ಬಾಲಿವುಡ್ ನಟಿ ಮೌನಿ ರಾಯ್ ಮತ್ತು ಉದ್ಯಮಿ ಸೂರಜ್ ನಂಬಿಯಾರ್ ಇಂದು ಗೋವಾದಲ್ಲಿ ವಿವಾಹ ಜೀವನಕ್ಕೆ ಕಾಲಿರಿಸಿದ್ದಾರೆ. ಇವರ ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಮೌನಿರಾಯ್ ಹಾಗೂ ಬಹುಕಾಲದ ಗೆಳೆಯ ಸೂರಜ್ ನಂಬಿಯಾರ್ ಅವರು ಮಲಯಾಳಿ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದಾರೆ. ಇದಾದ ನಂತರ ಸಂಜೆ ಬೆಂಗಾಲಿ ಮದುವೆ ನಡೆಯಲಿದೆ.

ಮೌನಿ ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಮೂಲದವರು. ಮತ್ತೊಂದೆಡೆ, ಸೂರಜ್ ದುಬೈನಲ್ಲಿ ಬ್ಯಾಂಕರ್ ಮತ್ತು ಉದ್ಯಮಿ, ಅವರು ಬೆಂಗಳೂರಿನ ಜೈನ ಕುಟುಂಬಕ್ಕೆ ಸೇರಿದವರು

ಮೌನಿ ಬಿಳಿ ಹಾಗೂ ಕೆಮಪು ಬಾರ್ಡರ್ ಸೀರೆ, ಒಡವೆ ತೊಟ್ಟು ಕಂಗೊಳಿಸಿದರೆ, ಸೂರಜ್ ಕ್ರಿಮ್ ಬಣ್ಣದ ಕುರ್ತಾ ಮತ್ತು ಬಿಳಿ ಪಂಚೆಯಲ್ಲಿ ಮಿಂಚಿದರು. ಮೌನಿ ಈಗಾಗಲೇ ತಮ್ಮ ವಿವಾಹದ ಫೋಟೋಗಳನ್ನು ಇನ್‌ಸ್ಟಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ.

