್ ಗುರುರಾಜ್ (30), ವಿಜಯ್ ಶೆಟ್ಟಿ (26) ಮತ್ತು ಗ್ರಾಹಕರಾಗಿ ಬಂದಿದ್ದ ಹೇಮಂತ್ ಕುಮಾರ್ (24), ಸಂದೀಪ್ (31) ಎಂದು ಗುರುತಿಸಲಾಗಿದೆ.ಉಡುಪಿಯ ಹೃದಯಭಾಗದಲ್ಲಿರುವ ಸರ್ವಿಸ್ ಬಸ್ ನಿಲ್ದಾಣದ ಸಂಕೀರ್ಣದಲ್ಲಿರುವ ಯಾತ್ರಿ ನಿವಾಸದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದಾಗಿ ಮಾಹಿತಿ ತಿಳಿದ ತಕ್ಷಣ ಉಡುಪಿ ಮಹಿಳಾ ಪೋಲಿಸ್ ಠಾಣಾ ಉಪನೀರೀಕ್ಷಕ ಜಯಂತ್ ಎಂ, ಉಡುಪಿ ನಗರ ಠಾಣಾ ನಿರೀಕ್ಷಕ ಪ್ರಮೊದ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.ಸ್ಥಳದಲ್ಲಿದ್ದ 5 ಮೊಬೈಲ್, 2,850 ನಗದು ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಇನ್ನು ಲಾಡ್ಜ್ ಮಾಲೀಕ ರಮೇಶ್ ಶೆಟ್ಟಿ, ಗುರುರಾಜ್, ವಿಜಯ್ ಶೆಟ್ಟಿ, ಹೇಮಂತ್ ಕುಮಾರ್, ಸಂದೀಪ್ ಮೊಗವೀರ ಮೇಲೆ ಉಡುಪಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post